AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯಿ ಪಲ್ಲವಿ ಟ್ರೋಲ್ ಮಾಡಿದವರಿಗೆ ಪ್ರೋಮೋ ಮೂಲಕ ಉತ್ತರ ಕೊಟ್ಟ ‘ರಾಮಾಯಣ’ ತಂಡ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಸೀತಾ ದೇವಿಯಾಗಿ ನಟಿಸಿರುವ ಸಾಯಿ ಪಲ್ಲವಿ ಅವರ ಹೊಸ ಪ್ರೋಮೋ ಬಿಡುಗಡೆಯಾಗಿದೆ. ದೈವಿಕ ಹಾಗೂ ಶಾಂತ ಸ್ವಭಾವದ ಸಾಯಿ ಪಲ್ಲವಿ ಅವರ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನವೆಂಬರ್ 5 ರಂದು ಸಿನಿಮಾ ತೆರೆಕಾಣಲಿದೆ.

ಸಾಯಿ ಪಲ್ಲವಿ ಟ್ರೋಲ್ ಮಾಡಿದವರಿಗೆ ಪ್ರೋಮೋ ಮೂಲಕ ಉತ್ತರ ಕೊಟ್ಟ ‘ರಾಮಾಯಣ’ ತಂಡ
ಸಾಯಿ ಪಲ್ಲವಿ
ರಾಜೇಶ್ ದುಗ್ಗುಮನೆ
|

Updated on: Nov 03, 2026 | 12:22 PM

Share

ಮುಖ್ಯಾಂಶಗಳು

  • ಸೀತಾ ದೇವಿಯಾಗಿ ಸಾಯಿ ಪಲ್ಲವಿ ಮಿಂಚು
  • ಬಿಡುಗಡೆಯಾಯ್ತು ರಾಮಾಯಣ ಹೊಸ ಪ್ರೋಮೋ
  • ಸೌಮ್ಯ ಸ್ವಭಾವ ಹಾಗೂ ದೈವಿಕ ಕಳೆ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರತಂಡವು ಪ್ರಮುಖ ಪಾತ್ರಗಳ ಪರಿಚಯವನ್ನು ಒಂದೊಂದಾಗಿ ಮಾಡುತ್ತಿದೆ. ಇದೀಗ ಚಿತ್ರದಲ್ಲಿ ಸೀತಾ ದೇವಿಯಾಗಿ ನಟಿಸಿರುವ ನಟಿ ಸಾಯಿ ಪಲ್ಲವಿ ಅವರ ಕ್ಯಾರೆಕ್ಟರ್ ಪ್ರೋಮೋ ಬಿಡುಗಡೆಯಾಗಿದೆ. ರವಿ ದುಬೆ ಅವರ ಲಕ್ಷ್ಮಣನ ಪೋಸ್ಟರ್ ಬೆನ್ನಲ್ಲೇ ಈ ವಿಡಿಯೋ ಹೊರಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಸಾಯಿ ಪಲ್ಲವಿ ಅವರ ಕಾಸ್ಟಿಂಗ್ ಬಗ್ಗೆ ಆರಂಭದಲ್ಲಿ ಕೆಲವರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಹೊಸ ಪ್ರೋಮೋ ಬಿಡುಗಡೆಯಾದ ಬಳಿಕ ಎಲ್ಲರ ಅಭಿಪ್ರಾಯ ಬದಲಾಗಿದೆ. ಪ್ರೋಮೋದಲ್ಲಿ ಸಾಯಿ ಪಲ್ಲವಿ ಅವರ ಹಾವಭಾವ ಹಾಗೂ ಸೌಮ್ಯ ಸ್ವಭಾವ ಎಲ್ಲರ ಗಮನ ಸೆಳೆದಿದೆ. ಸೀತಾ ಮಾತೆಯ ಪಾತ್ರದಲ್ಲಿ ಅವರು ಸಂಪೂರ್ಣವಾಗಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಪ್ರೋಮೋ ಹಂಚಿಕೊಂಡಿರುವ ಚಿತ್ರತಂಡ, ‘ಭೂಮಿಯ ಪುತ್ರಿ, ಮಿಥಿಲೆಯ ರಾಜಕುಮಾರಿ. ಪ್ರೀತಿಯಿಂದ ಬಂಧಿತಳಾಗಿ, ಧರ್ಮದಿಂದ ಮಾರ್ಗದರ್ಶಿಸಲ್ಪಟ್ಟವಳು’ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಸಾಯಿ ಪಲ್ಲವಿ ಅವರ ಮುಖದಲ್ಲಿನ ಶಾಂತತೆ ಮತ್ತು ದೈವಿಕ ಕಳೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಆರಂಭದ ದಿನಗಳಲ್ಲಿ ಇದ್ದ ಎಲ್ಲಾ ಅನುಮಾನಗಳನ್ನು ಈ ಹೊಸ ಪ್ರೋಮೋ ಸಂಪೂರ್ಣವಾಗಿ ದೂರ ಮಾಡಿದೆ.

ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಯಶ್ ರಾವಣನ ಪಾತ್ರದಲ್ಲಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು ಇದೇ ನವೆಂಬರ್ 5ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಪೈರಸಿಯಿಂದ ತಪ್ಪಿಸಿಕೊಳ್ಳಲು ರಿಲೀಸ್​​ಗೂ ಮೊದಲೇ ದೊಡ್ಡ ಶೀಲ್ಡ್ ಪಡೆದ ‘ರಾಮಾಯಣ’

ಚಿತ್ರದ ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಸ್ಟಾರ್ ನಟರ ಬಹುಕೋಟಿ ವೆಚ್ಚದ ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಗಳಿವೆ. ಮೊದಲ ಭಾಗದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಾಯಿ ಪಲ್ಲವಿ ಅವರ ಅಭಿನಯವು ಸಿನಿಮಾಗೆ ಮತ್ತಷ್ಟು ಬಲ ತಂದುಕೊಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More