AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka By Election 2026 Voting Live: ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲೂ ಮತದಾನ ಮುಕ್ತಾಯ

Assam, Kerala, Puducherry Assembly Elections 2026 Live Updates: ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಹಾಗೂ ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಇಂದು (ಏಪ್ರಿಲ್ 9) ನಡೆದಿದೆ. ಕೇರಳದ 140 ಸ್ಥಾನಗಳಿಗೆ, ಅಸ್ಸಾಂನಲ್ಲಿ 126 ಸ್ಥಾನಗಳಿಗೆ ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆದಿದೆ.

Karnataka By Election 2026 Voting Live: ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲೂ ಮತದಾನ ಮುಕ್ತಾಯ
ವಿಧಾನಸಭೆ ಚುನಾವಣೆ ಲೈವ್ (ಸಾಂದರ್ಭಿಕ ಚಿತ್ರ)
ಗಣಪತಿ ಶರ್ಮಾ
| Edited By: |

Updated on:Apr 09, 2026 | 7:48 PM

Share

Davangere South, Bagalkot By Elections 2026 Voting Live News Updates: ಬೆಂಗಳೂರು/ನವದೆಹಲಿ, ಏಪ್ರಿಲ್ 9: ಕರ್ನಾಟಕದ ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ (Karnataka By-Election) ನಡೆಯುತ್ತಿದೆ. ಮತ್ತೊಂದೆಡೆ, ಕೇರಳದ 140 ಕ್ಷೇತ್ರ, ಅಸ್ಸಾಂನ 126 ಕ್ಷೇತ್ರ, ಪುದುಚೇರಿಯ 30 ಕ್ಷೇತ್ರಗಳಿಗೆ (Assembly Elections) ವೋಟಿಂಗ್ ನಡೆದಿದೆ. ಬಾಗಲಕೋಟೆಯಲ್ಲಿ 322 ಮತಗಟ್ಟೆ ತೆರೆಯಲಾಗಿದ್ದು, ದಾವಣಗೆರೆ ದಕ್ಷಿಣದಲ್ಲಿ 284 ಮತಗಟ್ಟೆಗಳಿತ್ತು. ಸುಮಾರು ಎರಡೂವರೆ ಸಾವಿರ ಚುನಾವಣಾ ಸಿಬ್ಬಂದಿಯನ್ನು ಬಾಗಲಕೋಟೆಯಲ್ಲಿ ನಿಯೋಜಿಸಲಾಗಿದ್ದು, ದಾವಣಗೆರೆಯಲ್ಲಿ 1ಸಾವಿರದ 489 ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು. ಬಾಗಲಕೋಟೆ ಕಣದಲ್ಲಿ ಒಟ್ಟು 9 ಅಬ್ಯರ್ಥಿಗಳಿದ್ರೆ, ದಾವಣಗೆರೆ ದಕ್ಷಿಣದಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳಿದ್ದರು. ಹಾಗೆಯೇ ಬಾಗಲಕೋಟೆಯಲ್ಲಿ ಒಟ್ಟು 2ಲಕ್ಷದ 59 ಸಾವಿರದ 797 ಮತದಾರರಿದ್ರೆ, ದಾವಣಗೆರೆಯಲ್ಲಿ 2ಲಕ್ಷದ 31 ಸಾವಿರದ 72 ಮತದಾರರಿದ್ದರು.

ಇನ್ನು ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ. ಕೇರಳದ 140 ವಿಧಾನಸಭಾ ಸ್ಥಾನಗಳು, ಅಸ್ಸಾಂನಲ್ಲಿ 126 ಮತ್ತು ಪುದುಚೇರಿಯ 30 ವಿಧಾನಸಭಾ ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ  ಸಂಜೆಯವರೆಗೆ ಮತದಾನ ನಡೆದಿದೆ. ಕೇರಳದಲ್ಲಿ, 2.71 ಕೋಟಿ ಮತದಾರರು 883 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ 1.32 ಕೋಟಿ ಪುರುಷರು, 1.39 ಕೋಟಿ ಮಹಿಳೆಯರು ಮತ್ತು 273 ಟ್ರಾನ್ಸ್‌ಜೆಂಡರ್ ಮತದಾರರು ಸೇರಿದ್ದಾರೆ. ಅಸ್ಸಾಂನಲ್ಲಿ ಒಟ್ಟು 2.50 ಕೋಟಿ ಮತದಾರರಿದ್ದು, ಅವರು 31,490 ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 09 Apr 2026 07:48 PM (IST)

    ದೇಶಾದ್ಯಂತ ಇಂದಿನ ಚುನಾವಣೆ ಮುಕ್ತಾಯ; ಅಸ್ಸಾಂ, ಕೇರಳದಲ್ಲಿ ಅತಿ ಹೆಚ್ಚು ಮತದಾನ

    ದೇಶಾದ್ಯಂತ ಇಂದು ನಡೆದ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ.

    ಕೇರಳ ಮತ್ತು ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ.

    ಪುದುಚೇರಿಯಲ್ಲೂ ಕಳೆದೆಲ್ಲ ಬಾರಿಗಿಂತ ಹೆಚ್ಚಿನ ಮತ ಚಲಾವಣೆಯಾಗಿದೆ.

    ಕರ್ನಾಟಕದ ಉಪಚುನಾವಣೆಯಲ್ಲಿ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ  ಶೇ. 60ಕ್ಕೂ ಹೆಚ್ಚು ಮತದಾನ ನಡೆದಿದೆ.

    ಬಾಗಲಕೋಟೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 65.68 ರಷ್ಟು ಮತದಾನವಾಗಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಶೇ. 63.04 ರಷ್ಟು ಮತದಾನವಾಗಿದೆ.

  • 09 Apr 2026 07:07 PM (IST)

    ದಾವಣಗೆರೆಯಲ್ಲಿ ಮತದಾನ ಮುಕ್ತಾಯ; ಮೆಹಬೂಬ್ ನಗರದಲ್ಲಿ ಹೈಡ್ರಾಮಾ

    ದಾವಣಗೆರೆಯಲ್ಲಿ ಮತದಾನ ಮುಕ್ತಾಯವಾಗಿದೆ ಕೊನೆಯ ಗಳಿಗೆಯಲ್ಲಿ ಮಿಲ್ಲತ್ ಕಾಲೇಜ್ ಬಳಿ ಬಿಜೆಪಿ ಹಾಗೂ ಪೊಲೀಸರ ನಡುವೆ ಹೈಡ್ರಾಮಾ ನಡೆದಿದೆ ದಾವಣಗೆರೆ ಮತದಾನ ಪ್ರಕ್ರಿಯೆ ಅಂತ್ಯ ದಾವಣಗೆರೆ ಮಹಬೂಬ್ ನಗರದಲ್ಲಿ ಹೈಡ್ರಾಮಾ ಕೊನೆ‌ ಕ್ಷಣದಲ್ಲಿ ಮತ ಹಾಕಲು ಬಂದು ಮತಗಟ್ಟೆ ಗೇಟ್ ಹೊರಗೆ ನಿಂತ ನೂರಾರು ಮತದಾರರು ಮತಗಟ್ಟೆ ಗೇಟ್ ಒಳಗೆ ಇದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಚುನಾವಣಾ ಆಯೋಗ ಚುನಾವಣಾ ಆಯೋಗದ ನಿಯಮಗಳಂತೆ ಮತದಾನದ ಅವಧಿ ಮುಗಿದ ಬಳಿಕ ಮತಗಟ್ಟೆ ಹೊರಗಿರುವ ಮತದಾರಿಗೆ ಮತದಾನ ಮಾಡಲು ಅವಕಾಶ ಇಲ್ಲ. ದಾವಣಗೆರೆಯ ಮೆಹಬೂಬ್ ನಗರದ ಮಿಲ್ಲತ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿರೋ 7 ಮತಗಟ್ಟೆಗಳು 7 ಬೂತ್ ಗಳ ಗೇಟ್ ಗಳನ್ನು ಬಂದ್ ಮಾಡುವಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯ

  • 09 Apr 2026 06:31 PM (IST)

    ಪುದುಚೇರಿಯಲ್ಲಿ ಎಲ್ಲ ರಾಜ್ಯಗಳಿಗಿಂತ ಹೆಚ್ಚಿನ ಮತದಾನ

    ಸಂಜೆ 5 ಗಂಟೆಯವರೆಗೆ ಪುದುಚೇರಿ 86.92% ಮತದಾನದೊಂದಿಗೆ ಮುನ್ನಡೆ ಸಾಧಿಸಿದೆ. ಅಸ್ಸಾಂ 84.42%, ಕೇರಳ 75.01% ಮತದಾನದ ಪ್ರಮಾಣವನ್ನು ದಾಖಲಿಸಿದೆ.

