ಕಾಲೇಜು ಕ್ಯಾಂಪಸ್ಗಳಲ್ಲಿ ಇನ್ಫೋಸಿಸ್, ವಿಪ್ರೋ ಮುಂತಾದ ಐಟಿ ಕಂಪನಿಗಳಿಂದ ವಿದ್ಯಾರ್ಥಿನಿಯರಿಗೆ ಭರ್ಜರಿ ಉದ್ಯೋಗಾವಕಾಶ!
IT Jobs: ದೇಶದ ಅನೇಕ ಐಟಿ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲು ಮುಂದಾಗಿವೆ. ಈ ವರ್ಷ ಕಾಲೇಜು ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿನಿಯರಿಗೇ ಮಣೆ ಹಾಕಲು ಸಿದ್ಧತೆ ನಡೆಸಿವೆ. ಹಾಗಂತ, ಸಾಂಕೇತಿಕವಾಗಿ ಉದ್ಯೋಗ ಕಲ್ಪಿಸುವುದು ಅಂತಾ ಅಲ್ಲ. ಈ ಕಂಪನಿಗಳಿಗೆ ತುಟಿ ಮಾತಿನಲ್ಲಿ ತನ್ನ ಬಾಧ್ಯತೆಯನ್ನು ನಿಭಾಯಿಸುವುದಲ್ಲ. ಬದಲಿಗೆ ತನ್ನ ವರ್ಕ್ ಸ್ಟೇಷನ್ಗಳಲ್ಲಿ ಮಹಿಳೆಯರಿಗೆ ಸಮಾನ ಸೌಲಭ್ಯಗಳು, ಅವಕಾಶ ಕಲ್ಪಿಸುವ ನಿಟ್ಟಿನಲ್ಲೂ ಕಾರ್ಯೋನ್ಮುಖವಾಗಿವೆ.
ಪ್ರಧಾನ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್ ಮುಂತಾದ ಅನೇಕ ಐಟಿ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲು ಮುಂದಾಗಿವೆ. ಈ ವರ್ಷ ಕಾಲೇಜು ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿನಿಯರಿಗೇ ಮಣೆ ಹಾಕಲು ಈ ಸಂಸ್ಥೆಗಳು ಸಿದ್ಧತೆ ನಡೆಸಿವೆ. ಎಚ್ಸಿಎಲ್ (HCL) ದೇಶದ ನಾನಾ ಕಾಲೇಜು ಕ್ಯಾಂಪಸ್ಗಳಲ್ಲಿ (campus selection) ಶೇ. 60 ಮಂದಿ ವಿದ್ಯಾರ್ಥಿನಿಯರನ್ನೇ ಆಯ್ಕೆ ಮಾಡಿಕೊಳ್ಳಲಿದೆ. ಇನ್ನು, ವಿಪ್ರೋ ಹಾಗೂ ಇನ್ಫೋಸಿಸ್ (Wipro and Infosys) ಕಂಪನಿಗಳು ಕನಿಷ್ಠ ಶೇ. 50 ರಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳಲಿದೆ (campus recruitment).
ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಎಚ್ಸಿಎಲ್ ಮುಂತಾದವು ಸುಮಾರು 60,000 ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿದ್ದು, ಲಿಂಗ ಅಸಮಾನತೆ (gender diversity) ಕಡಿಮೆ ಮಾಡುವುದು ಈ ನೇಮಕಾತಿಗಳ ಪ್ರಮುಖ ಉದ್ದೇಶವಾಗಿದೆ.
ಎಚ್ಸಿಎಲ್ (HCL) ದೇಶದ ನಾನಾ ಕಾಲೇಜು ಕ್ಯಾಂಪಸ್ಗಳಲ್ಲಿ (campuse selection) ಶೇ. 60 ಮಂದಿ ವಿದ್ಯಾರ್ಥಿನಿಯರನ್ನೇ ಆಯ್ಕೆ ಮಾಡಿಕೊಳ್ಳಲಿದೆ. ಇನ್ನು, ವಿಪ್ರೋ ಹಾಗೂ ಇನ್ಫೋಸಿಸ್ (Wipro and Infosys) ಕಂಪನಿಗಳು ಕನಿಷ್ಠ ಶೇ. 50 ರಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳಲಿದೆ (campuse recruitment). ಇನ್ನು, ಟಿಸಿಎಸ್ (TCS) ಕಳೆದ ಮೂರು ವರ್ಷಗಳಲ್ಲಿ ಶೇ. 38-45 ರಷ್ಟು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.
ಲಿಂಗ ತಾರತಮ್ಯ ನಿವಾರಣೆಗೆ ಆದ್ಯತೆ, ಆದರೆ ಖಂಡಿತವಾಗಿಯೂ ಮೆರಿಟ್ಗೆ ಮಣೆ: ಎಚ್ಸಿಎಲ್ ಟೆಕ್ನಾಲಜೀಸ್ ಕಂಪನಿಯಂತೂ (HCL Tech) ಈ ವರ್ಷ 22,000 ಮಂದಿ ಮಹಿಳಾ ಉದ್ಯೋಗಿಗಳನ್ನು ಕಾಲೇಜು ಕ್ಯಾಂಪಸ್ಗಳಲ್ಲಿ ನೇಮಕ ಮಾಡಿಕೊಳ್ಳಲಿದೆ. ಕಂಪನಿಗೆ, ಇದರೊಂದಿಗೆ ಮುಂದಿನ ವರ್ಷಗಳಲ್ಲಿ ಲಿಂಗ ತಾರತಮ್ಯವನ್ನು ಶೇ. 50-50ಕ್ಕೆ ಸಮನಾಗಿ ಕಾಪಾಡಿಕೊಳ್ಳುವ ಇರಾದೆಯಾಗಿದೆ.
