AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್​ಗೆ ಲಾಯರ್​ ಉತ್ತರ ಕೊಡ್ತಾರೆ: ಪರೇಶ್ ರಾವಲ್ ಖಡಕ್ ಪ್ರತಿಕ್ರಿಯೆ

‘ಹೇರಾ ಫೇರಿ 3’ ಸಿನಿಮಾದಿಂದ ಖ್ಯಾತ ನಟ ಪರೇಶ್ ರಾವಲ್ ಅವರು ಹೊರಬಂದಿದ್ದರಿಂದ ನಿರ್ಮಾಪಕರಿಗೆ ತೊಂದರೆ ಆಯಿತು. ನಷ್ಟ ತುಂಬಿಕೊಡಬೇಕು ಎಂದು ನಿರ್ಮಾಪಕ, ನಟ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್ ವಿರುದ್ಧ ಕೇಸ್ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪರೇಶ್ ರಾವಲ್ ಅವರು ಸೋಶಿಯಲ್ ಮೀಡಿಯಾ ಮೂಲಕ ಉತ್ತರ ನೀಡಿದ್ದಾರೆ.

ಅಕ್ಷಯ್ ಕುಮಾರ್​ಗೆ ಲಾಯರ್​ ಉತ್ತರ ಕೊಡ್ತಾರೆ: ಪರೇಶ್ ರಾವಲ್ ಖಡಕ್ ಪ್ರತಿಕ್ರಿಯೆ
Paresh Rawal, Akshay Kumar
ಮದನ್​ ಕುಮಾರ್​
|

Updated on: May 25, 2025 | 1:48 PM

Share

ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ (Akshay Kumar)​ ಮತ್ತು ಪರೇಶ್ ರಾವಲ್ ನಡುವೆ ಕಿತ್ತಾಟ ಆರಂಭ ಆಗಿದೆ. ಇಬ್ಬರ ನಡುವೆ ಕಾನೂನಿನ ಹೋರಾಟ ನಡೆಯುತ್ತಿದೆ. ಸಿನಿಮಾಗೆ ಸಂಬಂಧಿಸಿದ ಕಿರಿಕ್ ಈಗ ಕೋರ್ಟ್ ಮೆಟ್ಟಿಲೇರಿದೆ. ‘ಹೇರಾ ಫೇರಿ 3’ (Hera Pheri 3) ಸಿನಿಮಾದಿಂದ ಪರೇಶ್ ರಾವಲ್ ಅವರು ಹೊರನಡೆದಿದ್ದರಿಂದ ಚಿತ್ರತಂಡಕ್ಕೆ ತೊಂದರೆ ಆಯಿತು. ಈ ಸಿನಿಮಾದ ನಿರ್ಮಾಪಕರೂ ಆದಂತಹ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್ ಅವರ ವಿರುದ್ಧ ಕೇಸ್ ಹಾಕಿದ್ದಾರೆ. ಅದಕ್ಕೆ ಈಗ ಪರೇಶ್ ರಾವಲ್ (Paresh Rawal) ಅವರು ಖಡಕ್ ಉತ್ತರ ನೀಡಿದ್ದಾರೆ.

ಅಕ್ಷಯ್ ಕುಮಾರ್ ಅವರು ನಟ ಮಾತ್ರವಲ್ಲ, ನಿರ್ಮಾಪಕ ಕೂಡ ಹೌದು. ಕಾಮಿಡಿ ಪ್ರಿಯರು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ‘ಹೇರಾ ಫೇರಿ 3’ ಸಿನಿಮಾಗೆ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪರೇಶ್ ರಾವಲ್ ಅವರು ಒಂದು ಪ್ರಮುಖ ಪಾತ್ರ ಮಾಡಬೇಕಿತ್ತು. ಆದರೆ ಅವರು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕಿರಿಕ್ ಮಾಡಿಕೊಂಡು ಚಿತ್ರತಂಡದಿಂದ ಹೊರನಡೆದಿದರು. ಇದರಿಂದ ಅಕ್ಷಯ್ ಕುಮಾರ್ ಅವರಿಗೆ ಕೋಪ ಬಂತು.

ಇದನ್ನೂ ಓದಿ
Image
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
Image
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
Image
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
Image
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪರೇಶ್ ರಾವಲ್ ಅವರು ಚಿತ್ರತಂಡದಿಂದ ಹೊರನಡೆದಿದ್ದಕ್ಕೆ ನಿರ್ಮಾಪಕರಿಗೆ ನಷ್ಟ ಆಯಿತು. ಹಾಗಾಗಿ 25 ಕೋಟಿ ರೂಪಾಯಿ ನಷ್ಟ ತುಂಬಿಕೊಡುವಂತೆ ಅಕ್ಷಯ್ ಕುಮಾರ್ ಕೇಸ್ ಹಾಕಿದರು. ಆದರೆ ಅದಕ್ಕೆ ಪರೇಶ್ ರಾವ್ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅವರು ಲಾಯರ್ ಮೂಲಕವೇ ಉತ್ತರ ಕೊಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪರೇಶ್ ರಾವಲ್ ಅವರು ಟ್ವೀಟ್ ಮಾಡಿದ್ದಾರೆ. ‘ಚಿತ್ರತಂಡದಿಂದ ನಾನು ಹೊರನಡೆದಿದ್ದರ ಬಗ್ಗೆ ನನ್ನ ಲಾಯರ್ ಅಮೀತ್ ನಾಯಕ್ ಅವರು ಸೂಕ್ತವಾದ ಉತ್ತರ ನಿಡಿದ್ದಾರೆ. ನನ್ನ ಪ್ರತಿಕ್ರಿಯೆಯನ್ನು ಪೂರ್ತಿಯಾಗಿ ಓದಿದ ಬಳಿಕ ಎಲ್ಲ ಸಮಸ್ಯೆಗಳು ಅಂತ್ಯವಾಗಲಿವೆ’ ಎಂದು ಪರೇಶ್ ರಾವಲ್ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ಘಟನೆ ಬಗ್ಗೆ ಅಕ್ಷಯ್ ಕುಮಾರ್ ಮಾತಾಡುವಾಗ ಅಶ್ಲೀಲ ಪದ ಬಳಸಿದ ಪ್ರೇಕ್ಷಕರು; ವಿಡಿಯೋ ವೈರಲ್

ವರದಿಗಳ ಪ್ರಕಾರ, ಪರೇಶ್ ರಾವಲ್ ಅವರಿಗೆ 11 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿತ್ತು. ಅದನ್ನು ಅವರೀಗ ಬಡ್ಡಿ ಸಮೇತವಾಗಿ ವಾಪಸ್ ನೀಡಿದ್ದಾರೆ. ಒಂದು ವೇಳೆ ಅವರು ಸಿನಿಮಾದಲ್ಲಿ ನಟಿಸಿದ್ದರೆ 15 ಕೋಟಿ ರೂಪಾಯಿ ಸಂಭಾವನೆ ನೀಡಬೇಕು ಎಂದು ಒಪ್ಪಂದ ಆಗಿತ್ತು. ಚಿತ್ರತಂಡದಿಂದ ಪರೇಶ್ ರಾವಲ್ ಅವರು ಏಕಾಏಕಿ ಹೊರಬಂದಿದ್ದರಿಂದ ಅಭಿಮಾನಿಗಳಿಗೆ ಶಾಕ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.