AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AIS App: ಐಟಿ ಇಲಾಖೆಯಿಂದ AIS ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಉಚಿತ ಎಐಎಸ್?

Income Tax AIS App: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಇರುವ ವಾರ್ಷಿಕ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ಇನ್ಮುಂದೆ ಮೊಬೈಲ್ ಅಪ್ಲಿಕೇಶನ್​ನಲ್ಲಿ ಲಭ್ಯ ಇರಲಿದೆ. ತೆರಿಗೆ ಪಾವತಿದಾರರ ಅನುಕೂಲತೆಗೆಂದು ಐಟಿ ಇಲಾಖೆ AIS ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

AIS App: ಐಟಿ ಇಲಾಖೆಯಿಂದ AIS ಮೊಬೈಲ್ ಆ್ಯಪ್ ಬಿಡುಗಡೆ; ಏನಿದು ಉಚಿತ ಎಐಎಸ್?
ಐಟಿ ಇಲಾಖೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 23, 2023 | 12:58 PM

Share

ನವದೆಹಲಿ: ಆದಾಯ ತೆರಿಗೆ ಇಲಾಖೆ ಇದೀಗ ಎಐಎಸ್ ಎಂಬ ಹೊಸ ಹಾಗೂ ಉಚಿತ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ತೆರಿಗೆದಾರರ ಅನುಕೂಲಕ್ಕೆಂದು ರೂಪಿಸಲಾದ ಆ್ಯಪ್ ಆಗಿದೆ. ವಾರ್ಷಿಕ ಮಾಹಿತಿ ವರದಿ (AIS- Annual Information Statement) ಮತ್ತು ಸಂಕ್ಷಿಪ್ತ ತೆರಿಗೆಪಾವತಿದಾರ ಮಾಹಿತಿ (TIS- Taxpayer Information Summary) ಇವುಗಳಲ್ಲಿರುವ ಮಾಹಿತಿಯನ್ನು ಎಐಎಸ್ ಮೊಬೈಲ್ ಅಪ್ಲಿಕೇಶನ್​ನಲ್ಲೇ ವೀಕ್ಷಿಸಬಹುದು. ಟಿಡಿಎಸ್, ಬಡ್ಡಿ, ಷೇರು ವಹಿವಾಟು, ತೆರಿಗೆ ಪಾವತಿ, ಐಟಿ ರೀಫಂಡ್, ಜಿಎಸ್​ಟಿ ಡೇಟಾ ಮೊದಲಾದವಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನೂ ಈ ಆ್ಯಪ್​ನಲ್ಲಿ ಕಾಣಬಹುದು. ಅಲ್ಲದೇ ತೆರಿಗೆ ಪಾವತಿದಾರರು ಈ ಆ್ಯಪ್​ನಲ್ಲಿ ಫೀಡ್​ಬ್ಯಾಕ್ ಕೂಡ ನೀಡಬಹುದಾದ ವ್ಯವಸ್ಥೆ ಇದೆ.

ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ (AIS) ಎಂದರೇನು?

26AS ಫಾರ್ಮ್​ನಲ್ಲಿರುವ ಸಮಗ್ರ ಮಾಹಿತಿ ದರ್ಶನವೇ ಎಐಎಸ್. ಈ ಸ್ಟೇಟ್ಮೆಂಟ್​ನಲ್ಲಿ ನೀಡಲಾಗಿರುವ ಮಾಹಿತಿ ಬಗ್ಗೆ ತೆರಿಗೆ ಪಾವತಿದಾರರು ಫೀಡ್​ಬ್ಯಾಕ್ ನೀಡುವ ಅವಕಾಶ ಇರುತ್ತದೆ. ಈ ಫೀಡ್​ಬ್ಯಾಕ್ ನಂತರದ ರಿಪೋರ್ಟೆಡ್ ವ್ಯಾಲ್ಯೂ ಮತ್ತು ಮಾಡಿಫೈಡ್ ವ್ಯಾಲ್ಯೂ ಎರಡೂ ಕೂಡ ಎಐಎಸ್​ನಲ್ಲಿ ಇರುತ್ತದೆ.

ಎಐಎಸ್​ನ ಉದ್ದೇಶವೇನು?

