AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ ಮೇಲೆ ಪ್ರೀತಿ, ‘ಆಲ್ಫಾ’ ನೋಡಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಮಯ್ ರೈನಾ

Samay Raina movie: ‘ಆಲ್ಫಾ’ ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆಗಳು ಬಂದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ವಿಶೇಷವಾಗಿ ಆಲಿಯಾ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇದೀಗ ಯೂಟ್ಯೂಬ್ ಸೆನ್ಸೇಷನ್ ಎನಿಸಿಕೊಂಡಿರುವ ಸ್ಟಾಂಡಪ್ ಕಮಿಡಿಯನ್ ಸಮಯ್ ರೈನಾ, ಆಲಿಯಾ ಹಾಗೂ ಶರ್ವರಿ ಮೇಲಿನ ಪ್ರೀತಿಗಾಗಿ ‘ಆಲ್ಫಾ’ ಸಿನಿಮಾ ಪ್ರದರ್ಶಿಸುತ್ತಿರುವ ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದಾರೆ. ಆಲಿಯಾ ಹಾಗೂ ಶರ್ವರಿ ಮೇಲಿನ ಪ್ರೀತಿ, ಗೌರವಕ್ಕಾಗಿ ಹೀಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಆಲಿಯಾ ಮೇಲೆ ಪ್ರೀತಿ, ‘ಆಲ್ಫಾ’ ನೋಡಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಮಯ್ ರೈನಾ
Samay Raina
ಮಂಜುನಾಥ ಸಿ.
|

Updated on: Jul 05, 2026 | 8:10 PM

Share

ಬಾಲಿವುಡ್ ನಟಿಯರಾದ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ವಾಘ್ ನಟಿಸಿರುವ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಆಲ್ಫಾ’ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆಗಳು ಬಂದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ವಿಶೇಷವಾಗಿ ಆಲಿಯಾ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇದೀಗ ಯೂಟ್ಯೂಬ್ ಸೆನ್ಸೇಷನ್ ಎನಿಸಿಕೊಂಡಿರುವ ಸ್ಟಾಂಡಪ್ ಕಮಿಡಿಯನ್ ಸಮಯ್ ರೈನಾ, ಆಲಿಯಾ ಹಾಗೂ ಶರ್ವರಿ ಮೇಲಿನ ಪ್ರೀತಿಗಾಗಿ ‘ಆಲ್ಫಾ’ ಸಿನಿಮಾ ಪ್ರದರ್ಶಿಸುತ್ತಿರುವ ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದಾರೆ. ಆಲಿಯಾ ಹಾಗೂ ಶರ್ವರಿ ಮೇಲಿನ ಪ್ರೀತಿ, ಗೌರವಕ್ಕಾಗಿ ಹೀಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಶನಿವಾರದಂದು ಸಮಯ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ‘ಭಾನುವಾರ ನಾನು ಮುಂಬೈನಲ್ಲಿ ‘ಆಲ್ಫಾ’ ಚಿತ್ರವನ್ನು ನೋಡಲು ಹೋಗುತ್ತಿದ್ದೇನೆ. ನಾನು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದೇನೆ ನನ್ನ ಜೊತೆಗೆ ಇನ್ನೂ 250 ಮಂದಿ ‘ಆಲ್ಫಾ’ ಸಿನಿಮಾ ನೋಡಬಹುದಾಗಿದ್ದು, ಮುಂಚಿತವಾಗಿ ರಿಜಿಸ್ಟರ್ ಮಾಡಿಕೊಂಡವರಿಗೆ ವಾಟ್ಸ್ ಅಪ್ ಮೂಲಕ ಟಿಕೆಟ್ ಕಳಿಸುತ್ತೇನೆ’ ಎಂದಿದ್ದರು. ಅಂತೆಯೇ ಇಂದು ಎಲ್ಲರಿಗೂ ಸಿನಿಮಾ ತೋರಿಸಿದ್ದಾರಂತೆ ಸಮಯ್ ರೈನಾ.

‘ಆಲಿಯಾ ಮತ್ತು ಶರ್ವರಿ ನನ್ನ ‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2ರ ಮೊದಲ ಸಂಚಿಕೆಗೆ ಅತಿಥಿಗಳಾಗಿ ಬಂದಿದ್ದರು. ಬಹಳ ಪ್ರೀತಿಯಿಂದ ನಮ್ಮೊಂದಿಗೆ ವರ್ತಿಸಿದರು. ಅವರಿಗೆ ಪ್ರೀತಿಯನ್ನು ತೋರಿಸಲು ಇದು ನನ್ನ ಕಡೆಯಿಂದ ಒಂದು ಸಣ್ಣ ಪ್ರಯತ್ನ ಅಷ್ಟೇ. ಅವರಿಬ್ಬರನ್ನೂ ನಾನು ಬಹಳ ಇಷ್ಟಪಡುತ್ತೇನೆ ಮತ್ತು ಅವರ ಚಿತ್ರವನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ. ನಾಳೆ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು.

ಇದನ್ನೂ ಓದಿ:ಮತ್ತೆ ಮತ್ತೆ ಮುಗ್ಗರಿಸಿದರೂ ಬುದ್ಧಿ ಕಲಿಯದ ಆಲಿಯಾ ಭಟ್

ಸಮಯ್ ರೈನಾ ಅವರ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ವಿವಾದಕ್ಕೆ ಕಾರಣವಾಗಿತ್ತು. ಅವರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕೊನೆಗೆ ಅವರು ತಮ್ಮ ಶೋನ ಎಲ್ಲ ಎಪಿಸೋಡುಗಳನ್ನು ಯೂಟ್ಯೂಬ್​​ನಿಂದ ಡಿಲೀಟ್ ಮಾಡಬೇಕಾಯ್ತು. ಪೊಲೀಸರ ವಿಚಾರಣೆ ಎದುರಿಸಬೇಕಾಯ್ತು. ಆದರೆ ಇತ್ತೀಚೆಗೆ ಅವರು ಅದೇ ಶೋನ ಎರಡನೇ ಸೀಸನ್ ಪ್ರಾರಂಭ ಮಾಡಿದರು. ಆ ಶೋನ ಮೊದಲ ಎಪಿಸೋಡಿಗೆ ಆಲಿಯಾ ಮತ್ತು ಶರ್ವರಿ ಅವರುಗಳು ಅತಿಥಿಗಳಾಗಿ ಬಂದಿದ್ದರು. ಸಾಕಷ್ಟು ವಿವಾದಗಳಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ತಮ್ಮ ಶೋಗೆ ಬಂದಿದ್ದಕ್ಕೆ ಆಲಿಯಾ ಹಾಗೂ ಶರ್ವರಿ ಅವರಿಗೆ ಕೃತಜ್ಞತೆ ಹೇಳಿರುವ ಸಮಯ್, ಅವರ ಸಿನಿಮಾ ಟಿಕೆಟ್ ಗಳನ್ನು ಬುಕ್ ಮಾಡಿದ್ದರು.

‘ಆಲ್ಫಾ’ ಸಿನಿಮಾವು ಸ್ಪೈ ಆಕ್ಷನ್ ಸಿನಿಮಾ ಆಗಿದೆ. ಸಿನಿಮಾನಲ್ಲಿ ಆಲಿಯಾ, ಗೂಢಚಾರಿಗಳಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಹೃತಿಕ್ ರೋಷನ್ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಶಿವ ರಾವಳ್ಳಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಎರಡು ದಿನಕ್ಕೆ ಸುಮಾರು 30 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ
10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