ಭಾರತ ಬಿಟ್ಟು ಓಡಿ ಹೋಗಲು ಪ್ಲ್ಯಾನ್ ಮಾಡಿದ್ದ ಜಾಕ್ವೆಲಿನ್; ಹೊರಬಿತ್ತು ವಿಚಾರ
ಸುಕೇಶ್ ಚಂದ್ರಶೇಖರ್ನನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಆತ ಜಾಕ್ವೆಲಿನ್ ಜತೆಗಿನ ಲವ್ ಲೈಫ್ ಬಗ್ಗೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ಜಾಕ್ವೆಲಿನ್ ಜತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡಿಸಿದ್ದ.
ಸುಕೇಶ್ ಚಂದ್ರಶೇಖರ್ (Sukesh Chandrashekhar) ಮಾಡಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಹೆಸರು ಕೂಡ ಸೇರಿಕೊಂಡಿದೆ. ಸುಕೇಶ್ ನೀಡುತ್ತಿದ್ದ ಗಿಫ್ಟ್ಗಳನ್ನು ಜಾಕ್ವೆಲಿನ್ ಅವರು ಪಡೆದುಕೊಂಡಿದ್ದಾರೆ. ಸುಕೇಶ್ ಮಾಡುತ್ತಿದ್ದ ಕೆಲಸಗಳೆಲ್ಲವೂ ಜಾಕ್ವೆಲಿನ್ಗೆ ಗೊತ್ತಿತ್ತು ಎನ್ನಲಾಗಿದೆ. ಹೀಗಿರುವಾಗಲೇ ಜಾಕ್ವೆಲಿನ್ (Jacqueline Fernandez) ಬಗ್ಗೆ ಶಾಕಿಂಗ್ ವಿಚಾರ ಒಂದು ಹೊರಬಿದ್ದಿದೆ. ಸಾಕ್ಷ್ಯ ನಾಶ ಮಾಡಲು ಜಾಕ್ವೆಲಿನ್ ಪ್ರಯತ್ನಿಸಿದ್ದರಂತೆ. ಜತೆಗೆ ವಿದೇಶಕ್ಕೆ ಪರಾರಿ ಆಗಲೂ ಅವರು ಪ್ಲ್ಯಾನ್ ರೂಪಿಸಿದ್ದರು! ಈ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಸುಕೇಶ್ ಚಂದ್ರಶೇಖರ್ನನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಆತ ಜಾಕ್ವೆಲಿನ್ ಜತೆಗಿನ ಲವ್ ಲೈಫ್ ಬಗ್ಗೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ಜಾಕ್ವೆಲಿನ್ ಜತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡಿಸಿದ್ದ. ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ನಟಿಗೆ ಐಷಾರಾಮಿ ಗಿಫ್ಟ್ಗಳು ಸಿಕ್ಕ ವಿಚಾರ ಬಹಿರಂಗವಾಗಿತ್ತು. ಹೀಗಾಗಿ ಚಾರ್ಜ್ಶೀಟ್ನಲ್ಲಿ ಜಾಕ್ವೆಲಿನ್ ಹೆಸರನ್ನು ಸೇರಿಸಲಾಯಿತು. ಈ ಸಂಬಂಧ ಅವರು ನಿರೀಕ್ಷಣಾ ಜಾಮೀನು ಪಡೆದರು.
ಈಗ ಕೋರ್ಟ್ ಜಾಕ್ವೆಲಿನ್ ಅವರ ಜಾಮೀನಿನ ಅವಧಿಯನ್ನು ವಿಸ್ತರಿಸಿದೆ. ಈ ಪ್ರಕರಣದ ವಿಚಾರಣೆ ವೇಳೆ ಜಾಕ್ವೆಲಿನ್ ಬಗ್ಗೆ ಇಡಿ ಶಾಕಿಂಗ್ ಮಾಹಿತಿ ರಿವೀಲ್ ಮಾಡಿದೆ. ‘ಜಾಕ್ವೆಲಿನ್ ಭಾರತ ಬಿಟ್ಟು ವಿದೇಶಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ತನಿಖೆ ವೇಳೆ ಜಾಕ್ವೆಲಿನ್ ಮೊಬೈಲ್ನಿಂದ ಮಾಹಿತಿಯನ್ನು ಡಿಲೀಟ್ ಮಾಡಿದ್ದಾರೆ. ಈ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾರೆ’ ಎಂದು ಇಡಿ ಅಧಿಕಾರಿಗಳು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 200 ಕೋಟಿ ರೂ. ವಂಚನೆ ಕೇಸ್; ‘ರಕ್ಕಮ್ಮ’ ಜಾಕ್ವೆಲಿನ್ ಫರ್ನಾಂಡಿಸ್ಗೆ ಸಿಕ್ತು ಮಧ್ಯಂತರ ಜಾಮೀನು
ಆದರೆ, ಇದನ್ನು ಜಾಕ್ವೆಲಿನ್ ಪರ ವಕೀಲರು ಇದನ್ನು ತಳ್ಳಿ ಹಾಕಿದ್ದಾರೆ. ‘ನನ್ನ ಕಕ್ಷೀದಾರರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಅವರು ತನಿಖೆಗೆ ಸಹಕರಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಚಾರಣೆ ಬಳಿಕ ನಟಿಯ ನಿರೀಕ್ಷಣಾ ಜಾಮೀನಿನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.