CRPF Recruitment 2022: ಕೇಂದ್ರ ಮೀಸಲು ಪಡೆಯ 400 ಹುದ್ದೆಗಳಿಗೆ ಅರ್ಜಿ ಆಹ್ವಾನ
CRPF Recruitment 2022 Rally: ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CRPF ನ ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
CRPF Recruitment 2022 Rally: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ನ (CRPF) ಛತ್ತೀಸ್‌ಗಢ ವಲಯವು GD ಕಾನ್ಸ್‌ಟೇಬಲ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೇಂದ್ರ ಮೀಸಲು ಪಡೆಯ (CRPF) ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಬಿಜಾಪುರ್ – 128 ಹುದ್ದೆಗಳು ದಂತೇವಾಡ – 144 ಹುದ್ದೆಗಳು ಸುಕ್ಮಾ – 128 ಹುದ್ದೆಗಳು ಒಟ್ಟು ಹುದ್ದೆಗಳ ಸಂಖ್ಯೆ- 400
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಅಭ್ಯರ್ಥಿಯು ಛತ್ತೀಸ್ಗಢದ ಸ್ಥಳೀಯ ಭಾಷೆಯನ್ನು ಬರೆಯುವ ಅಥವಾ ಮಾತನಾಡುವ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ವೇತನ: ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 21700 ರಿಂದ ರೂ. 69100 ವೇತನ ನೀಡಲಾಗುತ್ತದೆ.
ಪ್ರಮುಖ ದಿನಾಂಕ: ನೇಮಕಾತಿ ನಡೆಯುವ ದಿನಾಂಕ- ಅಕ್ಟೋಬರ್ 10 ರಿಂದ 22 ವರೆಗೆ ನೇಮಕಾತಿ ರ್ಯಾಲಿ ನಡೆಯಲಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.