ಹಾಗಂತ ಈ ಐಟಿ ಕಂಪನಿಗಳು ಲಿಂಗ ತಾರತಮ್ಯ ನಿವಾರಣೆಗಾಗಿ ಮಹಿಳೆಯರಿಗೆ ಕೇವಲ ಉದ್ಯೋಗ ನೀಡಿ ಕೈತೊಳೆದುಕೊಳ್ಳುವುದಿಲ್ಲ. ಸಾಂಕೇತಿಕವಾಗಿ ಉದ್ಯೋಗ ಕಲ್ಪಿಸುವುದು ಅಂತಾ ಅಲ್ಲ. ಈ ಕಂಪನಿಗಳಿಗೆ ತುಟಿ ಮಾತಿನಲ್ಲಿ ತನ್ನ ಬಾಧ್ಯತೆಯನ್ನು ನಿಭಾಯಿಸುವುದಲ್ಲ. ಬದಲಿಗೆ ತನ್ನ ವರ್ಕ್ ಸ್ಟೇಷನ್ಗಳಲ್ಲಿ ಮಹಿಳೆಯರಿಗೆ ಸಮಾನ ಸೌಲಭ್ಯಗಳು, ಅವಕಾಶ ಕಲ್ಪಿಸುವ ನಿಟ್ಟಿನಲ್ಲೂ (level-playing field) ಕಾರ್ಯೋನ್ಮುಖವಾಗಿವೆ.
ಅಂದಹಾಗೆ, ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಸದ್ಯಕ್ಕೆ ಲಿಂಗ ಸಮಾನತೆ ಶೇ. 33ರಷ್ಟಿದೆ. ಇದು ಶೇ. 50-50 ಪ್ರಮಾಣದತ್ತ ದಾಪುಗಾಲು ಹಾಕುತ್ತರುವುದು ಚೇತೋಹಾರಿಯಾಗಿದೆ ಎಂದು ನಾಸ್ಕಾಂ (Nasscom) ಸಂತಸ ವ್ಯಕ್ತಪಡಿಸಿದೆ. ಲಿಂಗ ತಾರತಮ್ಯ ನಿವಾರಣೆಗೆ ಆದ್ಯತೆ ನೀಡುತ್ತೇವೆ. ಆದರೆ ಖಂಡಿತವಾಗಿಯೂ ಮೆರಿಟ್ಗೆ ಮಣೆ ಹಾಕುತ್ತೇವೆ. ಇದು ಪ್ರವೇಶ ಹಂತದಲ್ಲಷ್ಟೇ ಅಲ್ಲ; ಮುಂದಿನ ನೇಮಕಾತಿಗಳಲ್ಲೂ ಮಹಿಳೆಯರನ್ನು ಪರಿಗಣಿಸಲಾಗುವುದು ಅನ್ನುತ್ತಿವೆ ಐಟಿ ಕಂಪನಿಗಳು.
2030 ಆರ್ಥಿಕ ಸಾಲಿನ ವೇಳೆಗೆ ಇನ್ಫೋಸಿಸ್ (Infosys) ಶೇ. 45ರಷ್ಟು ಮಹಿಳಾ ಉದ್ಯೋಗಿಗಳನ್ನು ಹೊಂದುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 2022 ಸಾಲಿನಲ್ಲಿ 35,000 ಕಾಲೇಜು ವಿದ್ಯಾರ್ಥಿನಿಯರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಇನ್ಫೋಸಿಸ್ ಕಂಪನಿಯಲ್ಲಿ ಒಟ್ಟಾರೆಯಾಗಿ 2,67,953 ಮಂದಿ ಉದ್ಯೋಗಿಗಳು ಇದ್ದಾರೆ.
ಇನ್ನು ಟಿಸಿಎಸ್ ಕಂಪನಿಯಲ್ಲಿ ಪ್ರಸ್ತುತ 185,000 ಮಹಿಳಾ ಉದ್ಯೋಗಿಗಳು ಇದ್ದಾರೆ. 2021-22 ಆರ್ಥಿಕ ಸಾಲಿನಲ್ಲಿ ಕಾಲೇಜು ಕ್ಯಾಂಪಸುಗಳಲ್ಲಿ 40,000 ವಿದ್ಯಾರ್ಥಿನಿಯರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ವಿಪ್ರೋ ಕಂಪನಿ ಮುಂದಿನ ಸಾಲಿನಲ್ಲಿ (FY 22-33) 12,000 ಫ್ರೆಷರ್ಗಳನ್ನು ನೇಮಕ ಮಾಡಿಕೊಳ್ಳಲು ಆಲೋಚಿಸಿದೆ. ಕಳೆದ ವರ್ಷಕ್ಕಿಂತ ಶೇ.33 ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ನೇಮಕಾತಿ ನಡೆಯಲಿದೆ.
Paytm: ಪೇಟಿಎಂನಿಂದ 20,000 ಫೀಲ್ಡ್ ಸೇಲ್ಸ್ ಎಕ್ಸ್ಕ್ಯೂಟಿವ್ಸ್ಗಳ ನೇಮಕ (Wipro, Infosys, TCS, HCL IT cos to hire more women employees from college campuses across india to improve gender diversity)
Published On - 12:31 pm, Thu, 5 August 21