Wheat Flour Price: ಗೋಧಿ ಹಿಟ್ಟಿನ ದರ ಗಣನೀಯ ಹೆಚ್ಚಳ; ಗೋಧಿ ಪೂರೈಸುವಂತೆ ಸರ್ಕಾರಕ್ಕೆ ವರ್ತಕರ ಆಗ್ರಹ

ಈ ವರ್ಷ ಸರ್ಕಾರವು ಮುಕ್ತ ಮಾರುಕಟ್ಟೆ ಯೋಜನೆಯಡಿ ಗೋಧಿಯನ್ನು ಖಾಸಗಿ ಮಾರುಕಟ್ಟೆಗೆ ಬಿಡುಗಡೆ ಮಾಡದಿರುವುದೂ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Wheat Flour Price: ಗೋಧಿ ಹಿಟ್ಟಿನ ದರ ಗಣನೀಯ ಹೆಚ್ಚಳ; ಗೋಧಿ ಪೂರೈಸುವಂತೆ ಸರ್ಕಾರಕ್ಕೆ ವರ್ತಕರ ಆಗ್ರಹ
ಸಾಂದರ್ಭಿಕ ಚಿತ್ರImage Credit source: The Indian Expres
Follow us
TV9 Web
| Updated By: Ganapathi Sharma

Updated on:Nov 28, 2022 | 1:12 PM

ನವದೆಹಲಿ: ಚಿಲ್ಲರೆ ಮಾರಾಟದ (Retail) ಗೋಧಿ ಹಿಟ್ಟಿನ (Wheat Flour) ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಒಂದು ವರ್ಷದ ಅವಧಿಯಲ್ಲಿ ಗೋಧಿ ಹಿಟ್ಟಿನ ಬೆಲೆ ಶೇಕಡಾ 17ರಷ್ಟು ಏರಿಕೆಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಗೋಧಿ (Wheat) ಲಭ್ಯತೆ ಕಡಿಮಯಾಗಿರುವುದೇ ದರ ಹೆಚ್ಚಳಕ್ಕೆ ಕಾರಣ ಎಂದು ವರ್ತಕರು ಮತ್ತು ಮಿಲ್​ಗಳ ಮೂಲಗಳು ತಿಳಿಸಿವೆ. ಸರ್ಕಾರವು ದಾಸ್ತಾನಿಟ್ಟಿರುವ ಗೋಧಿಯನ್ನು ಮಾರುಕಟ್ಟೆಗೆ ಪೂರೈಸಬೇಕೆಂದು ವರ್ತಕರು ಆಗ್ರಹಿಸಿದ್ದಾರೆ. ಪೂರೈಕೆ ಕೊರತೆಯಿಂದಾಗಿ ಗೋಧಿ ಹಿಟ್ಟಿನ ದರ ಹೆಚ್ಚಾಗುತ್ತಿದೆ. ಸದ್ಯ ಒಂದು ಕೆಜಿ ಗೋಧಿ ಹಿಟ್ಟಿನ ದರ 36.98 ರೂ. ಆಗಿದ್ದು, ಅಕ್ಕಿ ದರದ ಸನಿಹಕ್ಕೆ ಬಂದಿದೆ ಎಂಬುದು ಗ್ರಾಹಕ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳಿಂದ ತಿಳಿದುಬಂದಿದೆ.

ಗೋಧಿ ದರ ಹೆಚ್ಚಾಗಿರುವುದೇ ಗೋಧಿ ಹಿಟ್ಟಿನ ದರ ಹೆಚ್ಚಳಕ್ಕೆ ಪ್ರಮುಖ ಕಾರಣ. ಈ ವರ್ಷ ಸರ್ಕಾರವು ಮುಕ್ತ ಮಾರುಕಟ್ಟೆ ಯೋಜನೆಯಡಿ ಗೋಧಿಯನ್ನು ಖಾಸಗಿ ಮಾರುಕಟ್ಟೆಗೆ ಬಿಡುಗಡೆ ಮಾಡದಿರುವುದೂ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ‘ರೋಲರ್ ಫ್ಲೋರ್ ಮಿಲ್ಸ್ ಅಸೋಸಿಯೇಷನ್’ನ ರಾಕೇಶ್ ಆನಂದ್ ತಿಳಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. ಸಾಮಾನ್ಯವಾಗಿ ಸರ್ಕಾರವು ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ದಾಸ್ತಾನಿಟ್ಟಿರುವ ಗೋಧಿಯನ್ನು ಮುಕ್ತ ಮಾರುಕಟ್ಟೆ ಯೋಜನೆಯಡಿ ಪೂರೈಕೆ ಮಾಡುತ್ತದೆ. ದರ ನಿಯತ್ರಣದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ.