    ಇಂದು ಸಂಜೆ 5 ಗಂಟೆಯ ವೇಳೆಗೆ ಮತದಾನ ಮತ್ತಷ್ಟು ವೇಗ ಪಡೆದುಕೊಂಡಿತು. ಪುದುಚೇರಿಯಲ್ಲಿ 86.92% ರಷ್ಟು ಅತಿ ಹೆಚ್ಚು ಮತದಾನ ದಾಖಲಾಗಿದೆ. ನಂತರ ಅಸ್ಸಾಂನಲ್ಲಿ 84.42% ರಷ್ಟು ಮತದಾನವಾಗಿದೆ. ಕೇರಳದಲ್ಲಿ 75.01% ರಷ್ಟು ಮತದಾನವಾಗಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

  • 09 Apr 2026 05:48 PM (IST)

    ಬಾಗಲಕೋಟೆಯಲ್ಲಿ ಶೇ. 65.2 ಮತದಾನ ದಾಖಲು

    ಬಾಗಲಕೋಟೆ ಉಪ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 65.2ರಷ್ಟು ಮತದಾನ ದಾಖಲು

  • 09 Apr 2026 04:41 PM (IST)

    ಅಸ್ಸಾಂನಲ್ಲಿ 75.9.% ಮತದಾನ, ಕೇರಳದಲ್ಲಿ 62.71%, ಪುದುಚೇರಿಯಲ್ಲಿ 72.40% ಮತದಾನ

    ಚುನಾವಣಾ ಆಯೋಗದ ಪ್ರಕಾರ, ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅಸ್ಸಾಂನಲ್ಲಿ 75.91 ಪ್ರತಿಶತದಷ್ಟು ಮತದಾನ ದಾಖಲಾಗಿದೆ. ಇದು ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು. ಕೇರಳದಲ್ಲಿ 62.71 ಪ್ರತಿಶತ ಮತದಾನವಾಗಿದೆ. ಪುದುಚೇರಿಯಲ್ಲಿ ಶೇ. 72.40 ರಷ್ಟು ಮತದಾನವಾಗಿದೆ.

  • 09 Apr 2026 03:59 PM (IST)

    ದಾವಣಗೆರೆಯಲ್ಲಿ ಶೇ. 49.66ರಷ್ಟು ಮತದಾನ

    ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಸಂಜೆ 4 ಗಂಟೆವರೆಗೆ  49.66% ಮತದಾನ ನಡೆದಿದೆ.

  • 09 Apr 2026 03:00 PM (IST)

    ದಾವಣಗೆರೆಯಲ್ಲಿ ಕಾಂಗ್ರೆಸ್​, SDPI ಕಾರ್ಯಕರ್ತರ ನಡುವೆ ವಾಗ್ವಾದ

    ದಾವಣಗೆರೆಯ ಬಾಷಾನಗರದ ಮುಖ್ಯ ರಸ್ತೆಯ ಬಳಿ ಮತದಾನದ ಸಂದರ್ಭ ಕಾಂಗ್ರೆಸ್​, SDPI ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಮತಗಟ್ಟೆಯ ಹೊರಗೆ ಟೇಬಲ್ ಹಾಕಿದ್ದ ವಿಚಾರಕ್ಕೆ ವಾಗ್ವಾದ ನಡೆದಿದ್ದು, ನಂತರ ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿ ನಿಯಂತ್ರಿಸಿದರು.

  • 09 Apr 2026 02:30 PM (IST)

    ಮಧ್ಯಾಹ್ನದ ವರೆಗಿನ ಮತದಾನದ ಅಪ್​ಡೇಟ್ ಇಲ್ಲಿದೆ ನೋಡಿ

    ಅಸ್ಸಾಂನಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ 60 ರಷ್ಟು ಮತದಾನವಾಗಿದೆ. ಅಸ್ಸಾಂನಂತೆಯೇ, ಪುದುಚೇರಿಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ, ಕೇಂದ್ರಾಡಳಿತ ಪ್ರದೇಶದಲ್ಲಿ ಶೇ 57 ರಷ್ಟು ಮತದಾನ ದಾಖಲಾಗಿದೆ. ಕೇರಳದಲ್ಲಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 50 ರಷ್ಟು ಮತದಾನವಾಗಿದೆ.

  • 09 Apr 2026 01:34 PM (IST)

    ಕೇರಳದಲ್ಲಿ ಬಿಜೆಪಿ ಮುಖ್ಯವಲ್ಲ: ಶಶಿ ತರೂರ್

    ಕೇರಳದ ತಿರುವನಂತಪುರಂನಲ್ಲಿ ಮತ ಚಲಾಯಿಸಿದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತನಾಡಿ, ‘ಇಲ್ಲಿ ಬಿಜೆಪಿ ಮುಖ್ಯವಲ್ಲ. ಇದು ವಿಧಾನಸಭೆಯಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನವಿಲ್ಲದ ರಾಜ್ಯ. ಪ್ರಸ್ತುತ ಎಲ್‌ಡಿಎಫ್ ಸರ್ಕಾರ ಮತ್ತು ಅದಕ್ಕೆ ಸವಾಲು ಹಾಕುತ್ತಿರುವ ಯುಡಿಎಫ್ ನಡುವೆ ಹೋರಾಟವಿದೆ’ ಎಂದು ಹೇಳಿದರು.

  • 09 Apr 2026 01:12 PM (IST)

    ಬೈ ಎಲೆಕ್ಷನ್ ಗೆಲ್ಲಲು ಮತದಾರರಿಗೆ ಹಣ ಹಂಚಿತಾ ಕಾಂಗ್ರೆಸ್​​? ವಿಡಿಯೋ ವೈರಲ್

    ಬಾಗಲಕೋಟೆಯ ನವನಗರದ ವಾಂಬೆ ಕಾಲೋನಿಯಲ್ಲಿ ಕಾರಲ್ಲಿ ಬಂದವರು ಮತದಾರರಿಗೆ ಹಣ ನೀಡಿ ಆಮಿಷವೊಡ್ಡಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸಿಗರು ಕೇವಲ ಐದುನೂರು ಕೊಟ್ಟರು ಎಂದು ಮಹಿಳೆಯೋರ್ವರು ಅಲವತ್ತುಕೊಂಡ ವಿಡಿಯೋ ವೈರಲ್ ಆಗಿದೆ.

  • 09 Apr 2026 12:34 PM (IST)

    ಮತದಾರರಿಗೆ ಹಣ ಹಂಚಿಕೆ ಆರೋಪ; ಕಾಂಗ್ರೆಸ್ ಮುಖಂಡನ ಕಾರಿಗೆ ಮುತ್ತಿಗೆ!

    ಬಾಗಲಕೋಟೆಯ ನವನಗರದ ವಾಂಬೆ ಕಾಲೋನಿಯಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪಕ್ಷದವರು ತಮಗೆ ತಲಾ 500 ರೂಪಾಯಿ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ನೋಟು ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ‘ಕೇವಲ ಐನೂರು ರೂಪಾಯಿ ಮಾತ್ರ ಕೊಟ್ಟಿದ್ದಾರೆ’ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ.

