ಮುಂಬೈ: ಹೊಸ ವರ್ಷದ ಎರಡನೇ ಐಪಿಒ ಆಗಿ ಇಂಡಿಗೊ ಪೇಂಟ್ಸ್ ಮಾರುಕಟ್ಟೆಗೆ ಕಾಲಿಡುತ್ತಿದೆ. ಜನವರಿ 20ರಿಂದ ಸಾರ್ವಜನಿಕರು ಈ ಐಪಿಒಗೆ ಬಿಡ್ ಮಾಡಬಹುದಾಗಿದೆ.
1,170 ಕೋಟಿ ರೂಪಾಯಿ ಮೌಲ್ಯದ ಐಪಿಒ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ. ಈ ಷೇರಿನ ಬ್ಯಾಂಡ್ 1488-1490 ರೂಪಾಯಿ ಇದೆ. ಕನಿಷ್ಠ ಬಿಡ್ ಮೊತ್ತ 10 ಷೇರು (1ಲಾಟ್) ಇರಲಿದೆ. ಜನವರಿ 20ಕ್ಕೆ ಬಿಡ್ಡಿಂಗ್ ಆರಂಭವಾದರೆ, ಜನವರಿ 22ರಂದು ಬಿಡ್ಡಿಂಗ್ ಪೂರ್ಣಗೊಳ್ಳಲಿದೆ.
ಭಾರತದ ಪ್ರಮುಖ ಪೇಂಟ್ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.
ಇಂಡಿಗೊ ಪೇಂಟ್ಸ್ ವಿವಿಧ ಮಾದರಿಯ ಪೇಂಟ್ ತಯಾರಿಕೆ ಮಾಡುತ್ತದೆ. ಭಾರತದ ಪೇಂಟ್ ತಯಾರಿಕಾ ಕಂಪೆನಿಗಳ ಪೈಕಿ ಇಂಡಿಗೋ ಪೇಂಟ್ಸ್ ಐದನೇ ಸ್ಥಾನದಲ್ಲಿದೆ. ಪೇಂಟ್ಗೆ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು ಎಲ್ಲಿ ಸಿಗಲಿದೆಯೋ ಅಲ್ಲಿಯೇ ಈ ಸಂಸ್ಥೆ ಘಟಕ ಸ್ಥಾಪನೆ ಮಾಡಿದೆ. ಹೀಗಾಗಿ, ಸಂಸ್ಥೆಯ ವೆಚ್ಚ ಕಡಿಮೆ ಆಗುತ್ತಿದೆ. ಇನ್ನು, ವರ್ಷದಿಂದ ವರ್ಷಕ್ಕೆ ಕಂಪೆನಿಯ ಲಾಭ ಹೆಚ್ಚುತ್ತಿದೆ.
ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..
ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?