AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್: ಎವಿಕ್ಷನ್ ಇಲ್ಲದೆ ಇಬ್ಬರು ಹೊರಕ್ಕೆ, ಜೊತೆಗೆ ಇಬ್ಬರ ಎಂಟ್ರಿ

ಮಾಡರ್ನ್ ಕವಿ ಮಂಜನಂತೂ ಅತಿಯಾಗಿ ಕ್ರೂರತೆ ಮೆರೆದಿದ್ದ. ಅದೇ ಕಾರಣಕ್ಕೆ ಮಂಜನಿಗೆ ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಗೆ ಹಾಕಲಾಯ್ತಯ. ಮಂಜ ಹೊರಗೆ ಹೋಗಿದ್ದನ್ನು ಪ್ರೇಕ್ಷಕರು ಹಾಗೂ ಮನೆ ಮಂದಿ ಇಬ್ಬರೂ ಸಂಭ್ರಮಿಸಿದ್ದಾರೆ. ಆದರೆ ಮನೆಯ ಮೆಚ್ಚಿನ ಸ್ಪರ್ಧಿಯೂ ಒಬ್ಬರು ಮಂಜನ ಜೊತೆಗೆ ಹೊರಗೆ ಹೋಗಿದ್ದಾರೆ. ಇದು ಪ್ರೇಕ್ಷಕರ ಜೊತೆಗೆ ಮನೆ ಮಂದಿಗೂ ಸಹ ಶಾಕ್ ಆಗಿದೆ.

ಬಿಗ್​​ಬಾಸ್: ಎವಿಕ್ಷನ್ ಇಲ್ಲದೆ ಇಬ್ಬರು ಹೊರಕ್ಕೆ, ಜೊತೆಗೆ ಇಬ್ಬರ ಎಂಟ್ರಿ
Bigg Boss Kannada 13
ಮಂಜುನಾಥ ಸಿ.
|

Updated on:Oct 11, 2026 | 10:58 PM

Share

ಮುಖ್ಯಾಂಶಗಳು

  • ಈ ವಾರ ಬಿಗ್​​ಬಾಸ್ ಮನೆಯಲ್ಲಿ ಎವಿಕ್ಷನ್ ಇಲ್ಲ
  • ಎವಿಕ್ಷನ್ ಇಲ್ಲದೆ ಇಬ್ಬರು ಸ್ಪರ್ಧಿಗಳು ಹೊರಕ್ಕೆ
  • ಅದರ ಜೊತೆಗೆ ಇಬ್ಬರು ಸ್ಪರ್ಧಿಗಳು ಒಳಕ್ಕೆ

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಊಹಿಸಲಾರದ ಹಲವು ಘಟನೆಗಳು ನಡೆದಿವೆ. ವಾರವೆಲ್ಲ ಗಂಧರ್ವ ಮತ್ತು ರಾಕ್ಷಸ ಟಾಸ್ಕ್​​ನಲ್ಲಿ ಸ್ಪರ್ಧಿಗಳು ಥೇಟ್ ರಾಕ್ಷಸರಂತೆ ವರ್ತಿಸಿದ್ದಾರೆ. ಮಾಡರ್ನ್ ಕವಿ ಮಂಜನಂತೂ ಅತಿಯಾಗಿ ಕ್ರೂರತೆ ಮೆರೆದಿದ್ದ. ಅದೇ ಕಾರಣಕ್ಕೆ ಮಂಜನಿಗೆ ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಗೆ ಹಾಕಲಾಯ್ತಯ. ಮಂಜ ಹೊರಗೆ ಹೋಗಿದ್ದನ್ನು ಪ್ರೇಕ್ಷಕರು ಹಾಗೂ ಮನೆ ಮಂದಿ ಇಬ್ಬರೂ ಸಂಭ್ರಮಿಸಿದ್ದಾರೆ. ಆದರೆ ಮನೆಯ ಮೆಚ್ಚಿನ ಸ್ಪರ್ಧಿಯೂ ಒಬ್ಬರು ಮಂಜನ ಜೊತೆಗೆ ಹೊರಗೆ ಹೋಗಿದ್ದಾರೆ. ಇದು ಪ್ರೇಕ್ಷಕರ ಜೊತೆಗೆ ಮನೆ ಮಂದಿಗೂ ಸಹ ಶಾಕ್ ಆಗಿದೆ.

