AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಎನ್​ಎಸ್​ಇ ಏಷ್ಯಾದ 2ನೇ ಅತ್ಯಂತ ಮೌಲ್ಯಯುತ ಲಿಸ್ಟೆಡ್ ಸ್ಟಾಕ್ ಎಕ್ಸ್​ಚೇಂಜ್ ಕಂಪನಿ

ಎನ್​ಎಸ್​ಇ ಪ್ರತೀ ಷೇರು 1,817 ಬೆಲೆಗೆ ಲಿಸ್ಟ್ ಆಗಿದೆ. ಅದರ ಷೇರುಗಳ ಒಟ್ಟು ಮೌಲ್ಯ 46.89 ಬಿಲಿಯನ್ ಡಾಲರ್ ಆಗಿದೆ. ಲಿಸ್ಟ್ ಆಗಿರುವ ಸ್ಟಾಕ್ ಎಕ್ಸ್​ಚೇಂಜ್​ಗಳ ಪೈಕಿ ಏಷ್ಯಾದಲ್ಲಿ ಎನ್​ಎಸ್​ಇ 2ನೇ ಸ್ಥಾನ ಪಡೆಯುತ್ತದೆ. ಜಾಗತಿಕವಾಗಿ 6ನೇ ಸ್ಥಾನ ಪಡೆಯುತ್ತದೆ. ಹಾಂಕಾಂಗ್ ಎಕ್ಸ್​ಚೇಂಜಸ್ ಅಂಡ್ ಡೆರಿವೇಟಿವ್ಸ್ ಕಂಪನಿಯು ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದರೆ, ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ.

ಭಾರತದ ಎನ್​ಎಸ್​ಇ ಏಷ್ಯಾದ 2ನೇ ಅತ್ಯಂತ ಮೌಲ್ಯಯುತ ಲಿಸ್ಟೆಡ್ ಸ್ಟಾಕ್ ಎಕ್ಸ್​ಚೇಂಜ್ ಕಂಪನಿ
ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2026 | 7:20 PM

Share

ಮುಂಬೈ, ಸೆಪ್ಟೆಂಬರ್ 24: ಭಾರತದ ಪ್ರಮುಖ ಷೇರು ವಿನಿಮಯ ಕೇಂದ್ರವಾದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಐಪಿಒ ಮುಗಿದಿದ್ದು 1,817 ರೂ ಬೆಲೆಗೆ ಅದರ ಷೇರುಗಳು ಲಿಸ್ಟ್ ಆಗಿವೆ. ಅದರ ಮಾರುಕಟ್ಟೆ ಬಂಡವಾಳ (Market Capitalization) 46 ಬಿಲಿಯನ್ ಡಾಲರ್ ದಾಟಿದೆ. ಲಿಸ್ಟ್ ಆಗಿರುವ ಸ್ಟಾಕ್ ಎಕ್ಸ್​ಚೇಂಜ್​ಗಳ ಪೈಕಿ ಎನ್​ಎಸ್​ಇ ಏಷ್ಯಾದ ಎರಡನ ಅತಿಹೆಚ್ಚು ಮೌಲ್ಯದ ವಿನಿಮಯ ಕೇಂದ್ರ ಎನಿಸಿದೆ. ಅಮೆರಿಕದ ಸಿಎಂಇ ಗ್ರೂಪ್ ವಿಶ್ವದಲ್ಲೇ ಅತಿಹೆಚ್ಚು ಮೌಲ್ಯದ ವಿನಿಮಯ ಕೇಂದ್ರವೆನಿಸಿದೆ. ಹಾಂಕಾಂಗ್ ಎಕ್ಸ್​ಚೇಂಜಸ್ ಏಷ್ಯಾದ ನಂಬರ್ ಒನ್ ಎನಿಸಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಜಪಾನ್​ನ ಟೋಕಿಯೋ ಸ್ಟಾಕ್ ಎಕ್ಸ್​ಚೇಂಜ್ ಅನ್ನು ಹಿಂದಿಕ್ಕೆ ಎರಡನೇ ಸ್ಥಾನ ಪಡೆದಿದೆ. ಇಲ್ಲಿ ಬಹಳ ದೊಡ್ಡ ಷೇರು ವಿನಿಮಯ ಕೇಂದ್ರಗಳು ಲಿಸ್ಟೆಡ್ ಆಗಿಲ್ಲದಿರುವುದರಿಂದ ಎನ್​ಎಸ್​ಇ ಟಾಪ್-2ಗೆ ಹೋಗಲು ಸಾಧ್ಯವಾಗಿದೆ.