ತೆರಿಗೆ ಪಾವತಿದಾರರಿಗೆ ಆನ್​ಲೈನ್ ಫೀಡ್​​ಬ್ಯಾಕ್ ಸಮೇತ ತೆರಿಗೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಒಂದು ವ್ಯವಸ್ಥೆ ಎಐಎಸ್. ಐಟಿ ರಿಟರ್ನ್ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಈ ವ್ಯವಸ್ಥೆ ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ: Income Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

ಎಐಎಸ್ ಪೋರ್ಟಲ್​ನಲ್ಲೂ ಸೇವೆ ಲಭ್ಯ

ಇನ್ಕಮ್ ಟ್ಯಾಕ್ಸ್ ಪೋರ್ಟಲ್ https://www.incometax.gov.in ಇಲ್ಲಿಗೆ ಹೋಗಿ ಲಾಗಿನ್ ಆದ ಬಳಿಕ ಸರ್ವಿಸಸ್ ಟ್ಯಾಬ್ ಅಡಿಯಲ್ಲಿರುವ ಆನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ (ಎಐಎಸ್) ಮೇಲೆ ಕ್ಲಿಕ್ ಮಾಡಬೇಕು. ಪೋರ್ಟಲ್​ಗೆ ಲಾಗಿನ್ ಆಗಿದ್ದರೆ ಮಾತ್ರ ಈ ಸೇವೆ ಲಭ್ಯ ಇರುತ್ತದೆ. ಇಲ್ಲಿದಿದ್ದರೆ ಕಾಣುವುದಿಲ್ಲ.

ಲಾಗಿನ್ ಆದಾಗ ಇರುವ ಮುಖ್ಯಪುಟದಲ್ಲಿ ಎಎಸ್​ಐ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾದ ಹಣಕಾಸು ವರ್ಷವನ್ನು ಆಯ್ದುಕೊಂಡು ಎಐಎಸ್ ಟೈಲ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾರ್ಷಿಕ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ವೀಕ್ಷಿಸಬಹುದು.

ಇದನ್ನೂ ಓದಿ: EPFO: ಜನವರಿಯಲ್ಲಿ ಇಪಿಎಫ್​ಒಗೆ ನಿವ್ವಳ 14.86 ಲಕ್ಷ ಖಾತೆಗಳ ಸೇರ್ಪಡೆ; ಹೊಸ ಉದ್ಯೋಗಸೃಷ್ಟಿ ಕುಸಿದಿದೆಯೇ?

ಎಐಎಸ್​ನಲ್ಲಿ ಕಾಣುವ ಮಾಹಿತಿಯನ್ನು ಎರಡು ಭಾಗವಾಗಿ ವರ್ಗೀಕರಿಸಬಹುದು. ಸಾಮಾನ್ಯ ಮಾಹಿತಿ ಮತ್ತು ಟಿಡಿಎಸ್/ಟಿಸಿಎಸ್ ಮಾಹಿತಿ ಇರುತ್ತದೆ. ಜನರನ್ ಇನ್ಫಾರ್ಮೇಶನ್ ಅಥವಾ ಸಾಮಾನ್ಯ ಮಾಹಿತಿಯಲ್ಲಿ ತೆರಿಗೆ ಪಾವತಿದಾರರ ಸಾಮಾನ್ಯ ಮಾಹಿತಿ ಇರುತ್ತದೆ. ಪ್ಯಾನ್ ನಂಬರ್, ಆಧಾರ್ ನಂಬರ್, ತೆರಿಗೆಪಾವತಿದಾರನ ಹೆಸರು, ಜನ್ಮ ದಿನಾಂಕ, ಸಂಸ್ಥೆಯಾದರೆ ಅದರ ಸ್ಥಾಪನಾ ದಿನಾಂಕ, ಮೊಬೈಲ್ ನಂಬರ್, ಇಮೇಲ್ ವಿಳಾಸ, ಭೌತಿಕ ವಿಳಾಸ ಇತ್ಯಾದಿ ಮಾಹಿತಿ ಒಂದು ಭಾಗದಲ್ಲಿರುತ್ತದೆ.

ಎರಡನೇ ಭಾಗದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಮಾಹಿತಿ ಇರುತ್ತದೆ. ಎಸ್​ಎಫ್​ಟಿ ಮಾಹಿತಿ, ತೆರಿಗೆ ಪಾವತಿ, ಡಿಮ್ಯಾಂಡ್ ಮತ್ತು ರೀಫಂಡ್ ಹಾಗೂ ಇತರೆ ಮಾಹಿತಿ ಇದರಲ್ಲಿ ಇರುತ್ತದೆ. ಇತರ ಮಾಹಿತಿಯಲ್ಲಿ ರೀಫಂಡ್ ಮೇಲಿನ ಬಡ್ಡಿ, ವಿದೇಶೀ ಕರೆನ್ಸಿ ಖರೀದಿ, ವಿದೇಶಗಳಿಗೆ ಹಣ ಕಳುಹಿಸಿರುವುದು ಇತ್ಯಾದಿ ಮಾಹಿತಿ ಇದರಲ್ಲಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Thu, 23 March 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!