‘ನಿಮ್ಮ ಹೆಸರಿಗೆ ಡ್ರಗ್ಸ್ ಪಾರ್ಸೆಲ್ ಬಂದಿದೆ’ ಎಂದು ನಟಿಗೆ 5 ಲಕ್ಷ ರೂ. ವಂಚಿಸಿದ ಸೈಬರ್ ಖದೀಮ
ಡ್ರಗ್ಸ್ ಕೇಸ್ನಲ್ಲಿ ಅನೇಕ ಸೆಲೆಬ್ರಿಟಿಗಳು ವಿಚಾರಣೆ ಎದುರಿಸಿದ್ದಂಟು. ಈ ವಿಚಾರದಲ್ಲಿ ಸೆಲೆಬ್ರಿಟಿಗಳಿಗೆ ಭಯ ಇದೆ. ಆ ಭಯವನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಅಂಜಲಿ ಪಾಟೀಲ್ಗೆ ಮೋಸ ಮಾಡಿದ್ದಾರೆ. ತಮ್ಮನ್ನು ಪೊಲೀಸರು ಎಂದು ಪರಿಚಯ ಮಾಡಿಕೊಂಡ ಖದೀಮರು ನಟಿಯಿಂದ ಹಣ ವಸೂಲಿ ಮಾಡಿದ್ದಾರೆ.

ಹಲವು ಸೆಲೆಬ್ರಿಟಿಗಳು ಸೈಬರ್ ಕಿಡಿಗೇಡಿಗಳಿಂದ ತೊಂದರೆ ಅನುಭವಿಸಿದ್ದಾರೆ. ಇನ್ನೂ ಕೆಲವರು ಹಣ ಕಳೆದುಕೊಂಡಿದ್ದಾರೆ. ಖ್ಯಾತ ನಟಿ ಅಂಜಲಿ ಪಾಟೀಲ್ (Anjali Patil) ಅವರಿಗೆ ಈಗ ಮೋಸ ಆಗಿದೆ. ಅವರಿಗೆ ಬರೋಬ್ಬರಿ 5.79 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ‘ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ’ ಎಂದು ಹೆದರಿಸುವ ಮೂಲಕ ಸೈಬರ್ (Cyber Crime) ಖದೀಮರು ಈ ನಟಿಗೆ ಮೋಸ ಮಾಡಿದ್ದಾರೆ. ತಮಗೆ ಈ ರೀತಿ ವಂಚನೆ ಆಗಿದೆ ಎಂಬುದು ಅಂಜಲಿ ಪಾಟೀಲ್ ಅವರಿಗೆ ತಡವಾಗಿ ಗೊತ್ತಾಗಿದೆ. ಅಷ್ಟಕ್ಕೂ ಅವರನ್ನು ಮೋಸದ ಜಾಲಕ್ಕೆ ಬೀಳಿಸಿದ್ದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ..
ಡ್ರಗ್ಸ್ ಕೇಸ್ನಲ್ಲಿ ಅನೇಕ ಸೆಲೆಬ್ರಿಟಿಗಳು ವಿಚಾರಣೆ ಎದುರಿಸಿದ್ದಂಟು. ಈ ವಿಚಾರದಲ್ಲಿ ಸೆಲೆಬ್ರಿಟಿಗಳಿಗೆ ಭಯ ಇದೆ. ಆ ಭಯವನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಅಂಜಲಿ ಪಾಟೀಲ್ಗೆ ಮೋಸ ಮಾಡಿದ್ದಾರೆ. ತಮ್ಮನ್ನು ಪೊಲೀಸರು ಎಂದು ಪರಿಚಯ ಮಾಡಿಕೊಂಡ ಖದೀಮರು ನಟಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 854 ಕೋಟಿ ರೂ. ವಂಚನೆ ಪ್ರಕರಣ ಭೇದಿಸಿದ ಸಿಸಿಬಿ: ಆರೋಪಿಗಳು ಜನರಿಗೆ ವಂಚಿಸಿದ್ದು ಹೇಗೆ? ಇಲ್ಲಿದೆ ಸೈಬರ್ ಕಹಾನಿ
ದೀಪಕ್ ಶರ್ಮಾ ಎಂಬ ವ್ಯಕ್ತಿಯು ಅಂಜಲಿ ಪಾಟೀಲ್ ಅವರಿಗೆ ಕರೆ ಮಾಡಿ ‘ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಡ್ರಗ್ಸ್ ಪಾರ್ಸೆಲ್ ಸಿಕ್ಕಿದೆ. ನೀವು ಮುಂಬೈ ಸೈಬರ್ ಪೊಲೀಸರನ್ನು ಸಂಪರ್ಕಿಸಿ’ ಎಂದು ಹೇಳಿದ್ದಾನೆ. ನಂತರ ತಾನು ಮುಂಬೈ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬ್ಯಾನರ್ಜಿ ಎಂಬ ವ್ಯಕ್ತಿ ಅಂಜಲಿಗೆ ಕರೆ ಮಾಡಿದ್ದಾನೆ. ‘ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೂರು ಬ್ಯಾಂಕ್ಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ. ಅದರ ಪರಿಶೀಲನೆ ಮಾಡಲು ನೀವು ನಮಗೆ 96,525 ರೂಪಾಯಿ ವರ್ಗಾವಣೆ ಮಾಡಬೇಕು’ ಎಂದು ಬೇಡಿಕೆ ಇಟ್ಟಿದ್ದಾನೆ.
ಇದನ್ನೂ ಓದಿ: Cyber Crime: ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 1.98 ಕೋಟಿ ರೂ. ಕಳೆದುಕೊಂಡ ಉದ್ಯಮಿ
‘ನಿಮ್ಮ ಜೊತೆ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲು ಆಗಿದ್ದಾರೆ’ ಎಂದು ನಟಿಗೆ ಸೈಬರ್ ಕಿಡಿಗೇಡಿ ಹೆದರಿಸಿದ್ದಾನೆ. ಕೇಸ್ ಕ್ಲೋಸ್ ಮಾಡಲು 4,83,291 ರೂಪಾಯಿಯನ್ನು ನಟಿಯಿಂದ ಪಡೆದುಕೊಂಡಿದ್ದಾನೆ. ಖದೀಮರು ಹೇಳಿದ್ದನ್ನು ನಿಜ ಎಂದು ನಂಬಿ, ಪೊಲೀಸ್ ಕೇಸ್ ತಪ್ಪಿಸಲು ಅಂಜಲಿ ಪಾಟೀಲ್ ಅವರು ಈ ಹಣವನ್ನು ನೀಡಿದ್ದಾರೆ. ನಂತರ ತಾವು ಮೋಸ ಹೋಗಿರುವುದು ಅವರಿಗೆ ತಿಳಿದುಬಂದಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.