ಬೀದರ್ ಲೋಕಸಭಾ ಚುನಾವಣೆ 2024 ಫಲಿತಾಂಶ: ಸಾಗರ್ ಖಂಡ್ರೆ ಗೆಲುವು

Bidar Lok Sabha Election Results 2024 Live Counting Updates:ಬಿಜೆಪಿ ಪಾಲಿಗೆ ಅತ್ಯಂತ ಭರವಸೆಯ ಜಿಲ್ಲೆಯಾಗಿದೆ ಬೀದರ್. ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ಇದ್ದರೂ 1991ರ ಬಳಿಕ ಬಿಜೆಪಿ ಇಲ್ಲಿ ನಿರಂತರ 5 ಬಾರಿ ಗೆಲುವು ಸಾಧಿಸಿದೆ. ಪ್ರಸ್ತುತ ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಇಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದರೆ, ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಮೂಲಕ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲ್ಲುವ ಕನಸು ಕಂಡಿದೆ.

ಬೀದರ್ ಲೋಕಸಭಾ ಚುನಾವಣೆ 2024 ಫಲಿತಾಂಶ: ಸಾಗರ್ ಖಂಡ್ರೆ ಗೆಲುವು
ಸಾಗರ್ ಖಂಡ್ರೆ
Follow us
ರಶ್ಮಿ ಕಲ್ಲಕಟ್ಟ
| Updated By: ವಿವೇಕ ಬಿರಾದಾರ

Updated on:Jun 04, 2024 | 2:23 PM

ಬೀದರ್, ಜೂನ್​ 04: ಬೀದರ್ ಲೋಕಸಭಾ ಕ್ಷೇತ್ರದಲ್ಲಿ (Bidar Lok Sabaha Constituency) ಬಿಜೆಪಿ ನಾಯಕ, ಕೇಂದ್ರ ಸಚಿವ ಭಗವಂತ ಖೂಬಾ (Bhagawanth Khuba) ಸೋಲುಂಡಿದ್ದಾರೆ. ಸಚಿವ ಈಶ್ವರ್​ ಖಂಡ್ರೆ ಪುತ್ರ, ಕಾಂಗ್ರೆಸ್​ ಅಭ್ಯರ್ಥಿ ಯುವ ಮುಖ ಸಾಗರ್ ಖಂಡ್ರೆ (Sagar Khandre) ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಪಾಲಿಗೆ ಅತ್ಯಂತ ಭರವಸೆಯ ಜಿಲ್ಲೆಯಾಗಿದೆ ಬೀದರ್. ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ಇದ್ದರೂ 1991ರ ಬಳಿಕ ಬಿಜೆಪಿ ಇಲ್ಲಿ ನಿರಂತರ 5 ಬಾರಿ ಗೆಲುವು ಸಾಧಿಸಿದೆ. ಪ್ರಸ್ತುತ ಕೇಂದ್ರ ಸಚಿವರಾಗಿರುವ ಭಗವಂತ ಖೂಬಾ ಇಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದರು.

ಒಂದು ಕಾಲದಲ್ಲಿ ಸಂಪೂರ್ಣ ಕಾಂಗ್ರೆಸ್ ಹಿಡಿತದಲ್ಲಿದ್ದ ಬೀದರ್ ಕ್ಷೇತ್ರದಲ್ಲಿ 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಇಲ್ಲಿ ಹಿಡಿತ ಸಾಧಿಸಿಕೊಂಡು ಬಂದಿದೆ.  2008 ರವರೆಗೆ ಇದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಈ ಲೋಕಸಭಾ ಕ್ಷೇತ್ರವು ಕಲಬುರಗಿ ಜಿಲ್ಲೆಯ ಚಿಂಚೋಳಿ(SC), ಆಳಂದ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಬೀದರ್, ಭಾಲ್ಕಿ, ಔರಾದ್(SC) ಹೀಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಇಲ್ಲಿನ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿಯಿಂದ ಔರಾದ್ ನಲ್ಲಿ ಪ್ರಭು ಚೌಹಾಣ್ , ಬಸವಕಲ್ಯಾಣ ಶರಣು ಸಲಗರ, ಚಿಂಚೋಳಿಯಲ್ಲಿ ಅವಿನಾಶ್ ಜಾಧವ್, ಹುಮ್ನಾಬಾದ್ ಸಿದ್ದು ಪಾಟೀಲ್, ಬೀದರ್ ದಕ್ಷಿಣದಲ್ಲಿ ಶೈಲೇಂದ್ರ ಬೆಲ್ಲಾಳೆ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ , ಬೀದರ್ ನಿಂದ ರಹೀಮ್ ಖಾನ್, ಆಳಂದದಲ್ಲಿ ಬಿಆರ್ ಪಾಟೀಲ್, ಭಾಲ್ಕಿಯಿಂದ ಈಶ್ವರ್ ಖಂಡ್ರೆ ಶಾಸಕರಾಗಿದ್ದಾರೆ.

ಹಿಂದಿನ ಚುನಾವಣೆಗಳಲ್ಲಿ ಯಾರಿಗೆ ಗೆಲುವು?

1952ರಿಂದ 1989ರವರೆಗೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಷ್ಟೇ ಇಲ್ಲಿ ಗೆಲುವು ಸಾಧಿಸಿದ್ದು. 1952ರಲ್ಲಿ ಶೌಕತುಲ್ಲಾ ಶಾ ಅನ್ಸಾರಿ, 1962, 1967ರಲ್ಲಿ ರಾಮಚಂದ್ರ ವೀರಪ್ಪ, 1971, 1977ರಲ್ಲಿ ಶಂಕರ್ ದೇವ್, 1980, 1984, 1989ರಲ್ಲಿ ನರಸಿಂಗರಾವ್ ಸೂರ್ಯವಂಶಿ ಅವರು ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದರು. 1991ರಲ್ಲಿ ಮೊದಲ ಬಾರಿ ಇಲ್ಲಿ ಬಿಜೆಪಿ ಗೆದ್ದಿತ್ತು. ಆ ಬಾರಿ ಗೆದ್ದ ರಾಮಚಂದ್ರ ವೀರಪ್ಪ ಅವರು 1996, 1998, 1999, 2004 ಹೀಗೆ ನಿರಂತರ 5 ಬಾರಿ ಗೆಲುವಿನ ದಾಖಲೆ ಬರೆದರು. 2004ರಲ್ಲಿ ನರಸಿಂಗರಾವ್ ಸೂರ್ಯವಂಶಿ ಅವರು ಗೆಲ್ಲುವ ಮೂಲಕ ಬೀದರ್ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋಯಿತು . 2009ರಲ್ಲಿ ಮಾಜಿ ಸಿಎಂ ಧರಂ ಸಿಂಗ್ ಅವರು ಗೆದ್ದರು. 2014, 2019ರಲ್ಲಿ ಭಗವಂತ ಖೂಬಾ ವಿಜಯ ಪತಾಕೆ ಹಾರಿಸಿದ್ದರು.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:49 am, Tue, 4 June 24