AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಆರೋಪಿ ಜೊತೆ ನೋರಾ ಫತೇಹಿ ಡೇಟಿಂಗ್?

Nora Fatehi boy friend: ನೋರಾ ಫತೇಹಿ ಯಾವಾಗಲೂ ತನ್ನ ಖಾಸಗಿ ಜೀವನವನ್ನು ರಹಸ್ಯವಾಗಿಡುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ, ನಟಿಯ ಹೆಸರು ಜನಪ್ರಿಯ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿಯೊಂದಿಗೆ ತಳುಕು ಹಾಕಿಕೊಂಡಿದೆ. ನಟಿ ಇತ್ತೀಚೆಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದು ಮೊರಾಕೊ ರಾಷ್ಟ್ರೀಯ ಫುಟ್ಬಾಲ್ ತಂಡ ಬೆಂಬಲಿಸಿದಾಗ ಅಶ್ರಫ್ ಮತ್ತು ನೋರಾ ಅವರ ಸಂಬಂಧದ ಬಗ್ಗೆ ಚರ್ಚೆ ನಡೆದವು. ಹಾಗಾದರೆ ಅಶ್ರಫ್ ನಿಜವಾಗಿಯೂ ಯಾರು? ಅತ್ಯಂತ ಆಘಾತಕಾರಿ ವಿಷಯವೆಂದರೆ ಅಶ್ರಫ್ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪಗಳಿವೆ. ಅವರ ಖಾಸಗಿ ಜೀವನವೂ ವಿವಾದಾತ್ಮಕವಾಗಿಯೇ ಉಳಿದಿದೆ.

ಅತ್ಯಾಚಾರ ಆರೋಪಿ ಜೊತೆ ನೋರಾ ಫತೇಹಿ ಡೇಟಿಂಗ್?
Nora Fatehi
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 25, 2026 | 3:40 PM

Share

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಯಾವಾಗಲೂ ತನ್ನ ಖಾಸಗಿ ಜೀವನವನ್ನು ರಹಸ್ಯವಾಗಿಡುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ, ನಟಿಯ ಹೆಸರು ಜನಪ್ರಿಯ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿಯೊಂದಿಗೆ ತಳುಕು ಹಾಕಿಕೊಂಡಿದೆ. ನಟಿ ಇತ್ತೀಚೆಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದು ಮೊರಾಕೊ ರಾಷ್ಟ್ರೀಯ ಫುಟ್ಬಾಲ್ ತಂಡ ಬೆಂಬಲಿಸಿದಾಗ ಅಶ್ರಫ್ ಮತ್ತು ನೋರಾ ಅವರ ಸಂಬಂಧದ ಬಗ್ಗೆ ಚರ್ಚೆ ನಡೆದವು. ಹಾಗಾದರೆ ಅಶ್ರಫ್ ನಿಜವಾಗಿಯೂ ಯಾರು? ಅತ್ಯಂತ ಆಘಾತಕಾರಿ ವಿಷಯವೆಂದರೆ ಅಶ್ರಫ್ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪಗಳಿವೆ. ಅವರ ಖಾಸಗಿ ಜೀವನವೂ ವಿವಾದಾತ್ಮಕವಾಗಿಯೇ ಉಳಿದಿದೆ.

ಅಶ್ರಫ್ ಹಕಿಮಿ ಅವರ ಪೋಷಕರು ಮೊರೊಕನ್ ಅರಬ್ ಮೂಲದವರು. ಅದಕ್ಕಾಗಿಯೇ ಹಕಿಮಿ ಕೂಡ ಮೊರೊಕನ್ ತಂಡವನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಪ್ರಸ್ತುತ 27 ವರ್ಷ. ಅವರು ಫುಟ್ಬಾಲ್ ತಂಡದ ನಾಯಕ. ಅಶ್ರಫ್ 2020ರಲ್ಲಿ ಸ್ಪ್ಯಾನಿಷ್ ನಟಿ ಹಿಬಾ ಅಬೌಕ್ ಅವರನ್ನು ವಿವಾಹವಾದರು. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಆದರೆ ಅಶ್ರಫ್ ಮತ್ತು ಹಿಬಾ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅಂತಿಮವಾಗಿ, ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದರು. 2023ರಲ್ಲಿ, ಅಶ್ರಫ್ ಮತ್ತು ಹಿಬಾ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಆಘಾತಕಾರಿ ಸತ್ಯವೆಂದರೆ ಅಶ್ರಫ್ ಯಾಚಿ ಕೂಡ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ . ಈ ಪ್ರಕರಣವು 2023ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದು ಪ್ರಸ್ತುತ, ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಶ್ರಫ್ ಹಕಿಮಿ ಹೇಳಿಕೊಂಡಿದ್ದಾರೆ. ಅವರು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಮದುವೆ ಸಿಂಗಾರಗೊಂಡ ಕೊಡಗಿನ ಮನೆ: ವಿಡಿಯೋ ನೋಡಿ

ನೋರಾ ಫತೇಹಿ ಅವರ ಹೆಸರು ಈ ಹಿಂದೆ ಹಲವು ಸೆಲೆಬ್ರಿಟಿಗಳೊಂದಿಗೆ ಹಲವು ಬಾರಿ ತಳುಕು ಹಾಕಿಕೊಂಡಿತ್ತು. ಆದರೆ ಈಗ ನಟಿಯ ಹೆಸರು ಅಶ್ರಫ್ ಹಕಿಮಿ ಅವರೊಂದಿಗೆ ತಳುಕು ಹಾಕಿಕೊಂಡಿದ್ದು, ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ, ಸಾಮಾಜಿಕ ಮಾಧ್ಯಮ ಮತ್ತು ಅಭಿಮಾನಿಗಳು ನೋರಾ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸುತ್ತಿದ್ದಾರೆ.

ನೋರಾ ತಮ್ಮ ಖಾಸಗಿ ಜೀವನದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ನಟಿ ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ನೋರಾ ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ. ನಟಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?