    ಇದೇ ವೇಳೆ, ಹಣ ಹಂಚಲು ಬಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಸಂತೋಷ್ ಎಂಬುವವರ ಕಾರಿಗೆ ಸ್ಥಳೀಯರು ಮುತ್ತಿಗೆ ಹಾಕಿದರು. ಜನರ ಆಕ್ರೋಶ ಕಂಡು ಕಾರಿನಿಂದ ಇಳಿದು ಬಂದ ಸಂತೋಷ್, ‘ನನ್ನ ಕಾರಿಗೆ ಹೊಡೆದವರು ಯಾರು’ ಎಂದು ಪ್ರಶ್ನಿಸಿ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದರು. ಮತದಾನದ ದಿನವೇ ಬಹಿರಂಗವಾಗಿ ಹಣದ ಸದ್ದು ಕೇಳಿಬರುತ್ತಿರುವುದು ಚುನಾವಣಾ ಕಣದಲ್ಲಿ ತಲ್ಲಣ ಮೂಡಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • 09 Apr 2026 12:30 PM (IST)

    ಪುದುಚೇರಿ ಸಿಎಂ ರಂಗಸ್ವಾಮಿ ಸರಳತೆಯ ವಿಡಿಯೋ ವೈರಲ್

    ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆಗೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ.

  • 09 Apr 2026 12:27 PM (IST)

    ಅಸ್ಸಾಂ: ಕಾಮರೂಪದಲ್ಲಿ ಮತದಾರರ ಉದ್ದನೆಯ ಸರದಿ ಸಾಲು

    ಅಸ್ಸಾಂನ ಕಾಮರೂಪದ ಮತಗಟ್ಟೆಗಳಲ್ಲಿ ಮತದಾರರ ಉದ್ದನೆಯ ಸರದಿ ಸಾಲುಗಳು ಕಂಡುಬಂದಿವೆ. ಸದ್ಯ ಮತದಾನ ಪ್ರಮಾಣದಲ್ಲಿ ಅಸ್ಸಾಂ ಮುಂದಿದೆ.

  • 09 Apr 2026 12:25 PM (IST)

    ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ವಿವರ

    ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮತದಾನ ಪ್ರಗತಿಯಲ್ಲಿದ್ದು, ಬೆಳಿಗ್ಗೆ 11 ಗಂಟೆಯವರೆಗೆ ಕ್ರಮವಾಗೊ ಶೇ 37 ಹಾಗೂ ಶೇ 37.06 ರಷ್ಟು ಮತದಾನವಾಗಿದೆ. ಅಸ್ಸಾಂನಲ್ಲಿ ಮತದಾನವು ಕೇರಳಕ್ಕಿಂತಲೂ ಹೆಚ್ಚಾಗಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ, ರಾಜ್ಯದಲ್ಲಿ ಶೇಕಡಾ 39 ರಷ್ಟು ಮತದಾನವಾಗಿದೆ.

  • 09 Apr 2026 12:07 PM (IST)

    ಮತದಾನಕ್ಕಾಗಿ ಗೋವಾದಿಂದ ಬಸ್ಸಲ್ಲಿ ಬಂದ 70-80 ಜನ

    ದಾವಣಗೆರೆ ಉಪಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕಾಗಿ ಸುಮಾರು 70-80 ಮಂದಿ ಗೋವಾದಿಂದ ಬಸ್ಸಿನಲ್ಲಿ ಆಗಮಿಸಿದರು. ಊರಿಗೆ ಬಂದು ಮತ ಚಲಾಯಿಸಿದರು.

  • 09 Apr 2026 11:27 AM (IST)

    ಪುದುಚೇರಿ: ಮತ ಚಲಾಯಿಸಿದ ಬೈಕ್‌ನಲ್ಲಿ ಹೊರಟ ಸಿಎಂ ರಂಗಸ್ವಾಮಿ

    ಪುದುಚೇರಿ ಮುಖ್ಯಮಂತ್ರಿ ಮತ್ತು ಮಂಗಲಂ-ತಟ್ಟಂಚವಾಡಿ ವಿಧಾನಸಭಾ ಕ್ಷೇತ್ರಗಳ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ (ಎಐಎನ್‌ಆರ್‌ಸಿ) ಅಭ್ಯರ್ಥಿ ಎನ್. ರಂಗಸ್ವಾಮಿ, ಮತ ಚಲಾಯಿಸಿದ ನಂತರ ಬೈಕ್‌ನಲ್ಲಿ ಹೊರಟರು.

  • 09 Apr 2026 11:17 AM (IST)

    ಬಾಗಲಕೋಟೆ, ಹಾಸ್ಟೆಲ್​ ವಿದ್ಯಾರ್ಥಿಗಳ ಮತದಾನಕ್ಕೆ ಅಡ್ಡಿ?

