AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪತಿ ಮಸೂದೆಗೆ ಅನುಮೋದನೆ, ಬರಲಿವೆ ಕೆಲವು ಬದಲಾವಣೆ

Cinematography Act: ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಮಸೂದೆಯನ್ನು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.

ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪತಿ ಮಸೂದೆಗೆ ಅನುಮೋದನೆ, ಬರಲಿವೆ ಕೆಲವು ಬದಲಾವಣೆ
ಕೇಂದ್ರ ಸಚಿವ ಅನುರಾಗ್ ಠಾಕೂರ್
ಮಂಜುನಾಥ ಸಿ.
|

Updated on: Apr 20, 2023 | 7:00 AM

Share

ಸಿನಿಮಾಟೊಗ್ರಫಿ ಕಾಯ್ದೆ (Cinematography Act) ತಿದ್ದುಪತಿ ಮಸೂದೆಗೆ ಕೇಂದ್ರ ಸಂಪುಟ (Union Cabinet) ಸಭೆ ಒಪ್ಪಿಗೆ ನೀಡಿದೆ. ಸಿನಿಮಾ ಪೈರಸಿ (Piracy) ಹಾಗೂ ವಯೋಮಾನ ಆಧರಿತ ಸಿನಿಮಾ ವೀಕ್ಷಣೆ ಸೇರಿದಂತೆ ಇನ್ನೂ ಕೆಲವು ಬದಲಾವಣೆಗಳಿಗಾಗಿ ತಿದ್ದಪಡಿಯನ್ನು ಮಾಡಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಸೂದೆಯ ಅಂಗೀಕಾರವಾಗಿದ್ದು ಪೈರಸಿಯಿಂದ ಹೈರಾಣಾಗಿರುವ ಚಿತ್ರರಂಗಕ್ಕೆ ತುಸು ನೆಮ್ಮದಿಯನ್ನು ನೀಡಲಿದೆ.

ತಿದ್ದುಪಡಿ ಮಸೂದೆಯ ಪ್ರಕಾರ, ಇನ್ನು ಮುಂದೆ ಸಿನಿಮಾದ ಪೈರೆಟೆಡ್ ದೃಶ್ಯಗಳನ್ನು, ತುಣುಕುಗಳನ್ನು, ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ. ಮಾತ್ರವಲ್ಲದೆ, ಪೈರಸಿ ಮಾಡುವವರ ವಿರುದ್ಧವೂ ಕಠಿಣ ಕ್ರಮಕ್ಕೆ ಮಸೂದೆಯು ಅವಕಾಶ ನೀಡಿದೆ. ಪೈರಸಿ ಮಾಡಿದ ಅಪರಾಧಿಗೆ ನೀಡಲಾಗುತ್ತಿದ್ದ ಮೂರು ತಿಂಗಳ ಶಿಕ್ಷೆಯನ್ನು ಮೂರು ವರ್ಷಗಳಿಗೆ ಏರಿಸುವುದು ಒಳಗೊಂಡಂತೆ ಇನ್ನೂ ಕೆಲವು ಬದಲಾವಣೆಗಳು ಮಸೂದೆಯಲ್ಲಿ ಅಡಕವಾಗಿವೆ.

ಇಷ್ಟು ವರ್ಷಗಳಿಂದ ಚಾಲ್ತಿಯಲ್ಲಿದ್ದ ಸಿನಿಮಾದ ಪ್ರಮಾಣ ಪತ್ರ ವಿತರಣೆ ವ್ಯವಸ್ಥೆಯಲ್ಲಿಯೂ ಮಸೂದೆಯಿಂದಾಗಿ ಬದಲಾಗಲಿದೆ. ಯು/ಎ/ಯುಎ ಮಾದರಿಯ ಪ್ರಮಾಣ ಪತ್ರ ಈವರೆಗೆ ಚಾಲ್ತಿಯಲ್ಲಿತ್ತು, ಆದರೆ ಮಸೂದೆಯನ್ವಯ ಇನ್ನು ಮುಂದೆ ವಯೋಮಾನ ಆಧರಿತ ಪ್ರಮಾಣ ಪತ್ರ ನೀಡಲಿದೆ ಸಿಬಿಎಫ್​ಸಿ.

ಸಿಬಿಎಫ್​ಸಿ ಪ್ರಮಾಣ ಪತ್ರ ಇಲ್ಲದೆ ಸಿನಿಮಾ ಪ್ರದರ್ಶಿಸುವುದು, ಸಿಬಿಎಫ್​ಸಿ ಪ್ರಮಾಣ ಪತ್ರ ನೀಡಿದ ಬಳಿಕ ಪ್ರದರ್ಶನದ ಸಮಯದಲ್ಲಿ ಸಿನಿಮಾದ ಕಂಟೆಂಟ್​ನಲ್ಲಿ ಬದಲಾವಣೆ ಮಾಡುವುದು ಇತ್ಯಾದಿಗಳನ್ನು ತಡೆಯುವ ಕುರಿತಾದ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ:Vikrant Rona Piracy: ಸರ್ಕಾರಿ ಶಾಲೆಯಲ್ಲೇ ‘ವಿಕ್ರಾಂತ್​ ರೋಣ’ ಪೈರಸಿ; ಮಕ್ಕಳಿಗೆ ಸಿನಿಮಾ ತೋರಿಸಿದ ವಿಡಿಯೋ ವೈರಲ್​

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್, ಮಸೂದೆಯನ್ನು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು, ಈ ಮಸೂದೆ ರಚನೆಗೆ ಸಾಕಷ್ಟು ಅನುಭವಿಗಳ ಸಲಹೆಗಳನ್ನು ಪಡೆಯಲಾಗಿದೆ. ಈ ಮಸೂದೆಯು ಸಿನಿಮಾ ರಂಗದವರ ನಿರೀಕ್ಷೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ, ಯಾವುದೇ ವಿವಾದಕ್ಕೆ ಆಸ್ಪದ ಇಲ್ಲದೆ ಎಲ್ಲರೂ ಒಪ್ಪುವಂತಹಾ ತಿದ್ದಪಡಿ ಮಸೂದೆ ಇದಾಗಿದೆ ಎಂದಿದ್ದಾರೆ.

2019 ರಲ್ಲಿ ಆಗಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಆ ಬಳಿಕ ಆ ಮಸೂದೆಗೆ ಹಲವು ಬದಲಾವಣೆಗಳನ್ನು ಮಾಡಲಾಗಿ ಇದೀಗ ಹೊಸ ಮಸೂದೆಯನ್ನು ಸಂಪುಟ ಸಭೆಯು ಅಂಗೀಕರಿಸಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಸಂಸತ್​ನ ಅಂಗೀಕಾರ ಪಡೆಯಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?