AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೈರಸಿಯಿಂದ ತಪ್ಪಿಸಿಕೊಳ್ಳಲು ರಿಲೀಸ್​​ಗೂ ಮೊದಲೇ ದೊಡ್ಡ ಶೀಲ್ಡ್ ಪಡೆದ ‘ರಾಮಾಯಣ’

ಬರೋಬ್ಬರಿ 2,000 ಕೋಟಿ ರೂಪಾಯಿ ವೆಚ್ಚದ ‘ರಾಮಾಯಣ’ ಸಿನಿಮಾಗೆ ಆನ್‌ಲೈನ್ ಪೈರಸಿ ತಡೆಯಲು ಬಾಂಬೆ ಹೈಕೋರ್ಟ್ ‘ಡೈನಾಮಿಕ್’ ಕಾನೂನು ರಕ್ಷಣೆ ನೀಡಿದೆ. ಅನಧಿಕೃತವಾಗಿ ಚಿತ್ರದ ಕ್ಲಿಪ್‌ಗಳನ್ನು ಹಂಚಿಕೊಳ್ಳುವ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೋರ್ಟ್ ಇಂಟರ್ನೆಟ್ ಸೇವಾದಾರರು ಹಾಗೂ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಸೂಚಿಸಿದೆ.

ಪೈರಸಿಯಿಂದ ತಪ್ಪಿಸಿಕೊಳ್ಳಲು ರಿಲೀಸ್​​ಗೂ ಮೊದಲೇ ದೊಡ್ಡ ಶೀಲ್ಡ್ ಪಡೆದ ‘ರಾಮಾಯಣ’
ರಾಮಾಯಣ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 03, 2026 | 10:51 AM

Share

ಮುಖ್ಯಾಂಶಗಳು

  • ಪೈರಸಿಗೆ ಹೈಕೋರ್ಟ್ ಬ್ರೇಕ್
  • ‘ರಾಮಾಯಣ’ ಸಿನಿಮಾಗೆ ಸಿಕ್ತು ಡೈನಾಮಿಕ್ ಲೀಗಲ್ ಶೀಲ್ಡ್
  • ಆನ್‌ಲೈನ್ ಲೀಕ್ ತಡೆಯಲು ಬಾಂಬೆ ಕೋರ್ಟ್ ತುರ್ತು ಆದೇಶ

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಹಾಗೂ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ಪೈರಸಿ ತಡೆಯಲು ತಂಡ ಮುಂದಾಗಿದೆ. ಇದಕ್ಕಾಗಿ ತಂಡ ಬಾಂಬೆ ಕೋರ್ಟ್ ಮೆಟ್ಟಿಲೇರಿತ್ತು. ಆನ್‌ಲೈನ್‌ನಲ್ಲಿ ಸೋರಿಕೆಯಾಗುವುದನ್ನು ತಡೆಯಲು ಕೋರ್ಟ್ ಕಾನೂನು ರಕ್ಷಣೆ ನೀಡಿದೆ. ಇದರಿಂದ ಸಿನಿಮಾ ತಂಡದವರು ನಿಟ್ಟುಸಿರು ಬಿಟ್ಟಿದ್ದಾರೆ.

ಸಿನಿಮಾ ಬಿಡುಗಡೆಯಾದ ಬಳಿಕ ಆನ್‌ಲೈನ್‌ನಲ್ಲಿ ಪೈರಸಿ ಲಿಂಕ್‌ಗಳು ಹರಿದಾಡಬಹುದು ಎಂಬ ಭೀತಿ ನಿರ್ಮಾಪಕರನ್ನು ಕಾಡಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ತುರ್ತು ಆದೇಶ ಹೊರಡಿಸಿದೆ. ಅನಧಿಕೃತವಾಗಿ ಸಿನಿಮಾದ ವೀಡಿಯೊ, ಆಡಿಯೋ ಅಥವಾ ಕ್ಲಿಪ್‌ಗಳನ್ನು ಹಂಚಿಕೊಳ್ಳುವ ವೆಬ್‌ಸೈಟ್‌ಗಳನ್ನು ತಕ್ಷಣವೇ ಬ್ಲಾಕ್ ಮಾಡಲು ಸೂಚಿಸಿದೆ. ಇಂಟರ್ನೆಟ್ ಸೇವಾದಾರರು ಹಾಗೂ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಈ ನಿರ್ದೇಶನ ನೀಡಲಾಗಿದೆ. ಗೂಗಲ್ ಸೇರಿದಂತೆ ಪ್ರಮುಖ ಟೆಕ್ ಸಂಸ್ಥೆಗಳು ಈ ಆದೇಶವನ್ನು ಪಾಲಿಸಲು ಒಪ್ಪಿಕೊಂಡಿವೆ.

