AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಲಕ್ಷ್ಮೀ ರಂಭಾ ಆಗಿದ್ದು ಹೇಗೆ? ಕಂಬ್ಯಾಕ್​​​ಗೆ ನಡೆದಿದೆ ಪ್ಲ್ಯಾನ್

ನಟಿ ರಂಭಾ (ನಿಜನಾಮ ವಿಜಯಲಕ್ಷ್ಮಿ) 90ರ ದಶಕದ ಖ್ಯಾತ ತಾರೆ. 'ಸರ್ಗಂ' ಮೂಲಕ ಚಿತ್ರರಂಗ ಪ್ರವೇಶಿಸಿ, ಹಲವು ಭಾಷೆಗಳಲ್ಲಿ ಮಿಂಚಿದರು. ಕನ್ನಡದಲ್ಲಿ ಹಿಟ್ ನೀಡಿದರು. 2010ರಲ್ಲಿ ಇಂದ್ರಕುಮಾರ್ ಪದ್ಮನಾಥ್ ಜೊತೆ ವಿವಾಹವಾದ ನಂತರ ಕೆನಡಾದಲ್ಲಿ ನೆಲೆಸಿದ್ದಾರೆ. ರಿಯಾಲಿಟಿ ಶೋ ಜಡ್ಜ್ ಆಗಿ ಮರಳಿದ ಅವರು, ಪೂರ್ಣಪ್ರಮಾಣದ ಕಂಬ್ಯಾಕ್‌ಗಾಗಿ ಸಿದ್ಧರಾಗುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ವಿಜಯಲಕ್ಷ್ಮೀ ರಂಭಾ ಆಗಿದ್ದು ಹೇಗೆ? ಕಂಬ್ಯಾಕ್​​​ಗೆ ನಡೆದಿದೆ ಪ್ಲ್ಯಾನ್
ರಂಭಾ
ರಾಜೇಶ್ ದುಗ್ಗುಮನೆ
|

Updated on: Mar 31, 2026 | 10:12 AM

Share

ನಟಿ ರಂಭಾ ಅವರು ಈಗ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. 90ರ ದಶಕದಲ್ಲಿ ಮಿಂಚಿದ್ದ ಅವರು ಈಗ ಚಿತ್ರರಂಗದಿಂದ ಸಂಪೂರ್ಣವಾಗಿ ಹಿಂದೆ ಸರಿದಿದ್ದಾರೆ. ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಬೇಕು ಎಂದು ಕನಸು ಕಾಣುತ್ತಿದ್ದಾರೆ. ಹಾಗಾದರೆ ರಂಭಾ ಅವರು ಯಾರು? ಅವರ ನಿಜವಾದ ಹೆಸರು ಏನು? ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ.

ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಅವರು ಹೆಸರನ್ನು ರಂಭಾ ಎಂದು ಬದಲಿಸಿಕೊಂಡರು. ರಂಭಾ ಕನ್ನಡದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದಾರೆ. ಇಷ್ಟೇ ಅಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳ, ಬೆಂಗಾಳಿ, ಭೋಜ್​​ಪುರಿ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರಿಗೆ ಇದೆ.

ಮಲಯಾಳಂ ಸಿನಿಮಾ ‘ಸರ್ಗಂ’ (1992) ಮೂಲಕ ರಂಭಾ ಬಣ್ಣದ ಬದುಕು ಆರಂಭಿಸಿದರು. ಅದೇ ವರ್ಷ ತೆರೆಗೆ ಬಂದ ಅವರ ನಟನೆಯ ತೆಲುಗಿನ ‘ಆ ಒಕ್ಕಟಿ ಅಡಕ್ಕು’ ಅವರ ಬಣ್ಣದ ಬದುಕಿಗೆ ಭದ್ರ ಬುನಾದಿ ಹಾಕಿ ಕೊಟ್ಟಿತು. ಈ ಚಿತ್ರದಲ್ಲಿ ರಂಭಾ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರು ರಂಭಾ ಅಂತಲೇ ಫೇಮಸ್ ಆದರು. 1993ರಲ್ಲಿ ರಂಭಾಗೆ ಕನ್ನಡದಿಂದ ಆಫರ್ ಬಂತು. ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ಅವರ ಕನ್ನಡದ ಮೊದಲ ಸಿನಿಮಾ.

1999ರಲ್ಲಿ ರವಿಚಂದ್ರನ್ ಜೊತೆ ‘ಓ ಪ್ರೇಮವೇ’ ಸಿನಿಮಾ ಮಾಡಿದರು. ಇಬ್ಬರ ಕೆಮಿಸ್ಟ್ರಿ ಜನರಿಗೆ ಸಖತ್ ಇಷ್ಟ ಆಯಿತು. ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ ಎಂದರೆ ಅದು ‘ಅನಾಥರು’. ಆ ಬಳಿಕ ಅವರು ಕನ್ನಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅವರ ನಟನೆ ಹಾಗೂ ಅದ್ಭುತ ಡ್ಯಾನ್ಸ್ ಅವರನ್ನು ಟಾಪ್ ಹೀರೋಯಿನ್​​ಗಳ ಸಾಲಿನಲ್ಲಿ ನಿಲ್ಲಿಸಿತು.

ಚಿತ್ರರಂಗದಲ್ಲಿ ಹೆಸರು ಮಾಡಿದ ಅವರು ನಂತರ ಅದನ್ನು ತೊರೆಯಲು ನಿರ್ಧರಿಸಿದರು. 2010ರಲ್ಲಿ ಇಂದ್ರಕುಮಾರ್ ಪದ್ಮನಾಥ್ ಅವರನ್ನು ವಿವಾಹ ಆದರು. ಆ ಬಳಿಕ ಅವರು ಚಿತ್ರರಂಗದ ಕಡೆ ಮುಖ ಮಾಡಿಲ್ಲ. ಅವರು ಇತ್ತೀಚೆಗೆ ‘ಜೋಡಿ ಆರ್ ಯೂ ರೆಡಿ ಸೀಸನ್ 2’ ರಿಯಾಲಿಟಿ ಶೋಗೆ ಜಡ್ಜ್ ಆದರು. ರಂಭಾಗೆ ಮೂವರು ಮಕ್ಕಳು. ರಂಭಾ ಸದ್ಯ ಕೆನಡಾದಲ್ಲಿ ಸೆಟಲ್ ಆಗಿದ್ದಾರೆ.

ಇದನ್ನೂ ಓದಿ: ಮೂರು ನಟಿಯರ ಗುಣ ಸಾಯಿ ಪಲ್ಲವಿಯಲ್ಲಿದೆ ಎಂದು ಮೊದಲೇ ಊಹಿಸಿದ್ದ ರಂಭಾ

‘ಮ್ಯಾಕ್ಸ್’ ನಿರ್ಮಾಪಕ ಕಲೈಪುಲಿ ಧಾನು ಅವರು ಮಾತನಾಡುವಾಗ ಒಂದು ವಿಷಯ ಹೇಳಿದ್ದರು. ‘ರಂಭಾ ಅವರ ಆಸ್ತಿ ಸುಮಾರು 2 ಸಾವಿರ ಕೋಟಿ ರೂಪಾಯಿ. ಅವರ ಗಂಡ ನನಗೆ ಕರೆ ಮಾಡಿದ್ದರು. ಪತ್ನಿಗೆ ಒಂದು ಚಾನ್ಸ್ ಕೊಡಿ ಎಂದು ಕೇಳಿದರು. ಒಳ್ಳೆಯ ಪ್ರಾಜೆಕ್ಟ್​ನ ಹುಡುಕಿ ಕೊಡುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ’ ಎಂಬುದಾಗಿ ಕಲೈಪುಲಿ ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!