AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜೋಡಿಯ 1250 ಕೋಟಿ ರೂಪಾಯಿ ಸಾಮ್ರಾಜ್ಯ

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿಯ ಒಟ್ಟು ಸಂಪತ್ತು ಬರೋಬ್ಬರಿ 1250 ಕೋಟಿ ರೂಪಾಯಿ ತಲುಪಿದೆ. ಪ್ರಿಯಾಂಕಾ ಅವರ ಜನ್ಮದಿನದ ಅಂಗವಾಗಿ, ಈ ಜೋಡಿಯ ಸಿನಿಮಾ ಗಳಿಕೆ, ಉದ್ಯಮ ಹಾಗೂ ಐಷಾರಾಮಿ ಜೀವನದ ಒಂದು ನೋಟ ಇಲ್ಲಿದೆ. ಸದ್ಯ ಪ್ರಿಯಾಂಕಾ ಅವರು ಹಾಲಿವುಡ್​​ನಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜೋಡಿಯ 1250 ಕೋಟಿ ರೂಪಾಯಿ ಸಾಮ್ರಾಜ್ಯ
ಪ್ರಿಯಾಂಕಾ-ನಿಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 18, 2026 | 7:16 AM

Share

ಮುಖ್ಯಾಂಶಗಳು

  • ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಕೋಟಿ ಕೋಟಿ ಕಮಾಯಿ
  • ಪ್ರಿಯಾಂಕಾ ಪತಿ ನಿಕ್ ಜೋನಸ್ ನೂರಾರು ಕೋಟಿಯ ಒಡೆಯ
  • ಲಾಸ್ ಏಂಜಲೀಸ್‌ನ 20 ಮಿಲಿಯನ್ ಡಾಲರ್ ಬಂಗಲೆ

ಹಾಲಿವುಡ್ ಮತ್ತು ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ಜೋಡಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಪ್ರಮುಖರು. ಇಬ್ಬರೂ ತಮ್ಮ ಕಠಿಣ ಪರಿಶ್ರಮದಿಂದ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಈ ದಂಪತಿಯ ಒಟ್ಟು ಸಂಪತ್ತು ಸುಮಾರು 1250 ಕೋಟಿ ರೂಪಾಯಿ ಆಗಿದೆ. ಇಂದು (ಜುಲೈ 18) ಪ್ರಿಯಾಂಕಾ ಜನ್ಮದಿನ. ಅವರ ಜರ್ನಿ ಬಗ್ಗೆ ಇಲ್ಲಿದೆ ವಿವರ.

ಪ್ರಿಯಾಂಕಾ ಚೋಪ್ರಾ ಅವರ ಸಿನಿಮಾ ಗಳಿಕೆ

ಪ್ರಿಯಾಂಕಾ ಚೋಪ್ರಾ ಅವರ ನಟನಾ ಪ್ರಯಾಣ 2002ರಲ್ಲಿ ತಮಿಳು ಸಿನಿಮಾದಿಂದ ಆರಂಭವಾಯಿತು. ನಂತರ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ‘ಫ್ಯಾಷನ್’ ಮತ್ತು ‘ಬಾಜೀರಾವ್ ಮಸ್ತಾನಿ’ ಅವರ ಯಶಸ್ವಿ ಸಿನಿಮಾಗಳಾಗಿವೆ. ಪ್ರಸ್ತುತ ಅವರು ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟ ಮಹೇಶ್ ಬಾಬು ಅವರ ಮುಂದಿನ ಸಿನಿಮಾಗೆ ಪ್ರಿಯಾಂಕಾ 30 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಜಾಗತಿಕ ವೆಬ್ ಸರಣಿ ‘ಸಿಟಾಡೆಲ್’ ಪಾತ್ರಕ್ಕಾಗಿ ಅವರು 41 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಸರಣಿಯಲ್ಲಿ ಪುರುಷ ನಟನಿಗೆ ಸಮಾನವಾಗಿ ಅವರಿಗೆ ಸಂಭಾವನೆ ನೀಡಲಾಗಿದೆ.

ಉದ್ಯಮ ಮತ್ತು ಬ್ರ್ಯಾಂಡ್ ಮೌಲ್ಯ

ಪ್ರಿಯಾಂಕಾ ಕೇವಲ ನಟನೆಯಷ್ಟೇ ಅಲ್ಲದೆ ಉದ್ಯಮದಲ್ಲೂ ಯಶಸ್ವಿಯಾಗಿದ್ದಾರೆ. ಅವರು ಜಾಗತಿಕ ಮಟ್ಟದ ಪ್ರಮುಖ ಫ್ಯಾಷನ್ ಮತ್ತು ಜ್ಯುವೆಲ್ಲರಿ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. 2021ರಲ್ಲಿ ಪ್ರಿಯಾಂಕಾ ಸ್ವಂತ ಹೇರ್-ಕೇರ್ ಬ್ರ್ಯಾಂಡ್ ಆರಂಭಿಸಿದರು. ಡೇಟಿಂಗ್ ಆಪ್ ಮತ್ತು ಆಹಾರ ಕ್ಷೇತ್ರದಲ್ಲೂ ಅವರು ಬಂಡವಾಳ ಹೂಡಿದ್ದಾರೆ.

ಸಂಗೀತ ಲೋಕದ ತಾರೆ ನಿಕ್ ಜೋನಸ್

ನಿಕ್ ಜೋನಸ್ 2006ರಲ್ಲಿ ‘ಜೋನಸ್ ಬ್ರದರ್ಸ್’ ತಂಡದ ಮೂಲಕ ಸಂಗೀತ ರಂಗಕ್ಕೆ ಬಂದರು. ನಂತರ ಅವರು ನಟನೆಯಲ್ಲೂ ಹೆಸರು ಮಾಡಿದರು. ಸೋಲೋ ಗಾಯಕರಾಗಿಯೂ ನಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಅನ್ನು ಹಿಂದಿಕ್ಕಿದ ನೋರಾ ಫತೇಹಿ

ವೈಯಕ್ತಿಕ ಸಂಪತ್ತಿನ ವಿವರ

ವರದಿಗಳ ಪ್ರಕಾರ ಪ್ರಿಯಾಂಕಾ ಚೋಪ್ರಾ ಅವರ ವೈಯಕ್ತಿಕ ಸಂಪತ್ತು 583 ಕೋಟಿ ರೂಪಾಯಿ ಆಗಿದೆ. ನಿಕ್ ಜೋನಸ್ ಅವರ ಸಂಪತ್ತು ಸುಮಾರು 666 ಕೋಟಿ ರೂಪಾಯಿ ಆಗಿದೆ. ದಂಪತಿಯ ಒಟ್ಟು ಸಂಪತ್ತಿನಲ್ಲಿ ಪ್ರಿಯಾಂಕಾ ಅವರ ಪಾಲು ಶೇಕಡಾ 46.6 ರಷ್ಟಿದೆ. ಈ ಜೋಡಿ 2019ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಬೃಹತ್ ಬಂಗಲೆ ಖರೀದಿಸಿದೆ. ಈ ಐಷಾರಾಮಿ ಬಂಗಲೆಯ ಮೌಲ್ಯ ಸುಮಾರು 20 ಮಿಲಿಯನ್ ಡಾಲರ್ ಆಗಿದೆ.

Published On - 7:15 am, Sat, 18 July 26

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು
ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಇಬ್ಬರು ಅಮಾನತು