AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವರ್ಷದಲ್ಲಿ ಡಬಲ್ ಲಾಭ ಕೊಟ್ಟಿವೆ ಈ ಪಿಎಸ್​ಯು ಮ್ಯೂಚುವಲ್ ಫಂಡ್​ಗಳು

Govt companies bring joy to investors: ಪಬ್ಲಿಕ್ ಸೆಕ್ಟರ್ ಅಥವಾ ಸರ್ಕಾರಿ ಸ್ವಾಮ್ಯದ ಕಂಪನಿಗಳು ಇತ್ತೀಚೆಗೆ ಗಮನಾರ್ಹವಾಗಿ ಬೆಳೆದಿವೆ. ಉತ್ತಮ ಲಾಭ ಮಾಡಿವೆ. ಈ ವಲಯವನ್ನು ಟ್ರ್ಯಾಕ್ ಮಾಡುವ ಮ್ಯೂಚುವಲ್ ಫಂಡ್​ಗಳೂ ಕೂಡ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದಿವೆ. ಒಂದು ವರ್ಷದಲ್ಲಿ ಇವು ಸರಾಸರಿಯಾಗಿ ಶೇ. 100ರಷ್ಟು ಲಾಭ ಮಾಡಿವೆ.

ಒಂದು ವರ್ಷದಲ್ಲಿ ಡಬಲ್ ಲಾಭ ಕೊಟ್ಟಿವೆ ಈ ಪಿಎಸ್​ಯು ಮ್ಯೂಚುವಲ್ ಫಂಡ್​ಗಳು
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2024 | 4:03 PM

Share

ನವದೆಹಲಿ, ಜೂನ್ 19: ಇತ್ತೀಚಿನ ಕೆಲ ವರ್ಷಗಳಿಂದ ಪಬ್ಲಿಕ್ ಸೆಕ್ಟರ್ ಕಂಪನಿಗಳು (public sector units) ಉತ್ತಮ ಬೆಳವಣಿಗೆ ಹೊಂದಿವೆ. ಸರ್ಕಾರಿ ಸಂಸ್ಥೆಗಳೆಂದರೆ ಒಂದು ಕಾಲದಲ್ಲಿ ಬಿಳಿ ಆನೆಗಳೆಂದು ಪರಿಗಣಿತವಾಗಿದ್ದವು. ಈಗ ಇವೇ ಸಂಸ್ಥೆಗಳು ಭರ್ಜರಿ ಲಾಭ ಮಾಡುತ್ತಿವೆ. ಷೇರು ಮಾರುಕಟ್ಟೆಯಲ್ಲೂ (stock market) ಅವುಗಳು ಲಾಭದ ಕುದುರೆಗಳಾಗಿವೆ. ಎಚ್​ಎಎಲ್, ಬಿಎಚ್ಇಎಲ್, ಎಸ್​ಬಿಐ ಇತ್ಯಾದಿ ಸ್ಟಾಕ್​​ಗಳ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಪಿಎಸ್​ಇ ವಲಯದ ಷೇರುಗಳಲ್ಲಿ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್, ಇಟಿಎಫ್​ಗಳೂ ಕೂಡ ಭರ್ಜರಿಯಾಗಿ ಬೆಳೆದಿವೆ. ಈ ಫಂಡ್​ಗಳು ಒಂದು ವರ್ಷದಲ್ಲಿ ಸರಾಸರಿಯಾಗಿ ಶೇ. 100ರಷ್ಟು ಬೆಳೆದಿವೆ. ಅಂದರೆ, ಹೂಡಿಕೆದಾರರ ಹಣ ಒಂದು ವರ್ಷದಲ್ಲಿ ಡಬಲ್ ಆಗಿದೆ.

ಎರಡು ಫಂಡ್​ಗಳಂತೂ ಒಂದು ವರ್ಷದಲ್ಲಿ ಶೇ. 100ಕ್ಕಿಂತಲೂ ಹೆಚ್ಚು ರಿಟರ್ನ್ಸ್ ಕೊಟ್ಟಿವೆ. ಪಿಎಸ್​ಯು ಸೆಕ್ಟರ್​ನ ಅತಿದೊಡ್ಡ ಫಂಡ್ ಎನಿಸಿರುವ ಸಿಪಿಎಸ್​ಇ ಇಟಿಎಫ್ ಒಂದು ವರ್ಷದಲ್ಲಿ ಶೇ. 116.41ರಷ್ಟು ರಿಟರ್ನ್ ಕೊಟ್ಟಿದೆ. ಎಸ್​ಬಿಐನ ಪಿಎಸ್​ಯು ಫಂಡ್ ಕೂಡ ಶೇ. 101.56ರಷ್ಟು ವಾರ್ಷಿಕ ಬೆಳವಣಿಗೆ ಹೊಂದಿದೆ. ಇನ್ವೆಸ್ಕೋ ಇಂಡಿಯಾ ಪಿಎಸ್​ಯು ಈಕ್ವಿಟಿ ಫಂಡ್ ಮತ್ತು ಆದಿತ್ಯ ಬಿರ್ಲಾ ಎಸ್​ಎಲ್ ಪಿಎಸ್​ಯು ಈಕ್ವಿಟಿ ಫಂಡ್ ಶೇ. 95ಕ್ಕಿಂತಲೂ ಹೆಚ್ಚು ರಿಟರ್ನ್ ಕೊಟ್ಟಿವೆ.