ಈ ಸೀಸನ್​​ನ ಮೊದಲ ಕ್ಯಾಪ್ಟನ್ ಮತ್ತು ಮನೆಯ ಸೌಮ್ಯ ಸ್ಪರ್ಧಿ ಆಗಿದ್ದ ಸಂಗೀತ ಭಟ್ ಅವರು ಸಹ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಸಂಗೀತಾ ಅವರು ಅನಾರೋಗ್ಯದಿಂದಾಗಿ ಕಳೆದ ವಾರ ಆಸ್ಪತ್ರೆ ಸೇರಿದ್ದರು. ಅವರು ಚಿಕಿತ್ಸೆ ಪಡೆದು ಮತ್ತೆ ಬಿಗ್​​ಬಾಸ್ ಮನೆಗೆ ಮರಳಿದ್ದರು. ಆದರೆ ಮನೆಗೆ ಮರಳಿದಾಗಿನಿಂತಲೂ ಅವರು ಹೆಚ್ಚೇನೂ ಸಕ್ರಿಯವಾಗಿರಲಿಲ್ಲ. ಇದೀಗ ಅವರು ಅನಾರೋಗ್ಯದ ಕಾರಣದಿಂದಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಸುದೀಪ್ ಅವರು ಖುದ್ದಾಗಿ ಅವರನ್ನು ವೇದಿಕೆಗೆ ಬರಮಾಡಿಕೊಂಡು ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ.

ಸಂಗೀತಾ ಅವರಿಗೆ ಆಂಕ್ಸೈಟಿ ಅಟ್ಯಾಕ್ ಸೇರಿದಂತೆ ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳು ಒಳಗಿದ್ದಾಗ ಕಾಡಿದವಂತೆ. ಟಾಸ್ಕ್ ಒಂದರ ವೇಳೆ ಅವರು ನಿತ್ರಾಣರಾಗಿ ಬಿದ್ದು ಬಿಟ್ಟಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಸಹ ಅವರ ಆರೋಗ್ಯ ಸಂಪೂರ್ಣವಾಗಿ ಸರಿ ಹೋಗಿರಲಿಲ್ಲ. ಇದೀಗ ಅವರ ಖಾಸಗಿ ವೈದ್ಯರ ಸಲಹೆ ಮೇರೆಗೆ ಅವರನ್ನು ಗೇಮಿನಿಂದ ಹೊರಗೆ ಕಳಿಸಲಾಗಿದೆ. ಈ ಕಾರಣಕ್ಕಾಗಿ ಈ ವಾರ ಮತಗಳ ಆಧಾರದಲ್ಲಿ ಎವಿಕ್ಷನ್ ಆಗಲಿಲ್ಲ ಆದರೂ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಗೆ ನುಗ್ಗಿದ ಕಮಾಂಡೋಗಳು: ಹೊರಗೆಳೆದುಕೊಂಡು ಹೋಗಿದ್ದು ಯಾರನ್ನು?

ಇಬ್ಬರು ಹೊರಗೆ ಹೋದರಾದರೂ ಅದಕ್ಕೆ ಪ್ರತಿಯಾಗಿ ಇಬ್ಬರು ಸ್ಪರ್ಧಿಗಳು ಈ ವಾರ ಬಿಗ್​​ಬಾಸ್ ಮನೆಗೆ ಸೇರುತ್ತಿದ್ದಾರೆ. ಅದರಲ್ಲಿ ಒಬ್ಬರು ಕುಮಾರಿ. ಅಗ್ನಿಪರೀಕ್ಷೆಗೆ ಬಂದಿದ್ದ ಕುಮಾರಿ ಅಂತಿಮ ಸುತ್ತಿನ ವರೆಗೆ ಬಂದಿದ್ದರು. ಆದರೆ ಕಾರಣಾಂತರಗಳಿಂದ ಅವರು ಆಯ್ಕೆ ಆಗಿರಲಿಲ್ಲ. ಅವರನ್ನು ಈಗ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಕರೆಸಿಕೊಳ್ಳಲಾಗಿದೆ. ಸುದೀಪ್ ಅವರು ಕುಮಾರಿ ಅವರನ್ನು ಮಾತನಾಡಿಸಿ ಮನೆಯ ಒಳಗೆ ಕಳಿಸಿದರು. ಜೊತೆಗೆ ಮತ್ತೊಬ್ಬ ಸ್ಪರ್ಧಿಯನ್ನು ಸಹ ವೈಲ್ಡ್ ಕಾರ್ಡ್ ಮೂಲಕ ಒಳಗೆ ಕಳಿಸಲಾಗುತ್ತದೆ ಎಂದು ಸುದೀಪ್ ಅವರು ಮಾಹಿತಿ ನೀಡಿದರು. ಆದರೆ ಅವರ ಪರಿಚಯ ವಾರದ ಮಧ್ಯಭಾಗದಲ್ಲಿ ಆಗಲಿದೆ. ಅವರೂ ಸಹ ಅಗ್ನಿಪರೀಕ್ಷೆ ಸ್ಪರ್ಧಿಯೇ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 pm, Sun, 11 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು