ಜರ್ಮನಿ, ರಷ್ಯಾಗಿಂತಲೂ ಭಾರತದಲ್ಲಿ ಹೆಚ್ಚು ಕುಬೇರರು; ಪಾಕಿಸ್ತಾನದಲ್ಲಿ ಇರೋರೇ ನಾಲ್ವರು ಬಿಲಿಯನೇರ್ಸ್; ಇಲ್ಲಿದೆ ದೇಶವಾರು ಪಟ್ಟಿ

Billionaires list of countries: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ಅತಿಹೆಚ್ಚು ಬಿಲಿಯನೇರ್​ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ ಬಿಟ್ಟರೆ ಅತಿಹೆಚ್ಚು ಕುಬೇರರು ಇರುವುದು ಭಾರತದಲ್ಲೇ. ಪಾಕಿಸ್ತಾನದಲ್ಲಿ ಕೇವಲ ನಾಲ್ವರು ಮಾತ್ರವೇ ಬಿಲಿಯನೇರ್ಸ್ ಎನಿಸಿರುವುದು.

ಜರ್ಮನಿ, ರಷ್ಯಾಗಿಂತಲೂ ಭಾರತದಲ್ಲಿ ಹೆಚ್ಚು ಕುಬೇರರು; ಪಾಕಿಸ್ತಾನದಲ್ಲಿ ಇರೋರೇ ನಾಲ್ವರು ಬಿಲಿಯನೇರ್ಸ್; ಇಲ್ಲಿದೆ ದೇಶವಾರು ಪಟ್ಟಿ
ಬಿಲಿಯನೇರ್​ಗಳು
Follow us
|

Updated on: Jul 08, 2024 | 6:37 PM

ನವದೆಹಲಿ, ಜುಲೈ 8: ಅತಿಹೆಚ್ಚು ಬಿಲಿಯನೇರ್​ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಜಿಡಿಪಿಯಲ್ಲಿ ಮೇಲಿರುವ ಜರ್ಮನಿ ಮತ್ತು ಜಪಾನ್ ದೇಶದಲ್ಲಿ ಕುಬೇರರ ಸಂಖ್ಯೆ ಕಡಿಮೆ ಇದೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಜಪಾನ್ ದೇಶವು ಬಿಲಿಯನೇರ್​ಗಳ ಸಂಖ್ಯೆಯಲ್ಲಿ 16ನೇ ಸ್ಥಾನದಲ್ಲಿದೆ. ನಿರೀಕ್ಷೆಯಲ್ಲಿ ಅಮೆರಿಕದಲ್ಲಿ ಅತಿಹೆಚ್ಚು ಬಿಲಿಯನೇರ್​ಗಳಿದ್ದಾರೆ. ಅಮೆರಿಕದಲ್ಲಿನ ಅರ್ಧದಷ್ಟು ಬಿಲಿಯನೇರ್​ಗಳು ಚೀನಾದಲ್ಲಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ 200 ಮಂದಿ ಬಿಲಿಯನೇರ್ಸ್ ಇದ್ದಾರೆ. ಅಮೆರಿಕ ಮತ್ತು ಚೀನಾದಲ್ಲಿ ಕ್ರಮವಾಗಿ 813 ಮತ್ತು 406 ಬಿಲಿಯನೇರ್ಸ್ ಇದ್ದಾರೆ.

ನೂರಕ್ಕಿಂತ ಹೆಚ್ಚು ಬಿಲಿಯನೇರ್ಸ್ ಹೊಂದಿರುವ ದೇಶಗಳ ಸಂಖ್ಯೆ ಐದು ಮಾತ್ರ. ಈ ಐವರ ಪಟ್ಟಿಯಲ್ಲಿ ಜರ್ಮನಿ ಮತ್ತು ರಷ್ಯಾ ಸೇರಿವೆ. ಅಭಿವೃದ್ಧಿಶೀಲ ದೇಶಗಳ ಪೈಕಿ ಅತಿ ಹೆಚ್ಚು ಕುಬೇರರು ಇರುವುದು ಚೀನಾ ಮತ್ತು ಭಾರತದಲ್ಲೇ. ಬ್ರೆಜಿಲ್ ದೇಶದಲ್ಲಿ 69 ಬಿಲಿಯನೇರ್ಸ್ ಇದ್ದು ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್​ನ ಎಕ್ಸ್ ಅಕೌಂಟ್​ನಲ್ಲಿ ಟಾಪ್ 40 ಪಟ್ಟಿ ಪ್ರಕಟವಾಗಿದೆ.

ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಸರೆಂಡರ್ ಮಾಡಬೇಕೆನ್ನುವವರ ಗಮನಕ್ಕೆ; ಎಲಿಪ್ ಸ್ಕೀಮ್ ಬಗ್ಗೆ ತಿಳಿಯಿರಿ

ಅತಿಹೆಚ್ಚು ಬಿಲಿಯನೇರ್ಸ್ ಇರುವ ದೇಶಗಳು

  1. ಅಮೆರಿಕ: 813
  2. ಚೀನಾ: 406
  3. ಭಾರತ: 200
  4. ಜರ್ಮನಿ: 132
  5. ರಷ್ಯಾ: 120
  6. ಇಟಲಿ: 73
  7. ಬ್ರೆಜಿಲ್: 69
  8. ಹಾಂಕಾಂಗ್: 67
  9. ಕೆನಡಾ: 67
  10. ಬ್ರಿಟನ್: 55
  11. ಫ್ರಾನ್ಸ್: 53
  12. ತೈವಾನ್: 51
  13. ಆಸ್ಟ್ರೇಲಿಯಾ: 48
  14. ಸ್ವೀಡನ್: 43
  15. ಸ್ವಿಟ್ಜರ್​ಲ್ಯಾಂಡ್: 41
  16. ಜಪಾನ್: 41
  17. ಸಿಂಗಾಪುರ್: 39
  18. ಇಸ್ರೇಲ್: 36
  19. ಸೌತ್ ಕೊರಿಯಾ: 36
  20. ಇಂಡೋನೇಷ್ಯಾ: 35
  21. ಸ್ಪೇನ್: 29
  22. ಟರ್ಕಿಯೆ: 27
  23. ಥಾಯ್ಲೆಂಡ್: 26
  24. ಮೆಕ್ಸಿಕೋ: 22
  25. ಮಲೇಷ್ಯಾ: 17
  26. ಫಿಲಿಪ್ಪೈನ್ಸ್: 16
  27. ನೆದರ್​ಲ್ಯಾಂಡ್ಸ್: 14
  28. ನಾರ್ವೆ: 12
  29. ಚೆಕ್ ರಿಪಬ್ಲಿಕ್: 11
  30. ಐರ್ಲೆಂಡ್: 11
  31. ಸೈಪ್ರಸ್: 10
  32. ಗ್ರೀಸ್: 10
  33. ಬೆಲ್ಜಿಯಂ: 10
  34. ಆಸ್ಟ್ರಿಯಾ: 9
  35. ಡೆನ್ಮಾರ್ಕ್: 9
  36. ಪೋಲ್ಯಾಂಡ್: 8
  37. ಫಿನ್​ಲ್ಯಾಂಡ್: 7
  38. ಚಿಲಿ: 6
  39. ಕಜಕಸ್ತಾನ್: 6
  40. ವಿಯೆಟ್ನಾಂ: 6

ಇದನ್ನೂ ಓದಿ: ಜೂನ್​ನಲ್ಲಿ 42.4 ಲಕ್ಷ ಹೊಸ ಡೀಮ್ಯಾಟ್ ಖಾತೆ ರಚನೆ; ಷೇರುಪೇಟೆಯತ್ತ ಮುಗಿಬಿದ್ದ ಹೊಸಬರು

ಪಾಕಿಸ್ತಾನದಲ್ಲಿ ನಾಲ್ವರು ಬಿಲಿಯನೇರ್​ಗಳು

ದಕ್ಷಿಣ ಏಷ್ಯನ್ ಭಾಗದಲ್ಲಿ ಭಾರತ ಬಿಟ್ಟರೆ ಹೆಚ್ಚು ಬಿಲಿಯನೇರ್​ಗಳಿರುವುದು ಪಾಕಿಸ್ತಾನದಲ್ಲೇ. ಭಾರತದಲ್ಲಿ 200 ಇದ್ದರೆ ಪಾಕಿಸ್ತಾನದಲ್ಲಿ ಇರುವುದು ನಾಲ್ವರೇ. ಶಾಹಿದ್ ಖಾನ್ 11.6 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಪಾಕಿಸ್ತಾನದ ಅತಿ ಶ್ರೀಮಂತ ಎನಿಸಿದ್ದಾರೆ. ಮಿಯಾನ್ ಮುಹಮ್ಮದ್ ಮನ್​ಶಾ, ಅನ್ವರ್ ಪರ್ವೆಜ್ ಮತ್ತು ನಾಸಿರ್ ಶೋನ್ ಅವರು ಇತರ ಮೂವರು ಬಿಲಿಯನೇರ್ಸ್ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು