AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೂಢಚಾರಿ 2’ ಸಿನಿಮಾದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ಬಾಲಿವುಡ್​ ಬೆಡಗಿ ಬನಿತಾ ಸಂಧು

‘ಅಕ್ಟೋಬರ್’, ‘ಸರ್ದಾರ್ ಉದಾಮ್’, ‘ಆದಿತ್ಯ ವರ್ಮಾ’ ಸೇರಿದಂತೆ ಹಲವು ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ ಅನುಭವ ಬನಿತಾ ಸಂಧು ಅವರಿಗೆ ಇದೆ. ‘ಗೂಢಚಾರಿ 2’ ಮೂಲಕ ಇದೇ ಮೊದಲ ಬಾರಿಗೆ ಅವರು ಪ್ಯಾನ್ ಇಂಡಿಯಾ ಸಿನಿಮಾದ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

‘ಗೂಢಚಾರಿ 2’ ಸಿನಿಮಾದಲ್ಲಿ ಅಡಿವಿ ಶೇಷ್​ಗೆ ಜೋಡಿಯಾದ ಬಾಲಿವುಡ್​ ಬೆಡಗಿ ಬನಿತಾ ಸಂಧು
ಬನಿತಾ ಸಂಧು, ಅಡಿವಿ ಶೇಷ್​
ಮದನ್​ ಕುಮಾರ್​
|

Updated on:Nov 21, 2023 | 3:26 PM

Share

ಟಾಲಿವುಡ್​ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡಿವಿ ಶೇಷ್ (Adivi Sesh) ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್​ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ. ‘ಗೂಢಚಾರಿ 2’ (Goodachari 2) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ ಈಗಾಗಲೇ ರಿಲೀಸ್ ಆಗಿ ಸಖತ್​ ಸದ್ದು ಮಾಡಿದೆ. ಈಗ ನಾಯಕಿಯನ್ನು ಪರಿಚಯಿಸುವ ಸಮಯ. ಹೌದು, ಚಿತ್ರತಂಡದಿಂದ ನಾಯಕಿ ಬಗ್ಗೆ ಮಾಹಿತಿ ಹೊರಬಿದ್ದಿದೆ. ‘ಗೂಢಚಾರಿ 2’ ಚಿತ್ರಕ್ಕೆ ಹೀರೋಯಿನ್​ ಆಗಿ ಪ್ರತಿಭಾನ್ವಿತ ಕಲಾವಿದೆ ಬನಿತಾ ಸಂಧು (Banita Sandhu) ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಅಡಿವಿ ಶೇಷ್​ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

‘ಅಕ್ಟೋಬರ್’, ‘ಸರ್ದಾರ್ ಉದಾಮ್’, ‘ಆದಿತ್ಯ ವರ್ಮಾ’ ಸೇರಿದಂತೆ ಹಲವು ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ ಅನುಭವ ಬನಿತಾ ಸಂಧು ಅವರಿಗೆ ಇದೆ. ಈಗ ಮೊದಲ ಬಾರಿಗೆ ಅವರು ಪ್ಯಾನ್ ಇಂಡಿಯಾ ಸಿನಿಮಾದ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಚಿತ್ರ ಇದು. ವಿಷನರಿ ಆಗಿರುವ ಟೀಮ್​ ಜತೆ ಕೈ ಜೋಡಿಸಿದ್ದಕ್ಕೆ ಖುಷಿ ಇದೆ. ಈ ಮೊದಲು ನಾನು ಮಾಡಿರದಂತಹ ಡಿಫರೆಂಟ್​ ಪಾತ್ರವೊಂದನ್ನು ನಿಭಾಯಿಸುತ್ತಿದ್ದೇನೆ. ಅಭಿಮಾನಿಗಳು ನನ್ನನ್ನು ಪೂರ್ತಿ ಬೇರೆಯದೇ ಅವತಾರದಲ್ಲಿ ನೋಡಲಿದ್ದಾರೆ. ಈ ತಂಡದ ಜೊತೆ ಕೆಲಸ ಮಾಡಲು ಎಗ್ಸೈಟ್ ಆಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಬನಿತಾ ಸಂಧು ಅವರು ‘ಗೂಢಚಾರಿ 2’ ತಂಡಕ್ಕೆ ಬಂದಿರುವ ಬಗ್ಗೆ ಅಡಿವಿ ಶೇಷ್ ಮಾತನಾಡಿದ್ದಾರೆ. ‘ಗೂಢಚಾರಿ ಪ್ರಪಂಚಕ್ಕೆ ಬನಿತಾಗೆ ವೆಲ್​ಕಮ್​. ಅವರೊಂದಿಗೆ ನಟಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. ಮೊದಲೇ ಹೇಳಿದಂತೆ ‘ಗೂಢಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್​ ಆಗಿದ್ದು, ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದ ‘ಮೇಜರ್’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು ‘ಗೂಢಚಾರಿ 2’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದದ್ದಾರೆ.

ಇದನ್ನೂ ಓದಿ: Adivi Sesh: ‘ಗೂಢಾಚಾರಿ 2’ ಫಸ್ಟ್ ಲುಕ್ ಬಿಡುಗಡೆ; ಅಡಿವಿ ಶೇಷ್ ನಟನೆಯಲ್ಲಿ ಹೊಸ ಪ್ಯಾನ್​ ಇಂಡಿಯಾ ಸಿನಿಮಾ

‘ಗೂಢಚಾರಿ 2’ ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ. ‘ಕಾರ್ತೀಕೇಯ 2’, ‘ಮೇಜರ್’ ಮತ್ತು ‘ದಿ ಕಾಶ್ಮೀರ್​ ಫೈಲ್ಸ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’, ‘ಅಭಿಷೇಕ್ ಅಗರ್ವಾಲ್ ಆರ್ಟ್ಸ್’ ಹಾಗೂ ‘ಎ.ಕೆ. ಎಂಟರ್​ಟೇನ್ಮೆಂಟ್​ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್​ವಾಲ್ ಅವರು ಜೊತೆಯಾಗಿ ‘ಗೂಢಚಾರಿ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:25 pm, Tue, 21 November 23