AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ತೋಳಲ್ಲಿರುವ ಈ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸುತ್ತೀರಾ?

ಇತ್ತೀಚೆಗೆ ಅನೇಕ ಸ್ಟಾರ್ ಹೀರೋಯಿನ್​ಗಳ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿವೆ. ಅದೇ ರೀತಿ ಅಪ್ಪನ ಜೊತೆ ಇರೋ ಫೋಟೋ ಒಂದು ಈಗ ವೈರಲ್ ಆಗುತ್ತಿದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ನಟಿಯರಲ್ಲಿ ಒಬ್ಬರು. ದಕ್ಷಿಣ ಚಿತ್ರರಂಗದಲ್ಲಿ ಯಶಸ್ಸು ಪಡೆದ ನಂತರ ಶಾರುಖ್ ಖಾನ್ ಅವರ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಅಪ್ಪನ ತೋಳಲ್ಲಿರುವ ಈ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸುತ್ತೀರಾ?
ನಯನತಾರಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 23, 2024 | 11:07 AM

Share

ಈ ಫೋಟೋದಲ್ಲಿ ತಮ್ಮ ತಂದೆಯೊಂದಿಗೆ ಕಾಣಿಸಿಕೊಂಡಿರುವ ಮುದ್ದು ಹುಡುಗಿ ಈಗ ಬೆಳೆದು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಈ ನಟಿ ದಕ್ಷಿಣದ ಸಿನಿಮಾಗಳಲ್ಲಿ ಪವರ್​ಫುಲ್ ಹೀರೋಯಿನ್ ಎನಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ಅದ್ಭುತ ಪಾತ್ರಗಳನ್ನು ಮಾಡುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ನಟಿಯರಲ್ಲಿ ಒಬ್ಬರು. ದಕ್ಷಿಣ ಚಿತ್ರರಂಗದಲ್ಲಿ ಯಶಸ್ಸು ಪಡೆದ ನಂತರ ಶಾರುಖ್ ಖಾನ್ ಅವರ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಬಾಲಿವುಡ್ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 1100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಇವರು ಬೇರೆ ಯಾರೂ ಅಲ್ಲ ದಕ್ಷಿಣದ ಖ್ಯಾತ ನಟಿ ನಯನತಾರಾ.

ನಯನತಾರಾ ದಕ್ಷಿಣದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿದ್ದಾರೆ. ಅವರಿಗೆ ಲೇಡಿ ಸೂಪರ್​ಸ್ಟಾರ್ ಎಂಬ ಬಿರುದು ಇದೆ. ಬಾಲಿವುಡ್‌ನಲ್ಲೂ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಶಾರುಖ್ ಅಭಿನಯದ ‘ಜವಾನ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.  ಅವರ ಬಾಲ್ಯದ ಫೋಟೋನ ಈಗ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

ನಯನತಾರಾ ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್. ಅವರು 2003ರಲ್ಲಿ ಮಲಯಾಳಂ ಚಿತ್ರ ‘ಮನಸೀನಕ್ಕರೆ’ ಮೂಲಕ ತಮ್ಮ ನಟನಾ ಪಯಣವನ್ನು ಪ್ರಾರಂಭಿಸಿದರು. ಮಲಯಾಳಂ ಭಾಷೆಯಲ್ಲಿ ಕೆಲವು ಚಿತ್ರಗಳನ್ನು ಮಾಡಿದ ನಂತರ ಅವರು ತೆಲುಗು ಮತ್ತು ತಮಿಳು ಚಿತ್ರಗಳತ್ತ ಮುಖ ಮಾಡಿದರು. ‘ಅಯ್ಯಾ’ ಅವರ ಮೊದಲ ತಮಿಳು ಚಿತ್ರ. ಆ ನಂತರ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. 2011ರಲ್ಲಿ, ಅವರು ತೆಲುಗು ಚಲನಚಿತ್ರ ‘ಶ್ರೀ ರಾಮ್ ರಾಜ್ಯಂ’ ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್​ ಜೊತೆ ನಟಿಸ್ತಾರಾ ನಯನತಾರಾ?

2011ಕ್ಕೂ ಮುನ್ನ ನಯನತಾರಾ ಕ್ರೈಸ್ತರಾಗಿದ್ದರು. 2011ರಲ್ಲಿ ಅವರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರ ಹೆಸರು ಒಂದು ಕಾಲದಲ್ಲಿ ನಟ, ನಿರ್ದೇಶಕ ಪ್ರಭುದೇವ ಅವರೊಂದಿಗೆ ಸಂಬಂಧ ಹೊಂದಿತ್ತು. ಪ್ರಭುದೇವ್ ಅವರನ್ನು ಮದುವೆಯಾಗಲು ಮಾತ್ರ ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಇವರಿಬ್ಬರ ಸಂಬಂಧ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ನಯನತಾರಾ 2022 ರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಆ ಬಳಿಕ ಬಾಡಿಗೆ ತಾಯ್ತನದ ಮೂಲಕ ಇವರಿಬ್ಬರು ಪೋಷಕರಾದರು. ಅವರಿಗೆ ಅವಳಿ ಮಕ್ಕಳಿದ್ದಾರೆ. ನಯನತಾರಾ ಸದ್ಯ ದಕ್ಷಿಣದ ದುಬಾರಿ ನಟಿ. ಒಂದು ಚಿತ್ರಕ್ಕೆ 20 ರಿಂದ 25 ಕೋಟಿ ರೂಪಾಯಿ ಸಂಭಾವನೆ ಸ್ವೀಕರಿಸುತ್ತಾರೆ. ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದಕ್ಷಿಣದ ಏಕೈಕ ಮಹಿಳಾ ನಟಿ ನಯನತಾರಾ ಅವರ ನಿವ್ವಳ ಮೌಲ್ಯ ಸುಮಾರು 200 ಕೋಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