AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲೀಲಾ ಮೊದಲ ಬಾಲಿವುಡ್ ಸಿನಿಮಾ ರಿಲೀಸ್​​ಗೆ ದಿನಾಂಕ ನಿಗದಿ

ತೆಲುಗು ಚಿತ್ರರಂಗದ ದಿಗ್ಗಜರಾದ ಪವನ್ ಕಲ್ಯಾಣ್, ಮಹೇಶ್ ಬಾಬು, ಬಾಲಕೃಷ್ಣ, ರವಿತೇಜ ಅಂಥಹ ಸ್ಟಾರ್ ನಟರುಗಳೊಡನೆ ತೆರೆ ಹಂಚಿಕೊಂಡು ಹಿಟ್ ಮೇಲೆ ಹಿಟ್ ಕೊಟ್ಟರು. ಬಳಿಕ ತಮಿಳಿಗೆ ಹೋಗಿ ಅಲ್ಲಿಯೂ ಮೋಡಿ ಮಾಡಿರುವ ಶ್ರೀಲೀಲಾ ಕಳೆದ ವರ್ಷವೇ ಬಾಲಿವುಡ್ ಬಾಗಿಲು ತಟ್ಟಿದ್ದರು. ಅವರಿಗೆ ಒಳ್ಳೆಯ ಅವಕಾಶಗಳು ಸಹ ದೊರೆತಿದ್ದವು. ಆದರೆ ಸಿನಿಮಾ ಚಿತ್ರೀಕರಣಕ್ಕೆ ಅಡೆ-ತಡೆ ಉಂಟಾಗಿತ್ತು. ಇದೀಗ ಕೊನೆಗೂ ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ.

ಶ್ರೀಲೀಲಾ ಮೊದಲ ಬಾಲಿವುಡ್ ಸಿನಿಮಾ ರಿಲೀಸ್​​ಗೆ ದಿನಾಂಕ ನಿಗದಿ
Sreeleela Karthik Aryan
ಮಂಜುನಾಥ ಸಿ.
|

Updated on: Oct 15, 2026 | 8:42 PM

Share

ಕನ್ನಡದ ಹುಡುಗಿ ಶ್ರೀಲೀಲಾ, ಈಗ ಪ್ಯಾನ್ ಇಂಡಿಯಾ ನಟಿ ಎನಿಸಿಕೊಳ್ಳುವ ಹೊಸ್ತಿಲಲ್ಲಿದ್ದಾರೆ. ಕನ್ನಡದ ಬಳಿಕ ತೆಲುಗಿಗೆ ಹಾರಿ ಅಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದು ಮಾತ್ರವೇ ಅಲ್ಲದೆ, ತೆಲುಗು ಚಿತ್ರರಂಗದ ದಿಗ್ಗಜರಾದ ಪವನ್ ಕಲ್ಯಾಣ್, ಮಹೇಶ್ ಬಾಬು, ಬಾಲಕೃಷ್ಣ, ರವಿತೇಜ ಅಂಥಹ ಸ್ಟಾರ್ ನಟರುಗಳೊಡನೆ ತೆರೆ ಹಂಚಿಕೊಂಡು ಹಿಟ್ ಮೇಲೆ ಹಿಟ್ ಕೊಟ್ಟರು. ಬಳಿಕ ತಮಿಳಿಗೆ ಹೋಗಿ ಅಲ್ಲಿಯೂ ಮೋಡಿ ಮಾಡಿರುವ ಶ್ರೀಲೀಲಾ ಕಳೆದ ವರ್ಷವೇ ಬಾಲಿವುಡ್ ಬಾಗಿಲು ತಟ್ಟಿದ್ದರು. ಅವರಿಗೆ ಒಳ್ಳೆಯ ಅವಕಾಶಗಳು ಸಹ ದೊರೆತಿದ್ದವು. ಆದರೆ ಸಿನಿಮಾ ಚಿತ್ರೀಕರಣಕ್ಕೆ ಅಡೆ-ತಡೆ ಉಂಟಾಗಿತ್ತು. ಇದೀಗ ಕೊನೆಗೂ ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ.

ಬಾಲಿವುಡ್‌ನ ಯುವ ನಟ ಕಾರ್ತಿಕ್ ಆರ್ಯನ್ ಜೊತೆಗೆ ರೊಮ್ಯಾಂಟಿಕ್ ಮ್ಯೂಸಿಕಲ್ ಹಿಂದಿ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟನೆ ಮಾಡಿದ್ದರು. ಈ ಸಿನಿಮಾ ಮುಂದಿನ ವರ್ಷ ಅಂದರೆ 2027ರ ಏಪ್ರಿಲ್ 30ರಂದು ದೊಡ್ಡ ಪರದೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಲಾಗಿದ್ದರೂ, ನಿರ್ದೇಶಕ ಅನುರಾಗ್ ಬಾಸು ಅವರ ಈ ಚಿತ್ರದ ಟೈಟಲ್ ಅನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಸಿನಿಮಾದ ಹೆಸರನ್ನು ಘೋಷಣೆ ಮಾಡಲಿದೆ ಚಿತ್ರತಂಡ. ಆದರೆ ಸಿನಿಮಾ ಪ್ರಿಯರು ಈ ಸಿನಿಮಾವನ್ನು ‘ಆಶಿಖಿ 3’ ಎಂದು ಕರೆಯುತ್ತಿದ್ದಾರೆ.‘

ಇದನ್ನೂ ಓದಿ:ರಜನೀಕಾಂತ್ ‘ಧರ್ಮನ್’ ಸಿನಿಮಾನಲ್ಲಿ ನಟಿ ಶ್ರೀಲೀಲಾ

ಈ ಚಿತ್ರದ ಮೂಲಕ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಭಿನ್ನ ಶೈಲಿಯ ನಿರ್ದೇಶನಕ್ಕೆ ಹೆಸರಾದ ಅನುರಾಗ್ ಬಾಸು ಈ ರೊಮ್ಯಾಂಟಿಕ್ ಹಾಗೂ ಸಂಗೀತಮಯ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅನುರಾಗ್ ಬಸು ಅವರು ಈ ಹಿಂದೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅನುಭವವುಳ್ಳ ನಿರ್ದೇಶಕರಾಗಿದ್ದಾರೆ.

ಈ ಬೃಹತ್ ಪ್ರಾಜೆಕ್ಟ್ ಅನ್ನು ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಪ್ರೀತಮ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಕಥಾಹಂದರ ಹಾಗೂ ಮಧುರ ಸಂಗೀತವು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರಾಜೆಕ್ಟ್ ಅನ್ನು ಮೊದಲು 2025ರ ಫೆಬ್ರವರಿಯಲ್ಲಿ ಒಂದು ವಿಶೇಷ ಪ್ರಮೋಷನಲ್ ವಿಡಿಯೋ ಮೂಲಕ ಘೋಷಿಸಲಾಗಿತ್ತು. ಆರಂಭದಲ್ಲಿ ಈ ಚಿತ್ರವನ್ನು 2025ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಮಧ್ಯದಲ್ಲಿ ಅನಿವಾರ್ಯ ಕಾರಣಗಳಿಂದ ಸಿನಿಮಾದ ಚಿತ್ರೀಕರಣವೇ ನಿಂತು ಹೋಗಿತ್ತು. ಇದೀಗ ಅಂತಿಮವಾಗಿ 2027ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More