AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಪ್ರಗತಿ ಅಳೆಯಲು ಜಿಡಿಪಿ ಸಾಲದು; ವಿಶ್ವಸಂಸ್ಥೆ ಬೆಂಬಲಿತ ತಜ್ಞರಿಂದ 31 ಸೂಚಕಗಳ ಬಳಕೆಗೆ ಶಿಫಾರಸು

ಆರ್ಥಿಕ ಪ್ರಗತಿಯನ್ನು ಬಿಂಬಿಸುವ ಜಿಡಿಪಿಯನ್ನು ದೇಶದ ಪ್ರಗತಿಗೆ ಮಾನದಂಡವಾಗಿ ಬಳಸಲಾಗುತ್ತದೆ. ಆದರೆ, ದೇಶದ ಪ್ರಗತಿ ಸೂಚಿಸಲು ಜಿಡಿಪಿ ಮಾತ್ರವೇ ಸಾಲದು, ಇನ್ನೂ ಹಲವು ಅಂಶಗಳನ್ನು ಪರಿಗಣಿಸಬೇಕು ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆ ನೇಮಿತ ತಜ್ಞರ ತಂಡವೊಂದು ಅಧ್ಯಯನ ಮಾಡಿ 31 ಸೂಚಕಗಳನ್ನು ತಯಾರಿಸಿ ಶಿಫಾರಸು ಮಾಡಿದೆ.

ದೇಶದ ಪ್ರಗತಿ ಅಳೆಯಲು ಜಿಡಿಪಿ ಸಾಲದು; ವಿಶ್ವಸಂಸ್ಥೆ ಬೆಂಬಲಿತ ತಜ್ಞರಿಂದ 31 ಸೂಚಕಗಳ ಬಳಕೆಗೆ ಶಿಫಾರಸು
ಜಿಡಿಪಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 07, 2026 | 7:14 PM

Share

ನವದೆಹಲಿ, ಸೆಪ್ಟೆಂಬರ್ 7: ದೇಶದ ಅಥವಾ ಜಗತ್ತಿನ ಆರ್ಥಿಕ ಪ್ರಗತಿಯನ್ನು ಅಳೆಯಲು ಕೇವಲ ಜಿಡಿಪಿ (ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ) ಒಂದನ್ನೇ ಮಾನದಂಡವಾಗಿ ಬಳಸುವುದು ಅಪೂರ್ಣ ಎಂಬ ಕಳವಳಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಗತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಲು ಬೇರೆ ಕ್ರಮಗಳನ್ನು ಪರಿಗಣೀಸಬೇಕು ಎನ್ನುವ ಸಲಹೆಗಳು ಕೆಲ ಗುಂಪುಗಳಿಂದ ಕೇಳಿಬರುತ್ತವೆ. ಇದೇ ವೇಳೆ, ವಿಶ್ವಸಂಸ್ಥೆ ನೇಮಿತ ತಜ್ಞರ ತಂಡವೊಂದು ಪ್ರಗತಿಯನ್ನು ಅಳೆಯಲು 31 ಸೂಚಕಗಳ ಮಾದರಿಯನ್ನು (Dashboard of 31 Indicators) ಪ್ರಸ್ತಾಪಿಸಿದೆ.

ಜಿಡಿಪಿಯು ಆರ್ಥಿಕ ವಹಿವಾಟನ್ನು ಮಾತ್ರ ತೋರಿಸುತ್ತದೆಯೇ ಹೊರತು, ಪರಿಸರದ ಸುಸ್ಥಿರತೆ, ಸಮಾಜದ ಕಲ್ಯಾಣ ಹಾಗೂ ಜನರ ಜೀವನಮಟ್ಟದ ನೈಜ ಚಿತ್ರಣವನ್ನು ನೀಡುವುದಿಲ್ಲ ಎಂಬುದು ಈ ವರದಿಯ ಸಾರಾಂಶವಾಗಿದೆ. ಉನ್ನತ ಮಟ್ಟದ ತಜ್ಞರ ತಂಡವು ಈ 31 ಸೂಚಕಗಳನ್ನು ನಾಲ್ಕು ತತ್ವಗಳ ಅಡಿಯಲ್ಲಿ ರೂಪಿಸಿದ್ದಾರೆ. ಈ ನಾಲ್ಕು ಅಂಶಗಳು ಈ ಕೆಳಕಂಡಂತಿವೆ:

  1. ಮೂಲ ತತ್ವಗಳು: ಶಾಂತಿ, ಮಾನವ ಹಕ್ಕು ಮತ್ತು ಭೂಮಿಯ ಒಳಿತು
  2. ಜನ ಕ್ಷೇಮ: ಜನರ ಭೌತಿಕ ಬದುಕಿನ ವಾತಾರಣ, ಕೆಲಸ, ಆರೋಗ್ಯ, ಶಿಕ್ಷಣ, ಭದ್ರತೆ, ಸಂಸ್ಥೆಗಳ ಗುಣಮಟ್ಟ, ಪರಿಸರ ಗುಣಮಟ್ಟ ಇತ್ಯಾದಿ ಜನರ ಜೀವನದ ಅನುಭವಗಳನ್ನು ಬಿಂಬಿಸುವುಂಥದ್ದು.
  3. ಸಮಾನತೆ ಮತ್ತು ಒಳಗೊಳ್ಳುವಿಕೆ
  4. ಸುಸ್ಥಿರತೆ ಮತ್ತು ಸ್ಪಂದನಶೀಲತೆ (Resilience)

ಈ ಮೇಲಿನ ನಾಲ್ಕು ಅಂಶಗಳ ಆಧಾರದ ಮೇಲೆ 31 ಸೂಚಕಗಳನ್ನು ಈ ತಜ್ಞರು ರೂಪಿಸಿದ್ದಾರೆ.

ಇದನ್ನೂ ಓದಿ: ಗ್ರಾಮೀಣ ಭಾಗದಲ್ಲಿ ಎಲ್​ಪಿಜಿ ರೀಫಿಲ್ ಬುಕಿಂಗ್​ಗಳ ನಡುವಿನ ಅಂತರ 45 ರಿಂದ 25 ದಿನಗಳಿಗೆ ಇಳಿಕೆ; ದೇಶದೆಲ್ಲೆಡೆ ಏಕರೀತಿಯ ಬುಕಿಂಗ್ ನಿಯಮ

ಜಿಡಿಪಿಯ ಮಿತಿಗಳು: ಜಿಡಿಪಿ ದರ ಹೆಚ್ಚಾದ ತಕ್ಷಣ ದೇಶದ ಎಲ್ಲಾ ಪ್ರಜೆಗಳ ಜೀವನಮಟ್ಟ ಸುಧಾರಿಸಿದೆ ಎಂದರ್ಥವಲ್ಲ. ಉದ್ಯೋಗಾವಕಾಶಗಳ ಕೊರತೆ, ಆದಾಯದ ಅಸಮಾನತೆ ಹಾಗೂ ಪರಿಸರ ಮಾಲಿನ್ಯದಂತಹ ಗಂಭೀರ ಸವಾಲುಗಳನ್ನು ಜಿಡಿಪಿ ಅಳತೆ ಮಾಡಲು ವಿಫಲವಾಗುತ್ತದೆ ಎಂಬುದು ಇವರ ಅನಿಸಿಕೆ.

ಸುಸ್ಥಿರ ಅಭಿವೃದ್ಧಿಗೆ ಆದ್ಯತೆ: ಕೇವಲ ಅಂಕಿ-ಅಂಶಗಳ ಆರ್ಥಿಕ ಜಿಗಿತಕ್ಕಿಂತ ಹೆಚ್ಚಾಗಿ, ದೀರ್ಘಕಾಲೀನ ಸುಸ್ಥಿರ ಬೆಳೆವಣಿಗೆ (Sustainable Growth) ಮತ್ತು ಮಾನವ ಬಂಡವಾಳದ (Human Capital) ಸುಧಾರಣೆಗೆ ಆದ್ಯತೆ ನೀಡುವುದು ಪ್ರಸ್ತುತ ತುರ್ತು ಅಗತ್ಯವಾಗಿದೆ.

ಇದನ್ನೂ ಓದಿ: ಚಿಪ್ ಡಿಸೈನ್​ನಲ್ಲಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳೇ ಮುಂದು; ಸಿಲಿಕಾನ್ ಸಿಟಿ ಮಾತ್ರವಲ್ಲ, ಸೆಮಿಕಂಡಕ್ಟರ್ ಹಬ್ ಕೂಡ ಆದ ಬೆಂಗಳೂರು

ಬದಲಾಗುತ್ತಿರುವ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ, ದೇಶಗಳ ನೈಜ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ನೀತಿ ನಿರೂಪಕರು ಈ ನೂತನ ಮಾದರಿಯನ್ನು ಪರಿಗಣಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!