ಗೆಳತಿಗಾಗಿ ಪತ್ನಿ ಬಾಳಿಗೆ ಖಳನಾದ ಪತಿರಾಯ, ಕಟ್ಟಿಕೊಂಡವಳ ಜೀವ ತೆಗೆದ್ನಾ ‘ಕಿಲ್ಲರ್’ ಡಾಕ್ಟರ್?
ಬೆಳಗಾವಿ: ವೃತ್ತಿಯಲ್ಲಿ ಡಾಕ್ಟರ್ ಆಗಿ ಹೆಂಡತ ಪಾಲಿಗೆ ಯಮನಾದ ಪತಿರಾಯ ಕಿರುಕುಳ ನೀಡಿ ಪತ್ನಿಯನ್ನ ಸಾಯುವಂತೆ ಮಾಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆಕೆ ಈಗಷ್ಟೇ ಹೊಸ ಬದುಕು ಆರಂಭಸಿದ್ದ 23 ವರ್ಷ ವಯಸ್ಸಿನ ಸುಷ್ಮಿತಾ ಪಾಟೀಲ್ ಆದರೆ ಜೀವನ ನೋಡುವ ಮುನ್ನವೇ ಬದುಕು ಮುಗಿಸಿದ್ದಾಳೆ. ಸುಖವಾಗಿ ಬಾಳೊ ಹೊತ್ತಿನಲ್ಲಿ ಈಕೆ ಬಾರದ ಲೋಕ ಸೇರಿದ್ದಾಳೆ. ಆದ್ರೆ, ಈಕೆಯ ಸಾವಿನ ನೆರಳು ಕಟ್ಟಿಕೊಂಡವನ ಕೊರಳಿಗೆ ಬಿದ್ದಿದೆ. ಕಟ್ಟಿಕೊಂಡವಳ ಜೀವ ತೆಗೆದ್ನಾ ‘ಕಿಲ್ಲರ್’ ಡಾಕ್ಟರ್? ಸುಶ್ಮಿತಾ ಪಾಟೀಲ್. ಬೆಳಗಾವಿಯ […]
ಬೆಳಗಾವಿ: ವೃತ್ತಿಯಲ್ಲಿ ಡಾಕ್ಟರ್ ಆಗಿ ಹೆಂಡತ ಪಾಲಿಗೆ ಯಮನಾದ ಪತಿರಾಯ ಕಿರುಕುಳ ನೀಡಿ ಪತ್ನಿಯನ್ನ ಸಾಯುವಂತೆ ಮಾಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆಕೆ ಈಗಷ್ಟೇ ಹೊಸ ಬದುಕು ಆರಂಭಸಿದ್ದ 23 ವರ್ಷ ವಯಸ್ಸಿನ ಸುಷ್ಮಿತಾ ಪಾಟೀಲ್ ಆದರೆ ಜೀವನ ನೋಡುವ ಮುನ್ನವೇ ಬದುಕು ಮುಗಿಸಿದ್ದಾಳೆ. ಸುಖವಾಗಿ ಬಾಳೊ ಹೊತ್ತಿನಲ್ಲಿ ಈಕೆ ಬಾರದ ಲೋಕ ಸೇರಿದ್ದಾಳೆ. ಆದ್ರೆ, ಈಕೆಯ ಸಾವಿನ ನೆರಳು ಕಟ್ಟಿಕೊಂಡವನ ಕೊರಳಿಗೆ ಬಿದ್ದಿದೆ.
ಕಟ್ಟಿಕೊಂಡವಳ ಜೀವ ತೆಗೆದ್ನಾ ‘ಕಿಲ್ಲರ್’ ಡಾಕ್ಟರ್? ಸುಶ್ಮಿತಾ ಪಾಟೀಲ್. ಬೆಳಗಾವಿಯ ರಾಯಭಾಗ ತಾಲೂಕಿನ ಬಾವಚಿ ಗ್ರಾಮದವಳು. ಒಂದು ವರ್ಷ ಮೂರು ತಿಂಗಳ ಹಿಂದಷ್ಟೇ, ಚಿಕ್ಕೋಡಿಯ ಮೀರಾಪುರದ ಸಂತೋಷ್ ಪಾಟೀಲ್ ಎಂಬಾತನ ಜತೆ ಮದ್ವೆ ಮಾಡಿದ್ದಾರೆ. ವೈದ್ಯನಾಗಿದ್ದ ಸಂತೋಷ್ಗೆ 120 ಗ್ರಾಂ ಚಿನ್ನಾಭರಣ ನೀಡಿ ಅದ್ಧೂರಿಯಾಗಿ ಮದ್ವೆ ಮಾಡಿಕೊಟ್ಟಿದ್ರಂತೆ. ಮದುವೆ ಆರಂಭದಲ್ಲಿ ಸಂತೋಷ ಹೆಂಡತಿ ಜತೆ ಚೆನ್ನಾಗೇ ಇದ್ದ. ಆದ್ರೆ, ನಂತರ ಬೇರೆ ಯುವತಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಹೀಗಾಗಿ, ಸುಷ್ಮಿತಾಗೆ ಕಿರುಕುಳ ಕೊಡೋಕೆ ಶುರು ಮಾಡಿದ್ದಾನೆ. ಆದ್ರೆ, ವಾರದ ಹಿಂದೆ ಸುಷ್ಮಿತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಸಂತೋಷ್ ಇಂಜೆಕ್ಷನ್ನಲ್ಲಿ ಸ್ಲೋಪಾಯ್ಸನ್ ಕೊಟ್ಟು ಕೊಂದಿದ್ದಾನೆ ಅಂತ ಆರೋಪ ಕೇಳಿ ಬಂದಿದೆ.
ಇನ್ನು, ಅಕ್ರಮ ಸಂಬಂಧ ಹೊಂದಿದ್ದ ಯುವತಿ ಜತೆ ಹೊಂದಾಣಿಕೆಯಿಂದ ಇರು ಅಂತ ಸಂತೋಷ್ ಹೆಂಡತಿಗೆ ಕಿರುಕುಳ ಕೊಡ್ತಿದ್ನಂತೆ. ಈ ವಿಷ್ಯವನ್ನ, ಸುಷ್ಮಿತಾ ತವರು ಮನೆಯವ್ರ ಜತೆ ಹೇಳಿಕೊಂಡಿದ್ದಾಳೆ. ಬಳಿಕ, ರಾಜೀ ಪಂಚಾಯ್ತಿ ನಡೆದಿದೆ. ಈ ವೇಳೆ, ಅಕ್ರಮ ಸಂಬಂಧವನ್ನ ಬಿಡೋದಕ್ಕೆ, ಐದು ಲಕ್ಷ ಕೇಳಿದ್ದಾನೆ. ಸುಷ್ಮಿತಾ ಪೋಷಕರು, ಆರು ತಿಂಗಳ ಹಿಂದೆ ಮೂರು ಲಕ್ಷ ಕೊಟ್ಟಿದ್ದಾರೆ. ಇಷ್ಟಾದ್ರೂ ಸಂತೋಷ್, ಪತ್ನಿಗೆ ಕಿರುಕುಳ ಕೊಟ್ಟಿದ್ದಾನೆ. ಅಲ್ಲದೆ, ಅತ್ತೆ,ಮಾವ, ನಾದಿನಿಯರಿಗೂ ಟಾರ್ಚರ್ ಕೊಟ್ಟಿದ್ದಾರೆ. ಇದೀಗ, ಸುಷ್ಮಿತಾ ಮೃತಪಟ್ಟ ನಂತರ, ಪೊಲೀಸ್ರು ಸಂತೋಷ್ ಹಾಗೂ ಅವರ ತಂದೆಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಒಟ್ನಲ್ಲಿ, ಓದಿರೋ ಹುಡುಗ. ಜತೆಗೆ ಡಾಕ್ಟರ್ ಬೇರೆ ಅಂತ ಪೋಷಕರು ಮಗಳನ್ನ ಮದ್ವೆ ಮಾಡುದ್ರು. ಆದ್ರೆ, ಬಾಳಿ ಬದುಕ ಬೇಕಿದ್ದ ಮಗಳು ಉಸಿರು ಚೆಲ್ಲಿದ್ದಾಳೆ. ಮಗಳ ಸಾವಿಗೆ ನ್ಯಾಯ ಬೇಕು ಅಂತ ಹೆತ್ತವರು ಗೋಳಾಡ್ತಿದ್ದಾರೆ.