AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನವಲ್ಲ, ಡ್ರೋನ್ ಅಲ್ಲ, ಇದು ಜಿಗಿಯುವ ಕಾರು… ಫ್ಲೈಯಿಂಗ್ ಕಾರಿನತ್ತ ಟೆಸ್ಲಾ ಬಿಗ್ ಜಂಪ್

ಟೆಸ್ಲಾ ಸಂಸ್ಥೆಯು ಮೇಲೆ ಜಿಗಿಯುವ, ಪಲ್ಟಿ ಹೊಡೆಯುವ ಪ್ರೋಟೋಟೈಪ್ ಕಾರೊಂದನ್ನು ಅಭಿವೃದ್ಧಿಪಡಿಸಿದೆ. ಟೆಕ್ಸಾಸ್​ನಲ್ಲಿರುವ ಟೆಸ್ಲಾ ಆವರಣದಲ್ಲಿ ಏರ್ಪಡಿಸಲಾದ ವಿಶೇಷ ಪ್ರದರ್ಶನದಲ್ಲಿ ಈ ಕಾರು ಯಶಸ್ವಿಯಾಗಿ ಜಿಗಿದು ಕೆಳಗಿಳಿಯಿತು. ಮೇಲೆ ಜಿಗಿಯಲು ಮತ್ತು ಕೆಳಗೆ ಇಳಿಯಲು ಕೋಲ್ಡ್ ಗ್ಯಾಸ್ ಥ್ರಸ್ಟರ್ ತಂತ್ರಜ್ಞಾನವನ್ನು ಬಳಸಲಾಗಿರಬಹುದು.

ವಿಮಾನವಲ್ಲ, ಡ್ರೋನ್ ಅಲ್ಲ, ಇದು ಜಿಗಿಯುವ ಕಾರು... ಫ್ಲೈಯಿಂಗ್ ಕಾರಿನತ್ತ ಟೆಸ್ಲಾ ಬಿಗ್ ಜಂಪ್
ಟೆಸ್ಲಾ ಕಾರುImage Credit source: X @elonmusk
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2026 | 2:33 PM

Share

ಟೆಕ್ಸಾಸ್, ಅಕ್ಟೋಬರ್ 16: ಇಲಾನ್ ಮಸ್ಕ್ ಅವರ ಕಂಪನಿಗಳು ಸದಾ ಹೊಸ ಪ್ರಯೋಗ, ಹೊಸ ಅನ್ವೇಷಣೆಗಳಿಗೆ ಹೆಸರಾಗಿವೆ. ಸ್ಪೇಸ್ ಎಕ್ಸ್ ರಾಕೆಟ್​ಗಳು, ಟೆಸ್ಲಾ ಕಾರುಗಳು ಟ್ರೆಂಡ್ ಸೆಟ್ಟರ್​ಗಳೆನಿಸುತ್ತವೆ. ಇದೇ ವೇಳೆ, ಟೆಸ್ಲಾದ ಮಾಡಿಫೈಡ್ ಕಾರೊಂದು ಎತ್ತರಕ್ಕೆ ಜಿಗಿದು ಸುರಕ್ಷಿತವಾಗಿ ಕೆಳಗಿಳಿದ ಒಂದು ಪ್ರದರ್ಶನ ಗಮನ ಸೆಳೆದಿದೆ. ಅಮೆರಿಕದ ಟೆಕ್ಸಾಸ್​ನಲ್ಲಿರುವ ಟೆಸ್ಲಾದ ಘಟಕದ ಆವರಣದಲ್ಲಿ ನಡೆಸಲಾದ ಎರಡು ವಿಶೇಷ ಪ್ರದರ್ಶನದಲ್ಲಿ ಟೆಸ್ಲಾ ಕಾರುಗಳು ಸೈ ಎನಿಸಿವೆ. ಒಂದು ಕಾರು ಮೇಲೆ ಎತ್ತರಕ್ಕೆ ಏರಿ ಅಲ್ಲಿಂದ ಕೆಳಗೆ ಸುರಕ್ಷಿತವಾಗಿ ಇಳಿದಿದರೆ, ಮತ್ತೊಂದು ಕಾರು ಮೇಲಕ್ಕೆ ಜಿಗಿದು ದೂರದವರೆಗೆ ಹಾರಿ ಸುರಕ್ಷಿತವಾಗಿ ಇಳಿದಿದೆ.

ಇಲಾನ್ ಮಸ್ಕ್ ಮತ್ತು ಟೆಸ್ಲಾ ಕಂಪನಿ ಈ ಎರಡು ವಿಡಿಯೋಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಟೆಸ್ಲಾದ ರೋಡ್​ಸ್ಟರ್ ಇವಿ ಕಾರನ್ನು ತುಸು ಮಾರ್ಪಾಡು ಮಾಡಿ ಈ ಪ್ರಯೋಗಕ್ಕೆ ಬಳಸಲಾಗಿದೆ. ಸ್ಪೇಸ್ ಎಕ್ಸ್ ರಾಕೆಟ್​ಗಳು ಕೆಳಗೆ ಇಳಿಯುವಾಗ ಬಳಸಲಾದ ಥ್ರಸ್ಟರ್ ಟೆಕ್ನಾಲಜಿಯನ್ನು ಈ ಕಾರುಗಳಲ್ಲಿ ಉಪಯೋಗಿಸಿದಂತೆ ಕಂಡು ಬರುತ್ತದೆ. ಈ ಪ್ರೋಟೋಟೈಪ್ ಕಾರಿನ ಕಮರ್ಷಿಯಲ್ ತಯಾರಿಕೆ 2028ರಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಭಾರತಕ್ಕೆ ಬರಲಿ, ಸ್ಪರ್ಧಿಸಲು ನಾವ್ ರೆಡಿ; ತೊಡೆ ತಟ್ಟಿದ ಜಿಯೋ ಮತ್ತು ಏರ್​ಟೆಲ್

