AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಭಾರತಕ್ಕೆ ಬರಲಿ, ಸ್ಪರ್ಧಿಸಲು ನಾವ್ ರೆಡಿ; ತೊಡೆ ತಟ್ಟಿದ ಜಿಯೋ ಮತ್ತು ಏರ್​ಟೆಲ್

ಸೆಟಿಲೈಟ್ ಕಮ್ಯೂನಿಕೇಶನ್ ಸರ್ವಿಸ್ ನೀಡಲು ಭಾರತಕ್ಕೆ ಸ್ಟಾರ್​ಲಿಂಕ್ ಬರಲಿ ಎಂದು ರಿಲಯನ್ಸ್ ಮತ್ತು ಏರ್ಟೆಲ್ ಸಂಸ್ಥೆಗಳು ಸ್ವಾಗತಿಸಿವೆ. ಪೈಪೋಟಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ರಿಲಯನ್ಸ್ ತಿಳಿಸಿದೆ. ಸ್ಯಾಟ್​ಕಾಮ್ ಸೇವೆ ಒದಗಿಸುವ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿ ಐದು ವರ್ಷ ಆಯಿತು, ಅನುಮತಿಗೆ ಕಾಯುತ್ತಿದ್ದೇವೆ ಎಂದು ಏರ್ಟೆಲ್ ಹೇಳಿದೆ.

ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಭಾರತಕ್ಕೆ ಬರಲಿ, ಸ್ಪರ್ಧಿಸಲು ನಾವ್ ರೆಡಿ; ತೊಡೆ ತಟ್ಟಿದ ಜಿಯೋ ಮತ್ತು ಏರ್​ಟೆಲ್
ಮುಕೇಶ್ ಅಂಬಾನಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2026 | 1:01 PM

Share

ಮುಂಬೈ, ಅಕ್ಟೋಬರ್ 16: ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ನೀಡುವ ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಸಂಸ್ಥೆ ಭಾರತದಲ್ಲಿ ಕಾರ್ಯಾಚರಣೆ ನಡೆಸಿದರೆ, ಅದರೊಂದಿಗೆ ಸ್ಪರ್ಧಿಸಲು ಭಾರತದ ಟೆಲಿಕಾಂ ಕಂಪನಿಗಳು ತಯಾರಾಗಿವೆ. ಸ್ಟಾರ್​ಲಿಂಕ್ ಅನ್ನು ಸ್ವಾಗತಿಸಿ ಎರಡೂ ಕಂಪನಿಗಳು ಹೇಳಿಕೆ ನೀಡಿವೆ. ಭಾರತದ ಸೆಟಿಲೈಟ್ ಸಂವಹನ ಮಾರುಕಟ್ಟೆಯಲ್ಲಿ ಸ್ಟಾರ್​ಲಿಂಕ್ ಬರಲಿ, ಯಾರೇ ಬರಲಿ, ಪೈಪೋಟಿ ಆಗುವುದನ್ನು ತಾನು ಸ್ವಾಗತಿಸುತ್ತೇನೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ.

ಮುಕೇಶ್ ಅಂಬಾನಿ ವಿರುದ್ಧ ನೇರವಾಗಿ ಮತ್ತು ಪರೋಕ್ಷವಾಗಿ ಇಲಾನ್ ಮಸ್ಕ್ ಟೀಕಿಸಿದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಸ್ಟಾರ್​ಲಿಂಕ್ ವಿಚಾರವಾಗಿ ನೀಡಿದ ಮೊದಲ ಬಹಿರಂಗ ಪ್ರತಿಕ್ರಿಯೆ ಇದು. ಭಾರತದಲ್ಲಿ ಇರುವ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿ ಯಾವುದೇ ದೇಶಿ, ವಿದೇಶೀ ಸಂಸ್ಥೆಗಳು ಬಂದು ಹೂಡಿಕೆ ಮಾಡುತ್ತೇವೆಂದರೆ ಅದಕ್ಕೆ ನಮ್ಮ ಬೆಂಬಲ ಮತ್ತು ಸ್ವಾಗತ ಇರುತ್ತದೆ ಎಂದು ಆರ್​ಐಎಲ್ ಹೇಳಿದೆ.

ಇದನ್ನೂ ಓದಿ: ನವೆಂಬರ್ 1ರಿಂದ ಮೊಬೈಲ್ ಕರೆ ಮಾಡುವವರ ಅಧಿಕೃತ ಹೆಸರು ಪ್ರದರ್ಶಿಸಬೇಕು; ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ

‘ಸೆಟಿಲೈಟ್ ಕಮ್ಯೂನಿಕೇಶನ್ಸ್ ಕ್ಷೇತ್ರದಲ್ಲಿ ಸ್ಟಾರ್​ಲಿಂಕ್​ನದ್ದು ಸೇರಿ ಪೈಪೋಟಿಯನ್ನು ಸ್ವಾಗತಿಸುತ್ತೇವೆ. ಜಿಯೋವನ್ನೂ ಒಳಗೊಂಡು ಪ್ರತಿಯೊಂದು ಸಂಸ್ಥೆಯೂ ಈ ನೆಲದ ಕಾನೂನು ಮತ್ತು ನೀತಿಗಳಿಗೆ ಬದ್ಧವಾಗಿರಬೇಕು ಮತ್ತು ಭಾರತೀಯ ಜನರಿಗೆ ಸೇವೆ ಒದಗಿಸಬೇಕು’ ಎಂದು ರಿಲಯನ್ಸ್ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್​ನ ಹೇಳಿಕೆ

ಜಿಯೋಗೂ ಅನುಮತಿ ಸಿಕ್ಕಿಲ್ಲ: ರಿಲಯನ್ಸ್

ಇನ್ನು ತನಗೆ ಭಾರತದಲ್ಲಿ ಕಾರ್ಯಾಚರಿಸಲು ಸರ್ಕಾರ ಅವಕಾಶ ಕೊಡುತ್ತಿಲ್ಲ ಎನ್ನುವ ಸ್ಟಾರ್​ಲಿಂಕ್ ಆರೋಪವನ್ನು ರಿಲಯನ್ಸ್ ಪರೋಕ್ಷವಾಗಿ ತಳ್ಳಿಹಾಕಿದೆ. ತಮ್ಮ ಜಿಯೋ ಸಂಸ್ಥೆಯೂ ಕೂಡ ಸ್ಯಾಟ್​ಕಾಮ್ ಸರ್ವಿಸ್​ಗಳಿಗೆ ಸರಕಾರದಿಂದ ಅನುಮತಿಗಾಗಿ ಕಾಯುತ್ತಿದೆ. ಭಾರತೀಯ ಕಂಪನಿಗಳಿಗೂ ಮತ್ತು ವಿದೇಶೀ ಕಂಪನಿಗಳಿಗೂ ಒಂದೇ ಕಾನೂನು ಅನ್ವಯ ಆಗುತ್ತದೆ ಎಂದು ರಿಲಯನ್ಸ್ ತಿಳಿಸಿದೆ.

ಏರ್ಟೆಲ್ ಸ್ಪಷ್ಟನೆ: ಭಾರ್ತಿ ಏರ್ಟೆಲ್ ಕೂಡ ಇದೇ ಅಭಿಪ್ರಾಯವನ್ನು ದಿನಗಳ ಹಿಂದೆಯೇ ಹೇಳಿತ್ತು. ತಾವು ಐದು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದೇವೆ. ಅನುಮತಿಗಾಗಿ ಸರದಿಯಲ್ಲಿದ್ದೇವೆ ಎಂದು ಏರ್ಟೆಲ್ ಛೇರ್ಮನ್ ಸುನಿಲ್ ಮಿಟ್ಟಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 5ಜಿ ನೆಟ್ವರ್ಕ್ ಅಳವಡಿಕೆ; ಜಿಯೋ ವೇಗಕ್ಕೆ ಇಲ್ಲ ಸಾಟಿ: ಆಕಾಶ್ ಅಂಬಾನಿ

ಮೂರು ಸಂಸ್ಥೆಗಳಿಗೆ ಸ್ಯಾಟ್​ಕಾಮ್ ಸರ್ವಿಸ್​ಗೆ ಸಿಕ್ಕಿದೆ ಲೈಸೆನ್ಸ್

ಭಾರತದಲ್ಲಿ ಸೆಟಿಲೈಟ್ ಕಮ್ಯೂನಿಕೇಶನ್ಸ್ ಸರ್ವಿಸ್ ನೀಡಲು ಸರ್ಕಾರ ಮೂರು ಸಂಸ್ಥೆಗಳಿಗೆ ಲೈಸೆನ್ಸ್ ನೀಡಿದೆ. ರಿಲಯನ್ಸ್, ಭಾರ್ತಿ ಏರ್ಟೆಲ್​ನ ಯೂಟೆಲ್​ಸ್ಯಾಟ್ ಒನ್​ವೆಬ್ ಮತ್ತು ಇಲಾನ್ಸ್ ಮಸ್ಕ್ ಅವರ ಸ್ಟಾರ್​ಲಿಂಕ್ ಸಂಸ್ಥೆಗಳಿಗೆ ಪರವಾನಿಗೆ ಸಿಕ್ಕಿದೆ. ಆದರೆ, ಆಪರೇಷನ್ಸ್ ಶುರು ಮಾಡಲು ಸರ್ಕಾರದಿಂದ ಒಂದಷ್ಟು ಕಟ್ಟುಪಾಡುಗಳು, ನಿಯಮಗಳು ಇವೆ. ಅವುಗಳನ್ನು ಪಾಲಿಸಿದಲ್ಲಿ ಮಾತ್ರ ಸೇವೆ ಆರಂಭಿಸುವ ಅನುಮತಿ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More