AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

EPF, NPS, Mutual Funds for retirement: ನಿವೃತ್ತಿ ನಂತರದ ಭದ್ರತೆಗೆಂದು ಇರುವ ಹಲವು ಪ್ಲಾನ್​ಗಳಲ್ಲಿ ಇಪಿಎಫ್, ನ್ಯಾಷನಲ್ ಪೆನ್ಷನ್ ಸ್ಕೀಮ್, ಮ್ಯೂಚುವಲ್ ಫಂಡ್ ಪ್ರಮುಖವಾಗಿ ಕಂಡು ಬರುತ್ತವೆ. ಈ ಮೂರೂ ಕೂಡ ರಿಟೈರ್ಮೆಂಟ್​ಗೆ ನೆರವಾಗುತ್ತವಾದರೂ ಬೇರೆ ಬೇರೆ ಸ್ವಭಾವದ ಪ್ರಾಡಕ್ಟ್ಸ್ ಎನಿಸಿವೆ. ಇಪಿಎಫ್​ನಲ್ಲಿ ರಿಟರ್ನ್ಸ್ ಕಡಿಮೆಯಾದರೂ ಫಿಕ್ಸೆಡ್ ಡೆಪಾಸಿಟ್ ರೀತಿ ಸ್ಥಿರತೆ ಸಿಗುತ್ತದೆ. ಮ್ಯೂಚುವಲ್ ಫಂಡ್​ಗಳು ದೀರ್ಘಾವಧಿಯಲ್ಲಿ ಒಳ್ಳೆಯ ರಿಟರ್ನ್ಸ್ ತರುತ್ತವೆ.

ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?
ಹಣImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2026 | 10:16 PM

Share

ಭಾರತದಲ್ಲಿ ರಿಟೈರ್ಮೆಂಟ್​ಗೆ ಪ್ಲಾನಿಂಗ್ (Retirement Planning) ಮಾಡುವವರ ಸಂಖ್ಯೆ ಬಹಳ ಕಡಿಮೆ. ಮಧ್ಯ ಮಧ್ಯದಲ್ಲಿ ಬರುವ ಖರ್ಚು ವೆಚ್ಚಗಳಿಗೇ ಎಲ್ಲಾ ಸಂಪಾದನೆ ಸರಿ ಮಾಡಿಕೊಳ್ಳುವುದುಂಟು. ಆಫೀಸ್​ನಲ್ಲಿ ಸಿಗುವ ಇಪಿಎಫ್, ಗ್ರಾಚುಟಿ ಹಣ ನಿವೃತ್ತಿ ನಂತರ ಸಾಕಾಗಬಹುದು ಎಂಬುದು ಬಹಳ ಜನರ ಎಣಿಕೆ. ಆದರೆ, ಇದು ತಪ್ಪು ಎಣಿಕೆ. ಸದ್ಯ ರಿಟೈರ್ಮೆಂಟ್ ಪ್ಲಾನಿಂಗ್​ಗೆ ಮೂರು ರೀತಿಯ ಆಯ್ಕೆಗಳಿವೆ. ಒಂದು, ಇಪಿಎಫ್ ಹಣ. ಎರಡನೆಯದು ಎನ್​ಪಿಎಸ್. ಮೂರನೆಯದು ಮ್ಯೂಚುವಲ್ ಫಂಡ್. ಮೂರನ್ನೂ ಬಳಸಿ ಪ್ಲಾನಿಂಗ್ ಮಾಡಿಕೊಳ್ಳಬಹುದು.

ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್ ಈ ಮೂರು ಕೂಡ ಬೇರೆ ಬೇರೆ ಪಾತ್ರ, ಸ್ವಭಾವ ಹೊಂದಿವೆ. ಇಪಿಎಫ್​ನಲ್ಲಿ ಸಾಮಾನ್ಯವಾಗಿ ಶೇ. 8ಕ್ಕಿಂತಲೂ ಹೆಚ್ಚು ವಾರ್ಷಿಕ ಬಡ್ಡಿ ಸಿಗುತ್ತದೆ. ಆದರೆ, ಶೇ. 9ರ ಒಳಗೆ ಅದು ಇರುತ್ತದೆ. ಸಂಬಳದ ಜೀವನದಲ್ಲಿರುವವರಿಗೆ ಅದು ಮೂಲಭೂತವಾದ ರಿಟೈರ್ಮೆಂಟ್ ಸ್ಕೀಮ್.

