Filmfare Awards 2022: ರಣವೀರ್ ಸಿಂಗ್, ಕೃತಿ ಸನೋನ್ ಅತ್ಯುತ್ತಮ ನಟ-ನಟಿ
Ranveer Singh | Kriti Sanon: 67ನೇ ಸಾಲಿನ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಶೇರ್ಷಾ’ ಸಿನಿಮಾಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ನೀಡಲಾಗಿದೆ. ರಣವೀರ್ ಸಿಂಗ್, ಕೃತಿ ಸನೋನ್ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದಿದ್ದಾರೆ.
ಭಾರತ ತಂಡ 1983ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ತಯಾರಾದ ‘83’ ಸಿನಿಮಾದಲ್ಲಿನ ನಟನೆಗಾಗಿ ರಣವೀರ್ ಸಿಂಗ್ ಅವರು ‘ಅತ್ಯುತ್ತಮ ನಟ’ ಫಿಲ್ಮ್ಫೇರ್ ಪ್ರಶಸ್ತಿ (Filmfare Awards) ಪಡೆದಿದ್ದಾರೆ. ‘ಮಿಮಿ’ ಚಿತ್ರದಲ್ಲಿನ ನಟನೆಗಾಗಿ ಕೃತಿ ಸನೋನ್ (Kriti Sanon) ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ. ಮುಂಬೈನಲ್ಲಿ ಮಂಗಳವಾರ (ಆಗಸ್ಟ್ 30) ರಾತ್ರಿ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿದ್ದು, ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿಮಾನಿಗಳು, ಸೆಲೆಬ್ರಿಟಿಗಳ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪತ್ನಿ ದೀಪಿಕಾ ಪಡುಕೋಣೆ ಜತೆ ವೇದಿಕೆಗೆ ಬಂದು ರಣವೀರ್ ಸಿಂಗ್ (Ranveer Singh) ಅವರು ಪ್ರಶಸ್ತಿ ಸ್ವೀಕರಿಸಿದರು. ಝಗಮಗಿಸುವ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
67ನೇ ಸಾಲಿನ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಶೇರ್ಷಾ’ ಸಿನಿಮಾಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ನೀಡಲಾಗಿದೆ. ‘ಸರ್ದಾರ್ ಉದ್ಧಮ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟ ವಿಕ್ಕಿ ಕೌಶಲ್ ಅವರಿಗೆ ‘ಅತ್ಯುತ್ತಮ ನಟ’ (ವಿಮರ್ಶಕರ ಆಯ್ಕೆ) ಪ್ರಶಸ್ತಿ ನೀಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.