ಮೇಲೆ ಜಿಗಿದು ತುಸು ದೂರ ಹಾರಿದ ಕಾರು

ಇಲಾನ್ ಮಸ್ಕ್ ಅವರು ಹಂಚಿಕೊಂಡು ವಿಡಿಯೋದಲ್ಲಿ ವಿವಿಧ ಎತ್ತರಗಳ ಐದು ವಾಹನಗಳು ಪಾರ್ಕಿಂಗ್​ನಲ್ಲಿದ್ದಂತೆ ಒಂದರ ಪಕ್ಕ ಒಂದು ಸಾಲಾಗಿ ನಿಂತಿರುತ್ತವೆ. ಟೆಸ್ಲಾ ಕಾರು ಹತ್ತಿರ ಬರುತ್ತಲೇ ಮೇಲೆ ಜಂಪ್ ಮಾಡಿ ಪಲ್ಟಿ ಹೊಡೆಯುತ್ತಾ ಅಥವಾ ಫ್ಲಿಪ್ ಮಾಡುತ್ತಾ ಎಲ್ಲಾ ಐದು ಕಾರುಗಳನ್ನು ದಾಟಿ ಅಣತಿ ದೂರದಲ್ಲಿ ಕೆಳಗೆ ಸುರಕ್ಷಿತವಾಗಿ ಇಳಿಯುತ್ತದೆ.

ಇಲಾನ್ ಮಸ್ಕ್ ಅವರ ಟ್ವೀಟ್

ಇಲಾನ್ ಮಸ್ಕ್ ಅವರು ಈ ವಿಡಿಯೋಗೆ, ಫ್ಲೈಯಿಂಗ್ ಕಾರುಗಳಿಗೆ ಭವಿಷ್ಯ ಇದೆ ಎಂದು ಬಣ್ಣಿಸಿದ್ದಾರೆ. ಸದ್ಯಕ್ಕೆ ಈ ಕಾರು ಫ್ಲೈಯಿಂಗ್ ಹಂತಕ್ಕೆ ಹೋಗಿಲ್ಲವಾದರೂ ಜಿಗಿಯುವ ಹಂತದಲ್ಲಿವೆ.

ಟೆಸ್ಲಾದ ಎಕ್ಸ್ ಅಕೌಂಟ್​ನಿಂದ ಇನ್ನೊಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಹುತೇಕ ಲಂಬವಾಗಿರುವ ಮತ್ತು ಮೇಲೆ ತುಸು ಒಳಗಡೆಗೆ ಬಾಗಿರುವ ಒಂದು ರಾಂಪ್ ಅನ್ನು ನಿರ್ಮಿಸಲಾಗಿರುತ್ತದೆ. ಅದರ ತುದಿ ಕನಿಷ್ಠ 50 ಅಡಿಯಾದರೂ ಇದ್ದೀತು. ಟೆಸ್ಲಾ ಕಾರು ಆ ರಾಂಪ್​ನಲ್ಲಿ ಮೇಲಿನ ತುದಿಯವರೆಗೂ ಹೋಗಿ ಅಲ್ಲಿಂದ ಕೆಳಗೆ ಜಿಗಿದು ಇಳಿಯುತ್ತದೆ.

ಟೆಸ್ಲಾದಿಂದ ಟ್ವೀಟ್

ಇದನ್ನೂ ಓದಿ: ನವೆಂಬರ್ 1ರಿಂದ ಮೊಬೈಲ್ ಕರೆ ಮಾಡುವವರ ಅಧಿಕೃತ ಹೆಸರು ಪ್ರದರ್ಶಿಸಬೇಕು; ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ

ಕೆಳಗಿಳಿಯಲು ನೆರವಾಗುವ ತಂತ್ರಜ್ಞಾನ ಏನು?

ಟೆಸ್ಲಾ ಕಾರು ಮೇಲೆ ಜಿಗಿಯಲು ಮತ್ತು ಕೆಳಗೆ ಇಳಿಯಲು ಶೀತ ಅನಿಲ ಅಥವಾ ಕೋಲ್ಡ್ ಗ್ಯಾಸ್ ಥ್ರಸ್ಟರ್​ಗಳನ್ನು ಬಳಸುತ್ತದೆ. ಈ ಥ್ರಸ್ಟರ್​ಗಳನ್ನು ಸ್ಪೇಸ್ ಎಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಈ ಕಾರುಗಳು ಯಾವಾಗ ಲಭ್ಯವಾಗುತ್ತವೆ?

ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. 2028ರಲ್ಲಿ ಇದರ ಉತ್ಪಾದನೆ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಟೆಸ್ಲಾ ಈಗಾಗಲೇ ಡ್ರೈವರ್​ಲೆಸ್ ಕಾರುಗಳನ್ನು ತಯಾರಿಸುತ್ತಿದೆ. ಭಾರತದಲ್ಲಿ ಈ ಡ್ರೈವರ್​ಲೆಸ್ ಕಾರುಗಳಿಗೆ ಕಾನೂನು ಅನುಮತಿ ಸಿಕ್ಕಿಲ್ಲ. ಈ ಜಂಪಿಂಗ್ ಕಾರುಗಳೂ ಕೂಡ ಭಾರತದ ಟ್ರಾಫಿಕ್ ಸಂದಣಿಗೆ ಸೂಕ್ತವಲ್ಲದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More