ಗೋದಾಮುಗಳಿಂದ ಮಾರುಕಟ್ಟೆಗೆ ಬಾರದ ಗೋಧಿ

ದಾಸ್ತಾನು ಕಡಿಮೆಯಾಗಿ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರ ಈ ವರ್ಷ ಮುಕ್ತ ಮಾರುಕಟ್ಟೆ ಯೋಜನೆಯಡಿ ಖಾಸಗಿ ಮಾರುಕಟ್ಟೆಗಳಿಗೆ ಗೋಧಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಉತ್ತರ ಭಾರತದಲ್ಲಿ ಗೋಧಿ ಬೆಲೆ ಪ್ರತಿ ಕ್ವಿಂಟಲ್​ಗೆ 2,900 ರೂ. ತಲುಪಿದೆ. ಪ್ರತಿ ಕ್ವಿಂಟಲ್​ಗೆ ನಿಗದಿಯಾಗಿರುವ ಕನಿಷ್ಠ ಬೆಂಬಲ ಬೆಲೆ 2,125 ರೂ. ಇದೆ ಎಂದು ಪಂಜಾಬ್​ನ ಖನ್ನಾ ಮಂಡಿಯ ವ್ಯಾಪಾರಿ ವಿನೋದ್ ಜೋಹರ್ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಸರ್ಕಾರವು ಗೋಧಿ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಸದ್ಯ ಗೋಧಿ ದರ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿದೆ. ಇದರಿಂದ ರೈತರಿಗೆ ಪ್ರಯೋಜನವಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಗೋಧಿಯ ಚಿಲ್ಲರೆ ಅಥವಾ ರಿಟೇಲ್ ಮಾರಾಟ ದರದಲ್ಲಿ ತುಸು ಹೆಚ್ಚಳವಾಗಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.

ಬಿಸಿ ಗಾಳಿಯಿಂದ ಉತ್ಪಾದನೆ ಕುಸಿತ

ಹಿಂದಿನ ವರ್ಷ ಬಿಸಿ ಗಾಳಿಯ ಪರಿಣಾಮ ಗೋಧಿ ಉತ್ಪಾದನೆ 3 ದಶಲಕ್ಷ ಟನ್​​ಗಳಷ್ಟು ಕುಸಿತವಾಗಿತ್ತು. 106 ದಶಲಕ್ಷ ಟನ್​ ಗೋಧಿ ಉತ್ಪಾದನೆಯಾಗಿತ್ತು. ಸರ್ಕಾರಕ್ಕೆ 18.7 ದಶಲಕ್ಷ ಟನ್ ಗೋಧಿ ಸಂಗ್ರಹಿಸಲಷ್ಟೇ ಸಾಧ್ಯವಾಗಿತ್ತು. ಅದಕ್ಕಿಂತ ಹಿಂದಿನ ವರ್ಷ 43.3 ದಶಲಕ್ಷ ಟನ್ ಗೋಧಿ ದಾಸ್ತಾನಿರಿಸಿತ್ತು ಸರ್ಕಾರ. ದೇಶದಲ್ಲಿ ಆಹಾರ ಸಂಕಷ್ಟ ತಲೆದೋರದಂತೆ ಮಾಡಲು ಮತ್ತು ಬೆಲೆ ಏರಿಕೆ ನಿಯಂತ್ರಣದಲ್ಲಿರಲು ಮೇ ತಿಂಗಳಲ್ಲಿ ಗೋಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Mon, 28 November 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?