AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಪೆಟ್ರೋಲ್ ಪಂಪ್​ಗಳಲ್ಲಿ ಡೀಸಲ್ ಪೂರೈಕೆಗೆ ಮಿತಿ; ಒಬ್ಬರಿಗೆ 50 ಲೀಟರ್ ಮಾತ್ರ ಎನ್ನುತ್ತಿದೆ ವರದಿ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ವಾತಾವರಣ ಇರುವುದು, ತೈಲ ಘಟಕಗಳ ಮೇಲೆ ದಾಳಿಗಳು ನಡೆದಿರುವುದು, ತೈಲ ಪೂರೈಕೆಗೆ ಹಿನ್ನಡೆಯಾಗಿದೆ. ಇದರಿಂದ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದೆ. ಇದು ಪೆಟ್ರೋಲಿಯಂ ಕಂಪನಿಗಳ ಮೇಲೆ ಒತ್ತಡ ತರುತ್ತಿದೆ. ನಯಾರಾ, ಜಿಯೋ ಬಿಪಿ ಇತ್ಯಾದಿ ಭಾರತದ ಖಾಸಗಿ ಪೆಟ್ರೋಲಿಯಂ ಔಟ್​ಲೆಟ್​ಗಳಲ್ಲಿ ಡೀಸಲ್ ಮಾರಾಟಕ್ಕೆ ಮಿತಿ ಹಾಕಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಖಾಸಗಿ ಪೆಟ್ರೋಲ್ ಪಂಪ್​ಗಳಲ್ಲಿ ಡೀಸಲ್ ಪೂರೈಕೆಗೆ ಮಿತಿ; ಒಬ್ಬರಿಗೆ 50 ಲೀಟರ್ ಮಾತ್ರ ಎನ್ನುತ್ತಿದೆ ವರದಿ
ಪೆಟ್ರೋಲ್ ಬಂಕ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2026 | 6:17 PM

Share

ನವದೆಹಲಿ, ಸೆಪ್ಟೆಂಬರ್ 24: ಪಶ್ಚಿಮ ಏಷ್ಯಾದ ಬಿಗುವಿನ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ತೈಲ ಬೆಲೆ ಮತ್ತೆ ನೂರು ಡಾಲರ್ ಗಡಿ ದಾಟಿ ಹೋಗಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅಣಿಗೊಳ್ಳುತ್ತಿವೆ. ಖಾಸಗಿ ಪೆಟ್ರೋಲಿಯಂ ಮಾರಾಟಗಾರರು ಡೀಸಲ್ ಮಾರಾಟದಲ್ಲಿ ಮಿತಿ ಹಾಕಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಸುದ್ದಿ ಬಂದಿದ್ದು, ಕೆಲ ಖಾಸಗಿ ಪೆಟ್ರೋಲ್ ಪಂಪ್​ಗಳಲ್ಲಿ ಒಬ್ಬರಿಗೆ 50 ಲೀಟರ್​ವರೆಗೆ ಮಾತ್ರ ಡೀಸಲ್ ನೀಡಲಾಗುತ್ತಿದೆಯಂತೆ. ಬೇರೆ ಬೇರೆ ಕಡೆ ಬೇರೆ ರೀತಿಯ ಪೂರೈಕೆ ನಿರ್ಬಂಧ ಇದೆ ಎನ್ನಲಾಗಿದೆ.

ವರದಿ ಪ್ರಕಾರ, ಹಲವು ಜಿಯೋ-ಬಿಪಿ ಪೆಟ್ರೋಲ್ ಬಂಕ್​ಗಳಲ್ಲಿ ಪ್ರತೀ ಗ್ರಾಹಕರಿಗೆ 50 ಲೀಟರ್​ವರೆಗೂ ಮಾತ್ರ ಡೀಸಲ್ ನೀಡಬಹುದು ಎಂದು ಸೂಚಿಸಲಾಗಿದೆಯಂತೆ. ಹಾಗೆಯೇ, ಕೆಲ ಬಂಕ್​ಗಳಲ್ಲಿ ದಿನಕ್ಕೆ 6,000 ಲೀಟರ್ ಡೀಸಲ್ ಮಾತ್ರ ಒಂದು ದಿನದಲ್ಲಿ ಮಾರಲು ಅನುಮತಿಸಲಾಗಿದೆ.

ಇದನ್ನೂ ಓದಿ: ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್

ನಯಾರಾ ಎನರ್ಜಿ ಪೆಟ್ರೋಲ್ ಬಂಕ್​ಗಳಲ್ಲಿ ಒಬ್ಬ ಗ್ರಾಹಕರಿಗೆ 70 ಲೀಟರ್​ನಿಂದ 200 ಲೀಟರ್ ಡೀಸಲ್ ಪೂರೈಕೆಯ ಮಿತಿ ಹಾಕಲಾಗಿದೆ.

ಇದೇ ವೇಳೆ, ಐಒಸಿಎಲ್, ಬಿಪಿ, ಹೆಚ್​ಪಿಯಂತಹ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಪೆಟ್ರೋಲ್ ಬಂಕ್​ಗಳಲ್ಲಿ ಸದ್ಯ ಯಾವುದೇ ನಿರ್ಬಂಧಗಳಿಲ್ಲದೆ ಪೆಟ್ರೋಲ್, ಡೀಸಲ್ ಪೂರೈಕೆ ಆಗುತ್ತಿದೆ. ದೇಶದಲ್ಲಿ ಶೇ. 90ರಷ್ಟು ಪೆಟ್ರೋಲ್ ಬಂಕ್​ಗಳು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳದ್ದಾದ್ದರಿಂದ ಹೆಚ್ಚಿನ ಗ್ರಾಹಕರಿಗೆ ದೊಡ್ಡ ವ್ಯತ್ಯಯ ಆಗುವುದಿಲ್ಲ.

ಆದರೆ, ದೂರದೂರುಗಳಿಗೆ ಸಂಚರಿಸುವ ಸರಕು ಸಾಗಣೆ ಲಾರಿಗಳು ಮತ್ತು ಟ್ರಕ್‌ಗಳಿಗೆ ಈ ನಿರ್ಬಂಧಗಳು ಹೆಚ್ಚಿನ ಪರಿಣಾಮ ಬೀರಬಹುದು.

ಇದನ್ನೂ ಓದಿ: ಷೇರುಪೇಟೆ ಭಾರಿ ಕುಸಿತ; ಸೆನ್ಸೆಕ್ಸ್​ಗೆ 1,247, ನಿಫ್ಟಿಗೆ 383 ಅಂಕಗಳ ನಷ್ಟ; ಮಾರುಕಟ್ಟೆ ಹಿನ್ನಡೆಗೆ ಪ್ರಮುಖ ಕಾರಣಗಳಿವು

ಸಿಕ್ಕಾಪಟ್ಟೆ ಏರುತ್ತಿರುವ ಕಚ್ಚಾ ತೈಲ ಬೆಲೆ

ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಬಹಳ ಹೆಚ್ಚಾಗಿತ್ತು. ಈಗ ಮತ್ತೆ ಅದೇ ಮಟ್ಟಕ್ಕೆ ಬೆಲೆಗಳು ಹೋಗುತ್ತಿವೆ. ಸೆಪ್ಟೆಂಬರ್ 21ರಂದು ಭಾರತದ ತೈಲ ಬುಟ್ಟಿಯಲ್ಲಿನ ಸರಾಸರಿ ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್​ಗೆ 117 ಡಾಲರ್​ಗೆ ಹೋಗಿದೆ. 2025-26ರ ವರ್ಷದಲ್ಲಿ ಸರಾಸರಿ ಬೆಲೆ 66 ಡಾಲರ್ ಮಾತ್ರ ಇತ್ತು. ಬಹುತೇಕ ಎರಡು ಪಟ್ಟು ಬೆಲೆ ಹೆಚ್ಚಾಗಿದೆ. ಆದರೆ, ಪೆಟ್ರೋಲ್, ಡೀಸಲ್ ಬೆಲೆಗಳಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಒಂದು ಅಂದಾಜು ಪ್ರಕಾರ ತೈಲ ಮಾರುಕಟ್ಟೆ ಕಂಪನಿಗಳು ಒಂದು ಲೀಟರ್ ಡೀಸಲ್ ಮಾರಾಟದಲ್ಲಿ 9 ರೂ ಹಾಗೂ ಪೆಟ್ರೋಲ್ ಮಾರಾಟದಲ್ಲಿ 8 ರೂ ನಷ್ಟ ಕಾಣುತ್ತಿವೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