AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಲೆಬ್ರಿಟಿಗಳ ಅಹಂಕಾರಕ್ಕೆ ತೆರೆ ಹಾಕಲು ನಿರ್ಧರಿಸಿದ ಬಾಲಿವುಡ್​ನ ಖ್ಯಾತ ಹೇರ್​​​ಸ್ಟೈಲಿಸ್ಟ್

hair stylist Aalim Hakim: ಬಾಲಿವುಡ್ ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ಹೇರ್ ಸ್ಟೈಲಿಸ್ಟ್ ಎಂದರೆ ಅದು ಆಲಿಮ್ ಹಕೀಮ್. ಅವರು ಅಹಂಕಾರಿ ವರ್ತನೆ ತೋರುವ ನಟರ ತಂಡಕ್ಕೆ ಬಿಸಿ ಮುಟ್ಟಿಸಿದ್ದಾರೆ. ಚಿತ್ರರಂಗದ ತೆರೆಯ ಹಿಂದೆ ಕೆಲಸ ಮಾಡುವ ಕಲಾವಿದರನ್ನು ಗೌರವಿಸದ ನಟರು ಮತ್ತು ಅವರ ಮ್ಯಾನೇಜರ್‌ಗಳ ಜೊತೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಸೆಲೆಬ್ರಿಟಿಗಳ ಅಹಂಕಾರಕ್ಕೆ ತೆರೆ ಹಾಕಲು ನಿರ್ಧರಿಸಿದ ಬಾಲಿವುಡ್​ನ ಖ್ಯಾತ ಹೇರ್​​​ಸ್ಟೈಲಿಸ್ಟ್
Alim Hakim
 ಶ್ರೀಲಕ್ಷ್ಮೀ ಎಚ್
| Edited By: |

Updated on: May 16, 2026 | 8:08 PM

Share

ಬಾಲಿವುಡ್ (Bollywood) ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ಹೇರ್ ಸ್ಟೈಲಿಸ್ಟ್ ಎಂದರೆ ಅದು ಆಲಿಮ್ ಹಕೀಮ್. ಅವರು ಅಹಂಕಾರಿ ವರ್ತನೆ ತೋರುವ ನಟರ ತಂಡಕ್ಕೆ ಬಿಸಿ ಮುಟ್ಟಿಸಿದ್ದಾರೆ. ಚಿತ್ರರಂಗದ ತೆರೆಯ ಹಿಂದೆ ಕೆಲಸ ಮಾಡುವ ಕಲಾವಿದರನ್ನು ಗೌರವಿಸದ ನಟರು ಮತ್ತು ಅವರ ಮ್ಯಾನೇಜರ್‌ಗಳ ಜೊತೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಆಲಿಮ್, ‘ಯಾವ ನಟರ ಮ್ಯಾನೇಜರ್‌ಗಳು ಚಿತ್ರತಂಡದ ಸದಸ್ಯರನ್ನು ಕೀಳಾಗಿ ಕಾಣುತ್ತಾರೋ, ಅಂತಹ ನಟರ ಸಿನಿಮಾಗಳಿಂದ ನಾವು ಹಿಂದೆ ಸರಿಯಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

View this post on Instagram

A post shared by Aalim Hakim (@aalimhakim)

‘ಹೇರ್ ಡ್ರೆಸ್ಸರ್ಸ್, ಮೇಕಪ್ ಆರ್ಟಿಸ್ಟ್‌ಗಳು, ಸ್ಟೈಲಿಸ್ಟ್‌ಗಳು ಮತ್ತು ಅಸಿಸ್ಟೆಂಟ್‌ಗಳನ್ನು ‘ಕೇವಲ ಸ್ಟಾಫ್’ ಎಂದು ಕರೆಯಬೇಡಿ. ಪ್ರತಿಯೊಬ್ಬ ನಟನ ಸೌಂದರ್ಯ ಮತ್ತು ಸ್ಕ್ರೀನ್ ಅಪಿಯರೆನ್ಸ್ ಹಿಂದೆ ಈ ತಂತ್ರಜ್ಞರ ಶ್ರಮವಿರುತ್ತದೆ. ಹಬ್ಬ ಹರಿದಿನಗಳು, ನಿದ್ರೆ ಮತ್ತು ಕುಟುಂಬವನ್ನು ಮರೆತು ಕಲಾವಿದರು ಕೆಲಸ ಮಾಡುತ್ತಾರೆ. ಆದರೆ ಅವರ ಜೊತೆ ಮ್ಯಾನೇಜರ್‌ಗಳು ಅಸಭ್ಯವಾಗಿ ವರ್ತಿಸುವುದು, ಕಿರುಚಾಡುವುದು ಮತ್ತು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಆಲಿಮ್ ಬೇಸರ ವ್ಯಕ್ತಪಡಿಸಿದ್ದಾರೆ.

ನಟರ ಇಮೇಜ್‌ಗೆ ಧಕ್ಕೆ

ಹಲವು ಬಾರಿ ನಟರ ಮ್ಯಾನೇಜರ್‌ಗಳು ವ್ಯಾನಿಟಿ ವ್ಯಾನ್ ಹೊರಗಡೆ ತಂಡದ ಸದಸ್ಯರ ಜೊತೆ ತೋರುವ ಅಸಭ್ಯ ವರ್ತನೆಯಿಂದ ಆ ನಟರ ಘನತೆಗೂ ಧಕ್ಕೆ ಬರುತ್ತದೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ‘ಗೌರವ ನೀಡುವುದು ಮೂಲಭೂತ ಮಾನವೀಯತೆ, ಅದು ಉಪಕಾರವಲ್ಲ. ಪ್ರತಿಭೆಗೆ ಗೌರವ ಸಿಗಲೇಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಆಲಿಮ್ ಅವರ ಈ ನಿರ್ಧಾರಕ್ಕೆ ಬಾಲಿವುಡ್‌ನ ಗಣ್ಯರಾದ ಫರಾ ಖಾನ್, ರಾಜಕುಮಾರ್ ರಾವ್, ಕಾಜೋಲ್, ಅರ್ಜುನ್ ರಾಂಪಾಲ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ವಿಶೇಷವೆಂದರೆ ಆಲಿಮ್ ಹಕೀಮ್ ಅವರು ರಾಕಿಂಗ್ ಸ್ಟಾರ್ ಯಶ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಬಹುತೇಕ ಸ್ಟಾರ್ ನಟರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