    ಬಾಗಲಕೋಟೆ ನಗರದ ನವನಗರದಲ್ಲಿರುವ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಮತದಾನ ಮಾಡಲು ವಾರ್ಡನ್ ಹೊರಗೆ ಬಿಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸುಮಾರು 20 ರಿಂದ 30 ವಿದ್ಯಾರ್ಥಿನಿಯರು ತಮಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಬಿವಿಪಿ (ABVP) ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ನವನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ವಾರ್ಡನ್ ಅಡ್ಡಿಪಡಿಸುತ್ತಿದ್ದಾರೆ ಎಂಬುದು ವಿದ್ಯಾರ್ಥಿನಿಯರು ದೂರಿದ್ದಾರೆ. ಈ ಘಟನೆಯಿಂದಾಗಿ ಹಾಸ್ಟೆಲ್ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

  • 09 Apr 2026 10:13 AM (IST)

    ಅಸ್ಸಾಂನಲ್ಲಿ 9 ಗಂಟೆಯವರೆಗೆ ಅತ್ಯಧಿಕ ಮತದಾನ

    ಅಸ್ಸಾಂನಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಅತ್ಯಧಿಕ ಮತದಾನವಾಗಿದೆ. ಮತ್ತೊಂದೆಡೆ, ಕೇರಳ-ಪುದುಚೇರಿಯಲ್ಲಿ ಶೇ 17 ಕ್ಕಿಂತ ಹೆಚ್ಚು ವೋಟಿಂಗ್ ಆಗಿದೆ.

  • 09 Apr 2026 10:06 AM (IST)

    ಕೇರಳ ಮತ್ತು ಪುದುಚೇರಿ ಮತದಾನ ಅಪ್​ಡೇಟ್

    ಬೆಳಿಗ್ಗೆ 9 ಗಂಟೆಯ ಹೊತ್ತಿಗೆ, ಕೇರಳದಲ್ಲಿ 16.23% ಮತ್ತು ಪುದುಚೇರಿಯಲ್ಲಿ 17.41% ಮತದಾನವಾಗಿದೆ.

  • 09 Apr 2026 10:04 AM (IST)

    ಬಾಗಲಕೋಟೆ: ಶೇ 11.89ರಷ್ಟು ಮತದಾನ

    ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 11.89ರಷ್ಟು ಮತದಾನವಾಗಿದೆ.

  • 09 Apr 2026 09:37 AM (IST)

    ದಾವಣಗೆರೆ, ಬಾಗಲಕೋಟೆಯಲ್ಲಿ ಮತದಾನ ಬಿರುಸು

    ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಬೆಳಗ್ಗೆಯೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಮತದಾನ ಚುರುಕು ಪಡೆದುಕೊಂಡಿದೆ.

  • 09 Apr 2026 09:15 AM (IST)

    ಸಚಿವೆ ವೀಣಾ ಜಾರ್ಜ್ ಹೇಳಿದ್ದೇನು?

    ಈ ಅವಧಿಯಲ್ಲಿ ಸರ್ಕಾರ ಕೈಗೊಂಡ ಎಲ್ಲಾ ಅಭಿವೃದ್ಧಿ ಯೋಜನೆಗಳಿಂದಾಗಿ ಎಲ್‌ಡಿಎಫ್‌ಗೆ ಖಂಡಿತವಾಗಿಯೂ ಮೂರನೇ ಅವಕಾಶ ಸಿಗಲಿದೆ. ಉದಾಹರಣೆಗೆ ನೀವು ಪಟ್ಟಣಂತಿಟ್ಟವನ್ನೇ ನೋಡಿ, ಪಟ್ಟಣದಲ್ಲಿ ಎಂತಹ ಅದ್ಭುತ ಬದಲಾವಣೆಗಳು ಸಂಭವಿಸಿವೆ, ಕ್ರೀಡಾಂಗಣಗಳು, ನೋಡಬಹುದು, ಆಸ್ಪತ್ರೆಗಳು, ಹೊಸ ಕಚೇರಿಗಳುಮತ್ತು ಹೊಸ ರಸ್ತೆಗಳನ್ನು ನೋಡಬಹುದು. ಜನರು ಎಲ್‌ಡಿಎಫ್‌ಗೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

