AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಸರ್ಕಾರ vs ಆಂಥ್ರೋಪಿಕ್; ಎಐ ದಿಗ್ಗಜನ ಪರವಾಗಿ ಕೋರ್ಟ್ ತೀರ್ಪು

Anthropic wins court verdict against US government: ಆಂಥ್ರೋಪಿಕ್ ಸಂಸ್ಥೆಯನ್ನು ರಾಷ್ಟ್ರೀಯ ಅಪಾಯವೆಂದು ಹಣೆಪಟ್ಟಿ ಕಟ್ಟಿ ಕಪ್ಪುಪಟ್ಟಿಗೆ ಸೇರಿಸುವ ಅಮೆರಿಕ ಸರ್ಕಾರದ ಕ್ರಮವನ್ನು ಕೋರ್ಟ್ ರದ್ದುಗೊಳಿಸಿದೆ. ಸುರಕ್ಷತಾ ಮಿತಿ ದಾಟಿ ಎಐ ಅನ್ನು ಬಳಸಬೇಕೆನ್ನುವ ಸರ್ಕಾರದ ಬೇಡಿಕೆಗೆ ಆಂಥ್ರೋಪಿಕ್ ಸೊಪ್ಪು ಹಾಕದ ಕಾರಣ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಸರ್ಕಾರದ ಈ ಕ್ರಮವನ್ನು ಯುಎಸ್ ಕೋರ್ಟ್ ಅಮಾನ್ಯಗೊಳಿಸಿದೆ.

ಅಮೆರಿಕ ಸರ್ಕಾರ vs ಆಂಥ್ರೋಪಿಕ್; ಎಐ ದಿಗ್ಗಜನ ಪರವಾಗಿ ಕೋರ್ಟ್ ತೀರ್ಪು
ಆಂಥ್ರೋಪಿಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2026 | 11:57 AM

Share

ವಾಷಿಂಗ್ಟನ್, ಆಗಸ್ಟ್ 28: ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಆಂಥ್ರೋಪಿಕ್​ಗೆ (Anthropic) ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಪ್ರಮುಖ ಕಾನೂನು ಜಯ ಸಿಕ್ಕಿದೆ. ಎಐ ಸುರಕ್ಷತಾ ಮಿತಿ ದಾಟುವಂತಿಲ್ಲ ಎಂಬ ಗಟ್ಟಿ ನಿಲುವು ಹೊಂದಿದ್ದಕ್ಕೆ ಪ್ರತಿಯಾಗಿ ಆಂಥ್ರೋಪಿಕ್ ಸಂಸ್ಥೆಯನ್ನು ಕಟ್ಟುಪಟ್ಟಿಗೆ ಸೇರಿಸಿದ್ದ ಅಮೆರಿಕ ಸರ್ಕಾರಕ್ಕೆ ಕೋರ್ಟ್ ತೀರ್ಪು ಹಿನ್ನಡೆ ತಂದಿದೆ. ಅಮೆರಿಕದ ರಕ್ಷಣಾ ಸಚಿವಾಲಯವು (ಪೆಂಟಗನ್) ಆಂಥ್ರೋಪಿಕ್ ಕಂಪನಿಯನ್ನು ‘ರಾಷ್ಟ್ರೀಯ ಭದ್ರತಾ ಪೂರೈಕೆ ಸರಪಳಿ ಅಪಾಯ’ (National Security Supply-Chain Risk) ಎಂದು ವರ್ಗೀಕರಿಸಿ ಕಪ್ಪುಪಟ್ಟಿಗೆ ಸೇರಿಸಿದ್ದ ಆದೇಶವನ್ನು ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ರೀಟಾ ಲಿನ್ ರದ್ದುಗೊಳಿಸಿದ್ದಾರೆ.

ವಿವಾದದ ಹಿನ್ನೆಲೆ: ಆಂಥ್ರೋಪಿಕ್ ಸಂಸ್ಥೆಯು ತನ್ನ ‘ಕ್ಲಾಡ್’ (Claude) AI ಚಾಟ್‌ಬಾಟ್‌ ಅನ್ನು ಆಂತರಿಕ ಪರಿವೀಕ್ಷಣೆ (Domestic Surveillance) ಅಥವಾ ಸ್ವಾಯತ್ತ ಆಯುಧ ವ್ಯವಸ್ಥೆಗಳಿಗೆ (Autonomous Weapons Systems) ಬಳಸಲು ಯುಎಸ್ ಮಿಲಿಟರಿಗೆ ಅನುಮತಿ ನೀಡಲು ನಿರಾಕರಿಸಿತ್ತು. ಹೀಗಾಗಿ, ಸರ್ಕಾರವು ಈ ಸಂಸ್ಥೆಯನ್ನು ಕಟ್ಟುಪಟ್ಟಿಗೆ ಸೇರಿಸಿದ್ದಿರಬಹುದು ಎನ್ನಲಾಗಿದೆ.

ಕೋರ್ಟ್ ನೀಡಿದ ತೀರ್ಪು: ಸರ್ಕಾರದ ಕ್ರಮವು ಕಾನೂನುಬಾಹಿರ ಹಾಗೂ ಸೇಡು ತೀರಿಸಿಕೊಳ್ಳುವ ತತ್ತ್ವದ ಮೇಲೆ ಆಧಾರಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಸರ್ಕಾರದ ವಿಮರ್ಶಕರ ವಿರುದ್ಧ ಕಾನೂನುಬಾಹಿರವಾಗಿ ಕ್ರಮ ಕೈಗೊಳ್ಳಲು ಬರುವುದಿಲ್ಲ ಮತ್ತು ಇದು ವಾಕ್ ಸ್ವಾತಂತ್ರ್ಯದ (First Amendment) ಉಲ್ಲಂಘನೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ; ಭಾರತದಲ್ಲಾದ ಅಪರಾಧಕ್ಕೆ ಅಮೆರಿಕದಲ್ಲಿ ಕಾನೂನು ಕ್ರಮ ಯಾಕೆ? ಇಲ್ಲಿದೆ ಮಾಹಿತಿ

ಸರ್ಕಾರದ ಕಪ್ಪುಪಟ್ಟಿಗೆ ಸೇರ್ಪಡೆಯಾಗಿದ್ದರೆ ಆಂಥ್ರೋಪಿಕ್​ಗೆ ಏನಾಗುತ್ತಿತ್ತು?

ಪೆಂಟಗನ್ ತೆಗೆದುಕೊಂಡಿದ್ದ ಕಪ್ಪುಪಟ್ಟಿ ನಿರ್ಧಾರದಿಂದಾಗಿ ಕಂಪನಿಗೆ ಕೋಟಿಗಟ್ಟಲೆ ಡಾಲರ್ ಮೌಲ್ಯದ ಮಿಲಿಟರಿ ಒಪ್ಪಂದಗಳು ಕೈತಪ್ಪುವ ಭೀತಿಯಿತ್ತು. ನ್ಯಾಯಾಲಯದ ಈ ತೀರ್ಪು ಆಂಥ್ರೋಪಿಕ್ ಸಂಸ್ಥೆಗೆ ಮತ್ತು ಜವಾಬ್ದಾರಿಯುತ AI ನೀತಿಗಳನ್ನು ಅನುಸರಿಸುವ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ಜಯ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು