ಭಾರತದಲ್ಲಿ ಪ್ರಗತಿ ಹೊಂದುತ್ತಿರುವ ಡ್ರೋನ್ ತಂತ್ರಜ್ಞಾನ, ವೃತ್ತಿಗಳಲ್ಲಿ ಹೇಗೆ ಭರವಸೆ ಮೂಡಿಸಬಲ್ಲದು?
ಪಂಜಾಬ್ ನಲ್ಲಿ ಮೊದಲ ಡ್ರೋನ್ ಟ್ರೈನಿಂಗ್ ಹಬ್ ಸ್ಥಾಪಿಸಲಾಗುತ್ತಿದ್ದು, ಈ ಸಂಸ್ಥೆ, ವಿದ್ಯಾರ್ಥಿಗಳು, ಕೈಗಾರಿಕೆಗಳು ಮತ್ತು ಸರ್ಕಾರಗಳಿಗೆ ವೈಜ್ಞಾನಿಕ ತಳಹದಿ ಸೃಷ್ಟಿಸುತ್ತಿದೆ. ತನ್ಮೂಲಕ ಡ್ರೋನ್ ಬಲವರ್ಧಿತ ವ್ಯವಸ್ಥೆ ಮತ್ತು ತಂತ್ರಜ್ಞರ ಬೇಡಿಕೆ ಹಾಗೂ ಕುಶಲ ಡ್ರೋನ್ ಪೈಲಟ್ ಗಳ ಬೇಡಿಕೆ ಈಡೇರಿಸುವತ್ತ ಗಮನಹರಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯವಾಗುತ್ತಿದೆ. ಡ್ರೋನ್ ಗಳು ರೊಬೋಟಿಕ್ಸ್, ಏರೋಸ್ಪೇಸ್ ಮತ್ತು ಮೆಕಾಟ್ರಾನಿಕ್ಸ್ ನ ಛೇದಕಗಳಾಗಿವೆ. ಇವು ಮೂಲಭೂತವಾಗಿ ಪೈಲಟ್ ಇಲ್ಲದ ವಿಮಾನಗಳೆಂದು ಪರಿಭಾವಿಸಲಾಗಿದ್ದು, ಪ್ಯಾಕೇಜ್ ವಿತರಣೆ, ವೀಡಿಯೋ ರೆಕಾರ್ಡಿಂಗ್, ಮಿಲಿಟರಿ ಸರ್ವೆಲೆನ್ಸ್, ಮನರಂಜನಾ ಚಟುವಟಿಕೆಗಳು, ಹವಾಮಾನ ವಿಶ್ಲೇಷಣೆ, ಸಂಚಾರ ನಿಗಾವಣೆ, ಬೆಂಕಿ ಅವಘಡ ಮತ್ತು ಕೃಷಿ ಸೇವೆಗಳನ್ನು ಇದರಿಂದ ನಿರ್ವಹಿಸಲಾಗುತ್ತಿದೆ. ಅನ್ ಮ್ಯಾನಡ್ ಏರಿಯಲ್ ವೆಹಿಕಲ್- ಯುಎವಿ ತಂತ್ರಜ್ಞಾನ ಭಾರತದಲ್ಲಿ ಜನಪ್ರಿಯವಾಗುತ್ತಿರುವಾಗ ಆಟೋಮೇಟೆಡ್ ಸೈನ್ಸ್ ಸ್ ನ ಅಂಗಳದಲ್ಲಿ ಹೊಸ ಪ್ರಯತ್ನಗಳು ಹೆಚ್ಚುತ್ತಿವೆ. ಇದು ಭವಿಷ್ಯದಲ್ಲಿ ಬಿಲಿಯನ್ ಗಟ್ಟಲೆ ಹೂಡಿಕೆಯನ್ನು ಕಾಣಲಿದೆ.
ಡ್ರೋನ್ ಉದ್ಯಮದ ಬೆಳವಣಿಗೆ ನಿಯತಾಂಕಗಳು
ವಾಣಿಜ್ಯ ಪ್ರಪಂಚದಲ್ಲಿ ಕ್ರಾಂತಿಕಾರಕ ಅಲೆ ತರಲಿರುವ ಭಾರತೀಯ ಡ್ರೋನ್ ಎಕೊ ಸಿಸ್ಟಮ್ ತಂತ್ರಜ್ಞಾನ ಪ್ರಿಯರಿಗೆ ಹಲವು ಭರವಸೆಯ ಅವಕಾಶಗಳನ್ನು ಸೃಷ್ಟಿಸಲಿದೆ.
