ಕಾಲಿವುಡ್ ಹೀರೋ ಸೂರ್ಯ ಬರ್ತ್​ಡೇ ದಿನ ರಿವೀಲ್ ಆಯ್ತು ಹೊಸ ಸಿನಿಮಾ ಲುಕ್

ನಟ ಸೂರ್ಯ ಅವರಿಗೆ ಕಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರಿಗೆ ಇಂದು (ಜುಲೈ 23) ಜನ್ಮದಿನ. ಈ ಸಂದರ್ಭದಲ್ಲಿ ಅವರ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.

ಕಾಲಿವುಡ್ ಹೀರೋ ಸೂರ್ಯ ಬರ್ತ್​ಡೇ ದಿನ ರಿವೀಲ್ ಆಯ್ತು ಹೊಸ ಸಿನಿಮಾ ಲುಕ್
ಸೂರ್ಯ
Follow us
ರಾಜೇಶ್ ದುಗ್ಗುಮನೆ
|

Updated on: Jul 23, 2024 | 10:46 AM

ಕಾಲಿವುಡ್ ಹೀರೋ ಸೂರ್ಯ ಅವರಿಗೆ ಇಂದು (ಜುಲೈ 23) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಹಬ್ಬ ಮಾಡುತ್ತಿದ್ದಾರೆ. ಈ ಮಧ್ಯೆ ಅವರ ಮುಂದಿನ ಸಿನಿಮಾ ‘ಸೂರ್ಯ 44’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದನ್ನು ಈ ಟೀಸರ್​ನಲ್ಲಿ ತೋರಿಸಲಾಗಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ.

ಸಮುದ್ರದ ಸಮೀಪ ಇರುವ ಕೋಟೆ ಒಂದನ್ನು ತೋರಿಸಲಾಗಿದೆ. ಅಲ್ಲಿ ‘ಪ್ರೀತಿ, ನಗು, ಯುದ್ಧ’ ಎಂಬ ಶಬ್ದಗಳನ್ನು ತೋರಿಸಲಾಗಿದೆ. ಇದೆಲ್ಲ ಕಾಯುತ್ತಿರುವುದು.. ಎನ್ನುವಾಗ ಕಥಾ ನಾಯಕ ಸೂರ್ಯ ಅವರ ಎಂಟ್ರಿ ಆಗುತ್ತದೆ. ಸೂರ್ಯ ಅವರು ಸಿಗರೇಟ್ ಸೇದುತ್ತಾ ಭರ್ಜರಿ ಆಗಿ ಎಂಟ್ರಿ ಕೊಡುತ್ತಾರೆ. ಅವರನ್ನು ನೋಡಿದರೆ ರೆಟ್ರೋ ಸೂರ್ಯ ನೆನಪಾಗುತ್ತಾರೆ. ಅಷ್ಟು ಗತ್ತಲ್ಲಿ ಅವರ ಆಗಮನ ಆಗಿದೆ.

ಸೂರ್ಯ ಅವರು ಈ ಚಿತ್ರದಲ್ಲಿ ಗ್ಯಾಂಗ್ ಒಂದರ ಮೆಂಬರ್ ಆಗಿರುತ್ತಾರೆ ಅನ್ನೋದು ಸ್ಪಷ್ಟವಾಗಿದೆ. ಈ ಚಿತ್ರದಲ್ಲಿ ಸೂರ್ಯ ಅವರು ಕಾರ್ತಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಸದ್ಯ ಸೂರ್ಯ ಅವರು ‘ಕಂಗುವ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭರ್ಜರಿ ನಿರೀಕ್ಷೆ ಇದೆ.

ಇದನ್ನೂ ಓದಿ: ಮುಂಬೈನಲ್ಲಿ ಲಕ್ಷುರಿ ಫ್ಲ್ಯಾಟ್, ದುಬಾರಿ ಕಾರು; ನಟ ಸೂರ್ಯ ಐಷಾರಾಮಿ ಜೀವನ

ಕಾರ್ತಿಕ್ ಸುಬ್ಬರಾಜು ಅವರು ಈ ಚಿತ್ರದ ಶೂಟಿಂಗ್​ನ ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದ್ದಾರೆ. ಕಾರ್ತಿಕ್ ಸುಬ್ಬರಾಜು ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತದೆ. ಅದೇ ರೀತಿ ಸಸ್ಪೆನ್ಸ್ ಸಿನಿಮಾಗಳನ್ನು ಮಾಡೋಕೂ ಅವರು ಎತ್ತಿದ ಕೈ. ಅವರು ಈ ಚಿತ್ರವನ್ನು ಯಾವ ರೀತಿಯಲ್ಲಿ ತರಲಿದ್ದಾರೆ ಎನ್ನುವ ನಿರೀಕ್ಷೆ ಮೂಡಿದೆ.  ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಜಯರಾಮ್. ಜೋಜು ಜಾರ್ಜ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.