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಎನ್​ಪಿಎಸ್ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಮ್ ಸ್ವಲ್ಪ ಈಕ್ವಿಟಿ ಕಡೆ ಮುಖ ಮಾಡಿರುವ ಯೋಜನೆ. ಈಕ್ವಿಟಿ, ಬಾಂಡ್, ಗವರ್ನ್ಮೆಂಟ್ ಸೆಕ್ಯೂರಿಟೀಸ್​ಗಳಿಗೆ ಜೋಡಿತವಾಗಿದೆ. ಹೂಡಿಕೆದಾರರಿಗೆ ಆಯ್ಕೆಯಲ್ಲಿ ಫ್ಲೆಕ್ಸಿಬಿಲಿಟಿ ಸ್ವಲ್ಪ ಇರುತ್ತದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳುವವರು ಪೂರ್ಣ ಈಕ್ವಿಟಿ ಸ್ಕೀಮ್ ಆಯ್ದುಕೊಳ್ಳಬಹುದು.

ಎನ್​ಪಿಎಸ್​ನಲ್ಲಿರುವ ಹೂಡಿಕೆ ಶೇ. 10ರಿಂದ 14ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಬಹುದು. ಗಮನಿಸಬೇಕಾದ ಸಂಗತಿ ಎಂದರೆ, ರಿಟೈರ್ ಆದಾಗ ಒಟ್ಟಾರೆ ಕಾರ್ಪಸ್​ನಿಂದ ಶೇ. 80ರಷ್ಟನ್ನು ವಿತ್​ಡ್ರಾಯಲ್ ಮಾಡಬಹುದು. ಉಳಿದ ಶೇ. 20ರಷ್ಟನ್ನು ಆ್ಯನುಟಿ ಪ್ಲಾನ್ ಖರೀದಿಗೆ ಬಳಸಬೇಕಾಗುತ್ತದೆ.

ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಮ್ಯೂಚುವಲ್ ಫಂಡ್​ನಲ್ಲಿ ಸ್ವಾತಂತ್ರ್ಯ

ಮ್ಯೂಚುವಲ್ ಫಂಡ್​ಗಳು ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿರುವಂಥವು. ಅದರಲ್ಲೂ ಹೆಚ್ಚಿನ ಈಕ್ವಿಟಿ ಫಂಡ್​ಗಳು ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ಕೊಟ್ಟಿವೆ. ರಿಟೈರ್ಮೆಂಟ್ ಪ್ಲಾನಿಂಗ್​​ಗೆ ಈ ಫಂಡ್​ಗಳು ಬಹಳ ಉಪಯುಕ್ತ ಎನಿಸುತ್ತವೆ. ದೀರ್ಘಾವಧಿಯಲ್ಲಿ ಇವುಗಳು ಸಾಮಾನ್ಯವಾಗಿ ಶೇ. 12ರಿಂದ ಶೇ. 15ರಷ್ಟು ರಿಟರ್ನ್ ಕೊಡಬಲ್ಲುವು. ಅಂತಿಮ ಹಣಕ್ಕೆ ಶೇ. 12.5ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ ಎನ್ನುವುದು ಬಿಟ್ಟರೆ ಹೆಚ್ಚಿನ ರಿಟರ್ನ್ಸ್ ನಿಮ್ಮ ಕೈ ಸೇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರು ಮಾತಿನ ಮೇಲೆ ನಿಗಾ ವಹಿಸಿ!
ಇಂದು ಈ ರಾಶಿಯವರು ಮಾತಿನ ಮೇಲೆ ನಿಗಾ ವಹಿಸಿ!
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!