1. ಅಂಕಿ-ಅಂಶಗಳ ವರದಿ ಪ್ರಕಾರ, ಡ್ರೋನ್ ಉದ್ಯಮದಲ್ಲಿ ಮುಂದಿನ ವರ್ಷ ಶೇಕಡಾ 15 ರಿಂದ 20ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ. ಇದು ಅಂದಾಜು ಶೇಕಡಾ 20ರಷ್ಟು ಅವಕಾಶಗಳನ್ನು ಪೈಲಟ್ ಗಳಿಗೆ ಸೃಷ್ಟಿಸಲಿದೆ. ಪ್ರತಿ ತಿಂಗಳು ಅಂದಾಜು 750 ರಿಂದ 900 ಉದ್ಯೋಗಗಳು ಪಟ್ಟಿಯಾಗಲಿವೆ.
2. ಡ್ರೋನ್ ತಂತ್ರಜ್ಞಾನವನ್ನು ವಿವಿಧ ವಾಣಿಜ್ಯ ವಲಯಗಳಾದ ಕೃಷಿ, ಕಾನೂನು ಜಾರಿ, ರಕ್ಷಣೆ ಕಣ್ಗಾವಲು ಮತ್ತು ಸಾರಿಗೆಯಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. 2026ರ ವೇಳೆಗೆ ಸುಮಾರು 2 ಬಿಲಿಯನ್ ನಷ್ಟು ಆದಾಯ ಇದರಿಂದ ಗಳಿಕೆಯಾಗಲಿದೆ.
ಡ್ರೋನ್ ಫ್ರೇಮಿಂಗ್ ಮತ್ತು ವರ್ಕ್ ಮಾಡೆಲ್
ವೈರ್ ಲೆಸ್ ತಂತ್ರಜ್ಞಾನ ಮತ್ತು ಭೌತಿಕ ಪರಿಕಲ್ಪನೆಗಳನ್ನು ಬಳಸಿ ಡ್ರೋನ್ ಗಳನ್ನು ಅನೇಕ ಉದ್ದೇಶಗಳಿಗೆ ವಿನ್ಯಾಸಗೊಳಿಸಲಾಗಿದೆ. ಅವುಗಳು ಏರ್ ಕ್ರಾಫ್ಟ್ ಮಾಡಲ್ ನಿಂದ ಹಸ್ತದ ಗಾತ್ರವರೆಗೆ ಇದೆ. ಜಿಪಿಎಸ್ ಸಿಸ್ಟಮ್ ಮತ್ತು ಜಾಯ್ ಸ್ಟಿಕ್ ಹೊಂದಿರುವ ಈ ತಂತ್ರಜ್ಞಾನ ಮೊಬೈಲ್ ಪೋನ್ ನಲ್ಲಿ ವಿಡಿಯೋ ಗೇಮ್ಸ್ ಆಡುವಷ್ಟೇ ಸರಳ. ಡ್ರೋನ್ ನ ವೈರ್ ಲೆಸ್ ತಂತ್ರಜ್ಞಾನ, ಬಳಕೆದಾರರಿಗೆ ವ್ಯಾಪಕ ಹಾಗೂ ಸ್ಪಷ್ಟವಾದ ದೃಷ್ಟಿ, ನಿಗಾ ಹಾಗೂ ದೃಶ್ಯ ಸೆರೆಗೆ ನೈಜಕಾಲದಲ್ಲಿ ಒದಗಿಸುತ್ತದೆ. ಡ್ರೋನ್ ಉಪಕರಣಗಳ ಯೂಸರ್ ಇಂಟರ್ ಫೇಸ್ –ಯುಐ ಸಂಪೂರ್ಣ ಮೆಕಾನೈಸ್ಡ್ ಸ್ಟ್ರಕ್ಚರ್ ಹೊಂದಿದ್ದು, ಇದರ ಗೈರೊ ಸ್ಕೋಫ್, ಅಕ್ಸ್ ಲೆರೊಮೀಟರ್ ಮತ್ತು ಸಂಕಿರ್ಣ ತಂತ್ರಜ್ಞಾನ ಒಳಗೊಂಡಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಡು ನಾಟ್ ಡಿಸ್ಟರ್ಬ್ ಆಯ್ಕೆ ಕಂಡು ಶಾಕ್ ಆದ ಬಳಕೆದಾರ: ಏನಿದೆ ಇದರಲ್ಲಿ?
ಡ್ರೋನ್ ಉದ್ಯಮ ಮತ್ತು ಅದರ ಬಳಕೆಗೆ ವಿವಿಧ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ವ್ಯಾಪಕವಾಗಿ ಆದ್ಯತೆ ನೀಡಲಾಗುತ್ತಿದೆ. ಭಾರತ ಸರ್ಕಾರ ಮತ್ತು ಅದರ ಆಡಳಿತವಿರುವ ಇಲಾಖೆಗಳು ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನದ ಗರಿಷ್ಠ ಬಳಕೆಯನ್ನು 2020ರಿಂದ ಮಾಡುತ್ತಿದ್ದು, ಇ-ಪ್ರಾಪರ್ಟಿ ಲೆಡ್ಚರ್ ಗಳನ್ನು ಗ್ರಾಮಗಳ ಸರ್ವೇಕ್ಷಣೆ ಹಾಗೂ ಮತ್ತಿತರ ಸಂಬಂಧಿತ ಕೆಲಸಗಳಿಗೆ ಸೃಷ್ಟಿಸಲು ಅಳವಡಿಸಿಕೊಂಡಿದೆ. ನಾಲ್ಕು ವರ್ಷಗಳಲ್ಲಿ 6,60,000 ಗ್ರಾಮಗಳ ನಕ್ಷೆ ಮಾಡಲು ಡ್ರೋನ್ ತಂತ್ರಜ್ಞಾನವನ್ನು ಬಳಸಲು ಸರ್ಕಾರ ಯೋಜಿಸುತ್ತಿದೆ.
ಚಂಡೀಗಡ್ ವಿಶ್ವವಿದ್ಯಾಲಯ: ನ್ಯಾಕ್ ( NAAC) ನ್ಯಾಷನಲ್ ಅಸೆಸ್ ಮೆಂಟ್ ಅಂಡ್ ಅಕ್ರೆಡಿಷನ್ ಕೌನ್ಸಿಲ್ ನಿಂದ A+ ಶ್ರೇಣಿ ಪಡೆದಿರುವ ಮೊದಲ 5 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಶಿಕ್ಷಣಕ್ಕೆ ಸಂಶೋಧನೆ ಆಧರಿತ ಪರಿಸರಕ್ಕೆ ಒತ್ತು ನೀಡಿದೆ. ಪಂಜಾಬ್ ನಲ್ಲಿ ಮೊದಲ ಡ್ರೋನ್ ಟ್ರೈನಿಂಗ್ ಹಬ್ ಸ್ಥಾಪಿಸಲಾಗುತ್ತಿದ್ದು, ಈ ಸಂಸ್ಥೆ, ವಿದ್ಯಾರ್ಥಿಗಳು, ಕೈಗಾರಿಕೆಗಳು ಮತ್ತು ಸರ್ಕಾರಗಳಿಗೆ ವೈಜ್ಞಾನಿಕ ತಳಹದಿ ಸೃಷ್ಟಿಸುತ್ತಿದೆ. ತನ್ಮೂಲಕ ಡ್ರೋನ್ ಬಲವರ್ಧಿತ ವ್ಯವಸ್ಥೆ ಮತ್ತು ತಂತ್ರಜ್ಞರ ಬೇಡಿಕೆ ಹಾಗೂ ಕುಶಲ ಡ್ರೋನ್ ಪೈಲಟ್ ಗಳ ಬೇಡಿಕೆ ಈಡೇರಿಸುವತ್ತ ಗಮನಹರಿಸಿದೆ. ಈ ವಿನೂತನ ಹಬ್ ಆಕಾಂಕ್ಷಿಗಳಿಗೆ ನವೀನ ಮತ್ತು ಅತ್ಯಾಧುನಿಕ ತರಬೇತಿಯನ್ನು ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಒದಗಿಸಲಿದೆ. ನೀವು ತಂತ್ರಜ್ಞಾನ ಪ್ರಿಯರಾಗಿದ್ದು ಮತ್ತು ಡ್ರೋನ್ ನಂತಹ ಸ್ವಯಂಚಾಲಿತ ಉಪಕರಣಗಳ ಜ್ಞಾನವನ್ನು ಗಳಿಸಲು ಇಚ್ಛಿಸುತ್ತಿದ್ದರೆ ಚಂಡೀಗಡ ವಿಶ್ವವಿದ್ಯಾಲಯದಲ್ಲಿರುವ ಪಂಜಾಬ್ ನ ಮೊದಲ ಡ್ರೋನ್ ಹಬ್ ಗೆ ಇಂದೇ ಭೇಟಿ ಕೊಡಿ.
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Wed, 15 June 22