AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಗೋಪಾಲ್ ವರ್ಮಾಗೆ ಹಣಕಾಸು ಸಂಕಷ್ಟ: 29 ಕೋಟಿ ಪಾವತಿಸಲು ನೋಟಿಸ್

ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಬರೋಬ್ಬರಿ 29.67 ಕೋಟಿ ರೂಪಾಯಿಗಳ ಹಣಕಾಸಿನ ವಿವಾದ ಹಾಗೂ ಕಾನೂನು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಎಕ್ಲಾಟಂಟ್ ಫಿಲ್ಮ್ಸ್ ಸಂಸ್ಥೆಯು ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿದ್ದು, ನಿರ್ಮಾಪಕರು ಹಾಗೂ ಒಟಿಟಿ ವೇದಿಕೆಗಳು ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ರಾಮ್ ಗೋಪಾಲ್ ವರ್ಮಾಗೆ ಹಣಕಾಸು ಸಂಕಷ್ಟ: 29 ಕೋಟಿ ಪಾವತಿಸಲು ನೋಟಿಸ್
ರಾಮ್ ಗೋಪಾಲ್ ವರ್ಮ
ರಾಜೇಶ್ ದುಗ್ಗುಮನೆ
|

Updated on: Oct 30, 2026 | 12:10 PM

Share

ಮುಖ್ಯಾಂಶಗಳು

  • 29.67 ಕೋಟಿ ರೂ. ಹಣಕಾಸಿನ ವಿವಾದದಲ್ಲಿ ಸಿಲುಕಿದ ಖ್ಯಾತ ನಿರ್ದೇಶಕ RGV
  • ನಿರ್ಮಾಣ ಸಂಸ್ಥೆಯಿಂದ ಲೀಗಲ್ ನೋಟಿಸ್
  • ಎನ್‌ಒಸಿ ಇಲ್ಲದೆ ಒಡಂಬಡಿಕೆ ಬೇಡ ಎಂದು ಎಚ್ಚರಿಕೆ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ಈಗ ಅವರು ಬೃಹತ್ ಹಣಕಾಸಿನ ವಿವಾದ ಹಾಗೂ ಕಾನೂನು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಎಕ್ಲಾಟಂಟ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆಯು ಬಾಕಿ ಹಣವನ್ನು ಮರುಪಾವತಿಸುವಂತೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ಬೆಳವಣಿಗೆ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಈ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆಯು ರಾಮ್ ಗೋಪಾಲ್ ವರ್ಮಾ ಅವರಿಗೆ ಅಕ್ಟೋಬರ್ 15ರಂದೇ ಕಾನೂನು ನೋಟಿಸ್ ಕಳುಹಿಸಿತ್ತು. ಒಟ್ಟು 29,67,64,000 ರೂಪಾಯಿಗಳ ಬಾಕಿ ಪಾವತಿಸುವಂತೆ ಎಕ್ಲಾಟಂಟ್ ಫಿಲ್ಮ್ಸ್ ಆಗ್ರಹಿಸಿದೆ. ಈ ಒಟ್ಟು ಮೊತ್ತದಲ್ಲಿ 11,38,92,000 ರೂಪಾಯಿ ಬಡ್ಡಿ ಕೂಡ ಸೇರಿದೆ.

2010ರ ಏಪ್ರಿಲ್ 10ರಂದು ಒಪ್ಪಂದ ನಡೆದಿತ್ತು. ಈ ಒಪ್ಪಂದದ ಹಿನ್ನೆಲೆಯಲ್ಲಿ ವಿವಾದ ಹುಟ್ಟಿಕೊಂಡಿದೆ. ಒಪ್ಪಂದ ಏನು ಎಂಬುದನ್ನು ಸಂಸ್ಥೆ ತಿಳಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರ ಏಪ್ರಿಲ್ 17ರಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿತ್ತು. ಈಗ ಅಕ್ಟೋಬರ್ 30ರೊಳಗೆ ಸಂಪೂರ್ಣ ಬಾಕಿ ಹಣವನ್ನು ತೀರಿಸುವಂತೆ ಆರ್​​ಜಿವಿಗೆ ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ಹಣ ಪಾವತಿಸಲು ವಿಫಲವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಎಚ್ಚರಿಸಿದೆ. ರಾಮ್ ಗೋಪಾಲ್ ವರ್ಮಾ ಅವರ ಮುಂಬರುವ ಸಿನಿಮಾಗಳು ಹಾಗೂ ಒಪ್ಪಂದದಡಿ ಬರುವ ಪ್ರಾಜೆಕ್ಟ್‌ಗಳ ಹಕ್ಕುಗಳ ಮೇಲೆ ತನ್ನ ಹಿಡಿತ ಸಾಧಿಸುವುದಾಗಿ ತಿಳಿಸಿದೆ. ಬಾಕಿ ಹಣ ಸಂಪೂರ್ಣವಾಗಿ ಪಾವತಿಯಾಗುವವರೆಗೆ ಯಾವುದೇ ಒಪ್ಪಿಗೆ ಇಲ್ಲದೆ ಮುಂದುವರಿಯದಂತೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ‘ಧುರಂಧರ್’ ಹೊಗಳುವ ನೆಪದಲ್ಲಿ ‘ಟಾಕ್ಸಿಕ್’ ತೆಗಳಿದ್ರಾ ರಾಮ್ ಗೋಪಾಲ್ ವರ್ಮಾ?

ನಿರ್ಮಾಪಕರು, ವಿತರಕರು ಹಾಗೂ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಯಾವುದೇ ವ್ಯವಹಾರ ನಡೆಸುವ ಮುನ್ನ ಎಚ್ಚರಿಕೆ ವಹಿಸಬೇಕು. ನಿರ್ಮಾಣ ಸಂಸ್ಥೆಯ ಪೂರ್ವಾನುಮತಿ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯದೆ ವ್ಯವಹರಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More