Cannes Film Festival: ಏಮಿ ಜಾಕ್ಸನ್ ಅವರ ರಾಯಲ್ ರೆಡ್ ಕಾರ್ಪೆಟ್ ಲುಕ್ ನೋಡಿ ನೀವು ಬೆರಗಾಗುತ್ತೀರಾ!
Amy Jackson: ಎಎಫ್‌ಪಿ ಪ್ರಕಾರ, ರೆಡ್ ಕಾರ್ಪೆಟ್ನ ನಂತರ, ಏಮಿ ಹಂಗೇರಿಯನ್ ಚಲನಚಿತ್ರವಾದ ‘ಎ ಫೆಲೆಸೆಜೆಮ್ ಟೋರ್ಟೆನೆಟ್’ (ದಿ ಸ್ಟೋರಿ ಆಫ್ ಮೈ ವೈಫ್) ಪ್ರದರ್ಶನಕ್ಕೆ ಏಮಿ ಜಾಕ್ಸನ್ ಹಾಜರಾದರು.

‘ಸಿಂಗ್ ಈಸ್ ಬ್ಲಿಂಗ್’ (Singh is Bling) ಚಿತ್ರದ ಖ್ಯಾತ ನಟಿ ಏಮಿ ಜಾಕ್ಸನ್ (Amy Jackson) ರವರು ಬುಧವಾರದಂದು 74 ನೇ ಕಾನ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ನಡೆದಿದ್ದಾರೆ. ಈ ವರ್ಷದ ಪ್ರಸಿದ್ಧ ಚಲನಚಿತ್ರೋತ್ಸವಕ್ಕೆ ಇತರ ಬಾಲಿವುಡ್ ನಟಿಯರು ಸ್ಥಾನ ಪಡೆದಿಲ್ಲವಾದರೂ, ಏಮಿ ಈ ಕಾರ್ಯಕ್ರಮಕ್ಕೆ ಹೆಚ್ಚು ಅಗತ್ಯವಿರುವ ಬಾಲಿವುಡ್ ಸ್ಟಾರ್‌ಡಸ್ಟ್ ಅನ್ನು ಸೇರಿಸಿದ್ದಾರೆ.
ಅವರ ರೆಡ್ ಕಾರ್ಪೆಟ್ಗಾಗಿ, ಏಮಿ ಜಾಕ್ಸನ್, ಅಟೆಲಿಯರ್ ಜುಹ್ರಾ ಅವರ ಸ್ಟುಡಿಯೋದಿಂದ ಆರಿಸಲ್ಪಟ್ಟ ಆಫ್- ಶೋಲ್ಡರ್ ರಾಯಲ್ ಬರ್ಗಂಡಿಯನ್ನ ಧರಿಸಿದ್ದರು. ಚೋಪಾರ್ಡ್ ಸಂಗ್ರಹದ ನೆಕ್ಲೆಸ್ನೊಂದಿಗೆ ಅವರು ಕಂಗೊಳಿಸುತ್ತಿದ್ದರು ಮತ್ತು ಈವೆಂಟ್ಗಾಗಿ ಏಮಿ ತನ್ನ ಕೂದಲನ್ನು ಪೋನಿಟೇಲ್ನಲ್ಲಿ ಕಟ್ಟದ್ದರು. ಏಮಿ ಜಾಕ್ಸನ್ ಅವರು ರೆಡ್ ಕಾರ್ಪೆಟ್ನಿಂದ ತಮ್ಮ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಇನ್ಸ್ಟಾಗ್ರಾಮ್ನಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾ, “ರೆಡ್ ಕಾರ್ಪೆಟ್ ಕ್ಷಣ.” ಎಂದು ಅದರ ಶೀರ್ಷಿಕೆಯನ್ನಾಗಿ ಹಾಕಿದರು. ಮತ್ತು ಫ್ರೆಂಚ್ ಭಾಷೆಯಲ್ಲಿ ಚೋಪಾರ್ಡ್‌ಗೆ ಧನ್ಯವಾದ ಅರ್ಪಿಸಿದರು. “ಮರ್ಸಿ ಬ್ಯೂಕೌಪ್ (ತುಂಬಾ ಧನ್ಯವಾದಗಳು) ಚೋಪಾರ್ಡ್” ಎಂದು ಅವರು ಬರೆದಿದ್ದಾರೆ.
ಎಎಫ್‌ಪಿ ಪ್ರಕಾರ, ರೆಡ್ ಕಾರ್ಪೆಟ್ನ ನಂತರ, ಏಮಿ ಹಂಗೇರಿಯನ್ ಚಲನಚಿತ್ರವಾದ ‘ಎ ಫೆಲೆಸೆಜೆಮ್ ಟೋರ್ಟೆನೆಟ್’ (ದಿ ಸ್ಟೋರಿ ಆಫ್ ಮೈ ವೈಫ್) ಪ್ರದರ್ಶನಕ್ಕೆ ಏಮಿ ಜಾಕ್ಸನ್ ಹಾಜರಾದರು.
ಅದಕ್ಕೂ ಮೊದಲು ಏಮಿ ಕೇನ್ಸ್ ಚಲನಚಿತ್ರೋತ್ಸವಕ್ಕೆ ತಯಾರಾಗುತ್ತಿರುವಾಗ ತನ್ನ ಮೇಕಪ್ರೂಮ್ ಹೇಗೆ ಕಾಣುತ್ತದೆ ಎಂಬುದರ ಒಂದು ಕಿರುನೋಟವನ್ನು ನೀಡಿದ್ದರು. ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಚಿತ್ರದಲ್ಲಿ, ಆಮಿ ಜಾಕ್ಸನ್ ಅವರು ಮೇಕಪ್ ಕಲಾವಿದರು ಕೆಲಸ ಮಾಡುವಾಗ ಕುಳಿತುಕೊಳ್ಳುವುದನ್ನು ಕಾಣಬಹುದು. ಏಮಿ ಚಿತ್ರದಲ್ಲಿ ಬಿಳಿ ಮತ್ತು ಕಪ್ಪು ಉಡುಪನ್ನು ಧರಿಸಿದ್ದಾರೆ.
ಕಾನ್ ಚಲನಚಿತ್ರೋತ್ಸವದ 74 ನೇ ಆವೃತ್ತಿಯು ಜುಲೈ 6 ರಂದು ಪೂರ್ಣಗೊಂಡಿತು. ಈ ವರ್ಷ, COVID-19 ಸಾಂಕ್ರಾಮಿಕ ರೋಗದಿಂದಾಗಿ ಕಟ್ಟುನಿಟ್ಟಿನ ನಿರ್ಬಂಧಗಳ ನಡುವೆ ರೆಡ್ ಕಾರ್ಪೆಟ್ ಅನ್ನು ನಡೆಸಲಾಯಿತು.
Published On - 1:00 pm, Fri, 16 July 21




