‘ಪೆದ್ದಿ’ ಸಿನಿಮಾಕ್ಕಾಗಿ ಜಾಗ ಬಿಟ್ಟುಕೊಟ್ಟ ‘ಲೆನಿನ್’: ಎಲ್ಲ ‘ಟಾಕ್ಸಿಕ್’ ಮಹಿಮೆ
Peddi movie release: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು, ಆ ನಂತರದ ಹಲವು ಸಿನಿಮಾಗಳ ಬಿಡುಗಡೆ ಮೇಲೆ ಪರಿಣಾಮ ಬೀರಿದೆ. ಸುಮಾರು ಆಗಸ್ಟ್ ತಿಂಗಳ ವರೆಗೆ ಅದರ ನಂತರದ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ಸಹ ಬದಲಾಗಿವೆ. ಇದೀಗ ತೆಲುಗಿನ ‘ಲೆನಿನ್’ ಸಿನಿಮಾದ ಬಿಡುಗಡೆ ಸಹ ಮುಂದೂಡಲಾಗಿದೆ. ಅದಕ್ಕೂ ಸಹ ಪರೋಕ್ಷವಾಗಿ ‘ಟಾಕ್ಸಿಕ್’ ಕಾರಣ ಇದ್ದಂತಿದೆ.

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆದರೆ ಯುದ್ಧ ಪರಿಸ್ಥಿತಿಯ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ಆದರೆ ಅದೊಂದು ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು, ಆ ನಂತರದ ಹಲವು ಸಿನಿಮಾಗಳ ಬಿಡುಗಡೆ ಮೇಲೆ ಪರಿಣಾಮ ಬೀರಿದೆ. ಸುಮಾರು ಆಗಸ್ಟ್ ತಿಂಗಳ ವರೆಗೆ ಅದರ ನಂತರದ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ಸಹ ಬದಲಾಗಿವೆ. ಇದೀಗ ತೆಲುಗಿನ ‘ಲೆನಿನ್’ ಸಿನಿಮಾದ ಬಿಡುಗಡೆ ಸಹ ಮುಂದೂಡಲಾಗಿದೆ. ಅದಕ್ಕೂ ಸಹ ಪರೋಕ್ಷವಾಗಿ ‘ಟಾಕ್ಸಿಕ್’ ಕಾರಣ ಇದ್ದಂತಿದೆ.
‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದ ಕಾರಣ, ಪವನ್ ಕಲ್ಯಾಣ್ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಮಾರ್ಚ್ 26ಕ್ಕೆ ಘೋಷಿಸಲಾಗಿತ್ತು. ‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ ಆಗುತ್ತಲೇ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 19ಕ್ಕೆ ಬಿಡುಗಡೆ ಆಯ್ತು. ಇದೇ ಕಾರಣದಿಂದಾಗಿ ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕದಲ್ಲಿಯೂ ಬದಲಾವಣೆ ಆಗಿ, ಏಪ್ರಿಲ್ 30ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಯ್ತು.
ಆದರೆ ಅದೇ ಸಮಯದಲ್ಲಿ ಬಿಡುಗಡೆ ಯೋಜನೆ ಹಾಕಿಕೊಂಡಿದ್ದ ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಸಿನಿಮಾಕ್ಕೆ ಇದು ಸಮಸ್ಯೆ ಆಗಿದ್ದು, ಇದೀಗ ‘ಲೆನಿನ್’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಅಖಿಲ್ ಅಕ್ಕಿನೇನಿ ನಟನೆಯ ‘ಲೆನಿನ್’ ಇದೀಗ ಜೂನ್ 26ಕ್ಕೆ ಬಿಡುಗಡೆ ಆಗಲಿದೆ. ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗುತ್ತಿರುವ ಕಾರಣ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದೂಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ:‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ
ಮೇ1ಕ್ಕೆ ಲೆನಿನ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಪೆದ್ದಿ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿರುವ ಕಾರಣ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ‘ನಮ್ಮ ಪ್ರೀತಿಯ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗುತ್ತಿದ್ದು, ಇದು ಎಲ್ಲರೂ ಒಟ್ಟಿಗೆ ಸೇರಿ ಸಿನಿಮಾಗಳನ್ನು ಸಂಭ್ರಮಿಸಲು ಇದು ಸಕಾಲ ಎನಿಸಿದ್ದರಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಮ್ ಚರಣ್ ಮತ್ತು ಅಖಿಲ್ ಇಬ್ಬರು ಬಲು ಆಪ್ತರು ಮತ್ತು ಪರಸ್ಪರರ ಯಶಸ್ಸು ಬಯಸುವವರು ಹಾಗಾಗಿ ಇಬ್ಬರ ಗೆಲುವು, ಯಶಸ್ಸು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಪ್ರಕಟಿಸಲಾಗಿದೆ’ ಎಂದಿದೆ ಚಿತ್ರತಂಡ.
‘ಲೆನಿನ್’ ಸಿನಿಮಾವನ್ನು ಜೂನ್ 26ಕ್ಕೆ ಬಿಡುಗಡೆ ಮಾಡುತ್ತಿದ್ದು, ಪ್ರೇಕ್ಷಕರು ಸಿನಿಮಾವನ್ನು ಅದ್ಧೂರಿಯಾಗಿ ಎಂಜಾಯ್ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಚಿತ್ರತಂಡ ಹೇಳಿದೆ. ‘ಲೆನಿನ್’ ಸಿನಿಮಾನಲ್ಲಿ ಅಖಿಲ್ ಅಕ್ಕಿನೇನಿ ನಟಿಸಿದ್ದಾರೆ. ಅದರ ಜೊತೆಗೆ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ನಿರ್ದೇಶನ ಮಾಡಿರುವುದು ಮುರಳಿ ಕಿಶೋರ್ ಅಬ್ಬೂರು. ನಿರ್ಮಾಣ ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಸಿತಾರಾ ಎಂಟರ್ಟೈನ್ಮೆಂಟ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