ಇದನ್ನೂ ಓದಿ: ಜಿಎಸ್​ಟಿ ನೀತಿಯಲ್ಲಿ ಬದಲಾವಣೆ ನಿರೀಕ್ಷೆಯಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರ; ಜೂನ್ 22ರ ಸಭೆಯಲ್ಲಿ ಏನಾಗಬಹುದು?

ಪಿಎಸ್​ಯು ಫಂಡ್​ಗಳು ಒಂದು ವರ್ಷದಲ್ಲಿ ಕೊಟ್ಟಿರುವ ರಿಟರ್ನ್ಸ್

  1. ಸಿಪಿಎಸ್​ಇ ಇಟಿಎಫ್ ಫಂಡ್: ಶೇ. 116.41
  2. ಎಸ್​ಬಿಐ ಪಿಎಸ್​ಯು ಫಂಡ್: ಶೇ. 101.56
  3. ಇನ್ವೆಸ್ಕೋ ಇಂಡಿಯಾ ಪಿಎಸ್​ಯು ಈಕ್ವಿಟಿ ಫಂಡ್: ಶೇ. 99.12
  4. ಆದಿತ್ಯ ಬಿರ್ಲಾ ಎಸ್​ಎಲ್ ಪಿಎಸ್​ಯು ಈಕ್ವಿಟಿ ಫಂಡ್: ಶೇ. 95.60
  5. ಐಸಿಐಸಿಐ ಪ್ರು ಪಿಎಸ್​ಯು ಈಕ್ವಿಟಿ ಫಂಡ್: 86.12

ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿರುವ ಪಿಎಸ್​ಯು ಇಂಡೆಕ್ಸ್​ಗಳು ಕ್ರಮವಾಗಿ ಶೇ. 107.49 ಮತ್ತು ಶೇ. 117.18ರಷ್ಟು ಬೆಳೆದಿರುವುದು ಗಮನಾರ್ಹ. ಕಳೆದ ಐದು ವರ್ಷದಲ್ಲಿ ಈ ಇಂಡೆಕ್ಸ್​ಗಳು ವಾರ್ಷಿಕವಾಗಿ ಶೇ. 27ರಷ್ಟು ಲಾಭ ತೋರಿವೆ.

ಇದನ್ನೂ ಓದಿ: ‘996’ ವಿರುದ್ಧ ತಿರುಗಿಬಿದ್ಧ ಚೀನೀ ಯುವಕರು, ಯುವತಿಯರು; ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ‘ಹಕ್ಕಿ’ಗಳ ಟ್ರೆಂಡ್

ರಿಸ್ಕ್ ಅಂಶ ಗಮನದಲ್ಲಿರಲಿ…

ಪಿಎಸ್​ಯು ಸೆಕ್ಟರ್​ನ ಕಂಪನಿಗಳಲ್ಲಿ ಅಥವಾ ಆ ವಲಯದ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಮುನ್ನ ಕೆಲ ಅಂಶಗಳು ಗಮನದಲ್ಲಿರಬೇಕು. ಸರ್ಕಾರಿ ಸಂಸ್ಥೆಗಳ ಬೆಳವಣಿಗೆಯ ಗತಿಯು ಸರ್ಕಾರದ ನೀತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ, ಮಾರುಕಟ್ಟೆಯ ಸ್ಥಿತಿಯ ಮೇಲೆ ಸದಾ ಎಚ್ಚರಿಕೆ ಇರಬೇಕು.

ರಿಸ್ಕ್ ಕಡಿಮೆ ಹೊಂದಿರಬಯಸುವವರು ಸೆಕ್ಟರ್ ಫಂಡ್​ಗಳ ಬದಲು ಫ್ಲೆಕ್ಸಿ ಫಂಡ್​ಗಳತ್ತ ಹೂಡಿಕೆ ಮಾಡಬಹುದು ಎನ್ನುವುದು ತಜ್ಞರ ಸಲಹೆ. ಯಾಕೆಂದರೆ, ಫ್ಲೆಕ್ಸಿ ಫಂಡ್​ಗಳಲ್ಲಿರುವ ಮ್ಯಾನೇಜರ್​ಗಳು ಮಾರುಕಟ್ಟೆಯ ಟ್ರೆಂಡ್​ಗೆ ಅನುಗುಣವಾಗಿ ಹೂಡಿಕೆಗಳನ್ನು ಹಂಚುತ್ತಾರೆ. ಇದರಿಂದ ರಿಸ್ಕ್ ಸಾಧ್ಯತೆ ಕಡಿಮೆಗೊಳ್ಳುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