  • 09 Apr 2026 08:37 AM (IST)

    ಕೇರಳ ವಿಧಾನಸಭಾ ಚುನಾವಣೆಯಲ್ಲಿ ಗಣ್ಯರ ಮತದಾನ

    ಕೇರಳ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಗಣ್ಯರು, ಮಾಲಿವುಡ್​​ ಪ್ರಮುಖ ನಟರು ಬೆಳಗ್ಗೆಯೇ ಮತದಾನ ಮಾಡಿದರು. ಮಾಲಿವುಡ್​​​ ನಟ ಮೋಹನ್ ಲಾಲ್, ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಮತದಾನ ಮಾಡಿದರು.

  • 09 Apr 2026 08:05 AM (IST)

    Assembly Elections 2026 Voting Live: ಮತದಾರರ ಸ್ವಾತಿಸಿದ ರೋಬೋಟ್!

    ಪುದುಚೇರಿ ಚುನಾವಣೆ 2026: ಮತ ಚಲಾಯಿಸಲು ಪುದುಚೇರಿಯ ವಿಒಸಿ ಸರ್ಕಾರಿ ಶಾಲೆಗೆ ಆಗಮಿಸುವ ಮತದಾರರನ್ನು ರೋಬೋಟ್ ನೀಲಾ ಸ್ವಾಗತಿಸಿದ ವಿಡಿಯೋ ಇಲ್ಲಿದೆ ನೋಡಿ.

  • 09 Apr 2026 08:03 AM (IST)

    Assembly Elections 2026 Voting Live: ವೀರಣ್ಣ ಚರಂತಿಮಠ ಪುತ್ರನಿಂದ ಮತದಾನ

    ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪುತ್ರ ನವೀನ ಚರಂತಿಮಠ ಬೆಳಗ್ಗೆಯೇ ಮತದಾನ ಮಾಡಿದರು.

  • 09 Apr 2026 07:53 AM (IST)

    Assembly Elections 2026 Voting Live: ದಾವಣಗೆರೆಯಲ್ಲಿ ಮತಗಟ್ಟೆಗಳಿಗೆ ಹರಿದು ಬರುತ್ತಿರುವ ಜನ

    ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯ ಮತದಾರರು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಜಾಲಿ‌ನಗರದ ಮತಗಟ್ಟೆ ಸಂಖ್ಯೆ 60,61,62,63 ಬಳಿ ನೂರಾರು ಜನ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತದಾರರನ್ನು ಸೆಳೆಯಲು ಕೊನೆಯ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

  • 09 Apr 2026 07:51 AM (IST)

    Assembly Elections 2026 Voting Live: ಮೂರೂ ರಾಜ್ಯಗಳಲ್ಲಿಮತದಾನ ಆರಂಭ

    ಕೇರಳದ 140, ಅಸ್ಸಾಂನ 126 ಹಾಗೂ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಮೂರೂ ರಾಜ್ಯಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾನ ಕೇಂದ್ರಗಳ ಬಳಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದ್ದು, ಸುಗಮ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಶುರುವಾಗಿದೆ.

  • 09 Apr 2026 07:48 AM (IST)

    Assembly Elections 2026 Voting Live: ಮತ ಚಲಾಯಿಸಿದ ನಟ ಮೋಹನ್ ಲಾಲ್

    ಕೇರಳಂ ಸಚಿವ ಮತ್ತು ನೇಮಮ್‌ನ ಎಲ್‌ಡಿಎಫ್ ಅಭ್ಯರ್ಥಿ ವಿ. ಶಿವನ್‌ಕುಟ್ಟಿ ಮತ್ತು ನಟ ಮೋಹನ್ ಲಾಲ್ ತಿರುವನಂತಪುರದ ಮುದವನ್ಮುಗಲ್‌ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

  • 09 Apr 2026 07:44 AM (IST)