ಪೈರಸಿ ಮಾಡುವ ವೆಬ್‌ಸೈಟ್‌ಗಳು ಹೊಸ ಹೊಸ ಲಿಂಕ್‌ಗಳನ್ನು ಸೃಷ್ಟಿಸುವುದನ್ನು ತಡೆಯಲು ‘ಡೈನಾಮಿಕ್’ ಆದೇಶ ಜಾರಿಗೊಳಿಸಲಾಗಿದೆ. ಇದರಿಂದಾಗಿ ಪ್ರತಿ ಬಾರಿಯೂ ಹೊಸ ಲಿಂಕ್ ಅಥವಾ ವೆಬ್‌ಸೈಟ್ ಕಂಡುಬಂದಾಗ ಚಿತ್ರತಂಡ ಮತ್ತೆ ಕೋರ್ಟ್‌ಗೆ ಹೋಗುವ ಅಗತ್ಯವಿರುವುದಿಲ್ಲ. ಅದೇ ಆದೇಶದ ಅಡಿಯಲ್ಲಿ ಅಂತಹ ಹೊಸ ಲಿಂಕ್‌ಗಳನ್ನು ನೇರವಾಗಿ ಬ್ಲಾಕ್ ಮಾಡಬಹುದು. ಈ ಆದೇಶವು ಡಿಸೆಂಬರ್ ಮಧ್ಯದವರೆಗೆ ಜಾರಿಯಲ್ಲಿರಲಿದೆ.

ಈ ಕಾನೂನು ರಕ್ಷಣೆ ಸಿನಿಮಾದ ನಿರ್ಮಾಪಕರಿಗೆ ಬಹುದೊಡ್ಡ ಸಮಾಧಾನ ತಂದಿದೆ. ಏಕೆಂದರೆ ಈ ರಾಮಾಯಣ ಸಿನಿಮಾದ ಮೊದಲ ಭಾಗವು ಬರೋಬ್ಬರಿ 2,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸಿನಿಮಾ ಸಾಕಷ್ಟು ಹಣ ಮಾಡಬೇಕಾದ ಅನಿವಾರ್ಯತೆ ಇದೆ. ರಣ್‌ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಎಆರ್ ರೆಹಮಾನ್ ಮತ್ತು ಹಾನ್ಸ್ ಝಿಮ್ಮರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ:  ಯಶ್​​ ಅವರ ಒಂದು ಫೈಟ್​​ಗೆ 6.5 ವರ್ಷ ಶ್ರಮ, ‘ರಾಮಾಯಣ’ಕ್ಕೆ ಪಟ್ಟ ಕಷ್ಟ ವಿವರಿಸಿದ ನಿರ್ದೇಶಕ

ಇಷ್ಟೊಂದು ಬೃಹತ್ ಮೊತ್ತ ಹೂಡಿಕೆಯಾಗಿರುವುದರಿಂದ ಪೈರಸಿ ತಪ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೇ ಬಂದು ಸಿನಿಮಾವನ್ನು ವೀಕ್ಷಿಸಬೇಕು ಎಂಬುದು ನಿರ್ಮಾಪಕರ ಆಶಯವಾಗಿದೆ. ಹೀಗಾಗಿ ಅನಧಿಕೃತವಾಗಿ ಲಿಂಕ್‌ಗಳನ್ನು ಅಪ್‌ಲೋಡ್ ಮಾಡುವ ಅಥವಾ ಶೇರ್ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಎದುರಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More