ಸಿಎಂಇ ಗ್ರೂಪ್ ಸಂಸ್ಥೆಯು ಡೆರಿವೇಟಿವ್ಸ್ ಎಕ್ಸ್​ಚೇಂಜ್ ಪ್ಲಾಟ್​ಫಾರ್ಮ್ ಆಗಿದೆ. ಫ್ಯೂಚರ್ಸ್ ಕಾಟ್ರಾಕ್ಟ್​ಗಳು, ಆಪ್ಷನ್ಸ್ ಟ್ರೇಡಿಂಗ್, ಷೇರುಗಳು, ಬ್ರೆಂಟ್ ಇತ್ಯಾದಿ ಕಮಾಡಿಟಿಗಳ ಟ್ರೇಡಿಂಗ್ ಅನ್ನು ಮಾಡಲಾಗುತ್ತದೆ. ಈ ಕಂಪನಿಯ ಸ್ವಂತ ಮಾರುಕಟ್ಟೆ ಬಂಡವಾಳ 97.31 ಬಿಲಿಯನ್ ಡಾಲರ್ ಇದೆ.

ಅಮೆರಿಕದ ಅಟ್ಲಾಂಟಾದಲ್ಲಿ ಕಚೇರಿ ಇರುವ ಇಂಟರ್​ಕಾಂಟಿನೆಂಟಲ್ ಎಕ್ಸ್​ಚೇಂಜ್ 87.77 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣ ಹೊಂದಿದ್ದು ವಿಶ್ವದ ಎರಡನೇ ಸ್ಥಾನ ಪಡೆದಿದೆ. ನಂತರದ ಸ್ಥಾನವು ಹಾಂಕಾಂಗ್ ಎಕ್ಸ್​ಚೇಂಜ್​ನದ್ದು.

ಇದನ್ನೂ ಓದಿ: ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್

ಅಮೆರಿಕದ ನಾಸ್ಡಾಕ್, ಬ್ರಿಟನ್​ನ ಲಂಡನ್ ಸ್ಟಾಕ್ ಎಕ್ಸ್​ಚೇಂಜ್ ಕ್ರಮವಾಗಿ 53.34 ಬಿಲಿಯನ್ ಡಾಲರ್, 53.10 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ಹೊಂದಿವೆ. ಇವುಗಳ ನಂತರ ಭಾರತದ ಎನ್​ಎಸ್​ಇ 6ನೇ ಸ್ಥಾನ ಪಡೆಯುತ್ತದೆ.

ಲಿಸ್ಟ್ ಆಗಿರುವ ಅತಿ ಮೌಲ್ಯದ ಸ್ಟಾಕ್ ಎಕ್ಸ್​ಚೇಂಜ್ ಕಂಪನಿಗಳು

  1. ಸಿಎಂಇ ಗ್ರೂಪ್ (ಅಮೆರಿಕ): 97.31 ಬಿಲಿಯನ್ ಡಾಲರ್
  2. ಇಂಟರ್​ಕಾಂಟಿನೆಂಟಲ್ ಎಕ್ಸ್​ಚೇಂಜ್ (ಅಮೆರಿಕ): 87.77 ಬಿಲಿಯನ್ ಡಾಲರ್
  3. ಹಾಂಕಾಂಗ್ ಎಕ್ಸ್​ಚೇಂಜ್: 63.59 ಬಿಲಿಯನ್ ಡಾಲರ್
  4. ನಾಸ್ಡಾಕ್ (ಅಮೆರಿಕ): 53.34 ಬಿಲಿಯನ್ ಡಾಲರ್
  5. ಲಂಡನ್ ಸ್ಟಾಕ್ ಎಕ್ಸ್​ಚೇಂಜ್ (ಯುಕೆ): 53.10 ಬಿಲಿಯನ್ ಡಾಲರ್
  6. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಭಾರತ): 46.89 ಬಿಲಿಯನ್ ಡಾಲರ್

ಅತಿ ಹೆಚ್ಚು ಷೇರು ಬಂಡವಾಳ ಹೊಂದಿರುವ ಸ್ಟಾಕ್ ಎಕ್ಸ್​ಚೇಂಜ್​ಗಳು

  1. ನಾಸ್ಡಾಕ್: 43.58 ಟ್ರಿಲಿಯನ್ ಡಾಲರ್
  2. ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್: 33.29 ಟ್ರಿಲಿಯನ್ ಡಾಲರ್
  3. ಶಾಂಘೈ ಸ್ಟಾಕ್ ಎಕ್ಸ್​ಚೇಂಜ್: 9.97 ಟ್ರಿಲಿಯನ್ ಡಾಲರ್
  4. ಜಪಾನ್ ಎಕ್ಸ್​ಚೇಂಜ್ ಗ್ರೂಪ್: 8.72 ಟ್ರಿಲಿಯನ್ ಡಾಲರ್
  5. ಯೂರೋನೆಕ್ಸ್ಟ್: 8.33 ಟ್ರಿಲಿಯನ್ ಡಾಲರ್
  6. ಶೆಂಜೆನ್ ಸ್ಟಾಕ್ ಎಕ್ಸ್​ಚೆಂಜ್: 7.34 ಟ್ರಿಲಿಯನ್ ಡಾಲರ್
  7. ಹಾಂಕಾಂಗ್ ಎಕ್ಸ್​ಚೇಂಜಸ್ ಅಂಡ್ ಕ್ಲಿಯರಿಂಗ್: 6 ಟ್ರಿಲಿಯನ್ ಡಾಲರ್
  8. ಕೊರಿಯಾ ಎಕ್ಸ್​ಚೇಂಜ್: 4.89 ಟ್ರಿಲಿಯನ್ ಡಾಲರ್
  9. ಬಿಎಸ್​ಇ: 4.85 ಟ್ರಿಲಿಯನ್ ಡಾಲರ್
  10. ಎನ್​ಎಸ್​ಇ: 4.76 ಟ್ರಿಲಿಯನ್ ಡಾಲರ್

ಇದನ್ನೂ ಓದಿ: ಷೇರುಪೇಟೆ ಭಾರಿ ಕುಸಿತ; ಸೆನ್ಸೆಕ್ಸ್​ಗೆ 1,247, ನಿಫ್ಟಿಗೆ 383 ಅಂಕಗಳ ನಷ್ಟ; ಮಾರುಕಟ್ಟೆ ಹಿನ್ನಡೆಗೆ ಪ್ರಮುಖ ಕಾರಣಗಳಿವು

ಈ ಮೇಲಿನ ಪಟ್ಟಿಯಲ್ಲಿ ಷೇರು ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಆಗುತ್ತಿರುವ ಷೇರುಗಳ ಒಟ್ಟೂ ಮೌಲ್ಯವನ್ನು ಆಧರಿಸಿದ್ದಾಗಿದೆ. ಎನ್​ಎಸ್​ಇ ಪ್ಲಾಟ್​ಫಾರ್ಮ್​ನಲ್ಲಿ ಸುಮಾರು 2,500-3,000 ದಷ್ಟು ಕಂಪನಿಗಳ ಷೇರುಗಳು ಲಿಸ್ಟ್ ಆಗಿ ಟ್ರೇಡಿಂಗ್ ಆಗುತ್ತಿವೆ. ಇಷ್ಟೂ ಷೇರುಗಳ ಒಟ್ಟು ಮೌಲ್ಯ 4.76 ಟ್ರಿಲಿಯನ್ ಡಾಲರ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