    Assembly Elections 2026 Voting Live: ನಾಗರಿಕ ಕರ್ತವ್ಯದ ಹಬ್ಬ, ಮೋದಿ ಬಣ್ಣನೆ

    2026 ರ ಅಸ್ಸಾಂ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ, ಅಸ್ಸಾಂನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಬೇಕು. ರಾಜ್ಯದ ಯುವಕರು, ಮಹಿಳೆಯರು ಮತ್ತು ಮತದಾರರು ಉತ್ಸಾಹದಿಂದ ಭಾಗವಹಿಸಿ ಈ ಚುನಾವಣೆಯನ್ನು ಪ್ರಜಾಪ್ರಭುತ್ವ ಮತ್ತು ನಾಗರಿಕ ಕರ್ತವ್ಯದ ಹಬ್ಬವಾಗಿ ಪರಿವರ್ತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಂದು ಸಂದೇಶದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

  • 09 Apr 2026 07:42 AM (IST)

    Assembly Elections 2026 Voting Live: ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಪ್ರಧಾನಿ ಮೋದಿ ಕರೆ

    ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಇಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮೂಲಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಅವರು ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪ್ರತ್ಯೇಕ ಪೋಸ್ಟ್‌ಗಳನ್ನು ಮಾಡಿದ್ದಾರೆ. ಅವರ ಒಂದು ಪೋಸ್ಟ್‌ನಲ್ಲಿ, ‘2026 ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೇರಳದ ಜನರಿಗೆ ನಾನು ಮನವಿ ಮಾಡುತ್ತೇನೆ. ದಾಖಲೆಯ ಭಾಗವಹಿಸುವಿಕೆಯು ಕೇರಳದ ಪ್ರಜಾಪ್ರಭುತ್ವ ಮನೋಭಾವವನ್ನು ಮತ್ತಷ್ಟು ಬಲಪಡಿಸುತ್ತದೆ. ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರು ಮುಂದೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

  • 09 Apr 2026 07:28 AM (IST)

    Assembly Elections 2026 Voting Live: ಶಿರಮಗೊಂಡನಹಳ್ಳಿಯ ಮತಗಟ್ಟೆಯಲ್ಲಿ ತಾಂತ್ರಿಕ ಸಮಸ್ಯೆ

    ದಾವಣಗೆರೆಯ ಶಿರಮಗೊಂಡನಹಳ್ಳಿಯ 242 ರ ಮತಘಟ್ಟೆಯಲ್ಲಿ ವಿವಿ ಪ್ಯಾಟ್​ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಏಳು ಗಂಟೆಗೆ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಮತದಾರರು ಕಾದು ನಿಂತಿದ್ದಾರೆ. ಸದ್ಯ, ಸಿಬ್ಬಂದಿ ವಿವಿ ಪ್ಯಾಟ್ ಸರಿಪಡಿಸುತ್ತಿದ್ದಾರೆ.

  • 09 Apr 2026 07:23 AM (IST)

    Assembly Elections 2026 Voting Live: ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ವೋಟಿಂಗ್ ಆರಂಭ

    ಅಸ್ಸಾಂನ 126 ಸ್ಥಾನಗಳು, ಕೇರಳದ 140 ಸ್ಥಾನಗಳು ಮತ್ತು ಪುದುಚೇರಿಯ ಎಲ್ಲಾ 30 ಸ್ಥಾನಗಳಿಗೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದೆ. ಈ ಚುನಾವಣೆಯಲ್ಲಿ, ಅಸ್ಸಾಂನಲ್ಲಿ 722 ಅಭ್ಯರ್ಥಿಗಳು ಮತ್ತು ಕೇರಳದಲ್ಲಿ 883 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

  • 09 Apr 2026 07:22 AM (IST)

    Assembly Elections 2026 Voting Live: ಬಾಗಲಕೋಟೆ, ದಾವಣಗೆರೆಯಲ್ಲಿ ಮತದಾನ ಶುರು

    ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಗೆ ಮತದಾನ ಶುರುವಾಗಿದೆ. ಬಾಗಲಕೋಟೆ ಕ್ಷೇತ್ರದ 322 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು,  ಸರದಿ ಸಾಲಲ್ಲಿ ನಿಂತು ಮತದಾರರು ಮತ ಚಲಾಯಿಸುತ್ತಿದ್ದಾರೆ.

Published On - Apr 09,2026 7:20 AM

Follow Us