ಮರಳಿ ಬಂದ ‘ಐರನ್ ಮ್ಯಾನ್’ ಈ ಬಾರಿ ಮುಖವಾಡ ಬದಲು
11 ವರ್ಷಗಳ ಐರನ್ ಮ್ಯಾನ್ ಪಾತ್ರದ ಮೂಲಕ ರಂಜಿಸಿದ್ದ ರಾಬರ್ಟ್ ಡೌನಿ ಜೂನಿಯರ್ ಇದೀಗ ಮತ್ತೆ ಬಂದಿದ್ದಾರೆ ಆದರೆ ಐರನ್ ಮ್ಯಾನ್ ಮುಖವಾಡ ಧರಿಸಿ ಅಲ್ಲ, ಬದಲಿಗೆ ಬೇರೆ ಮುಖವಾಡ ಧರಿಸಿ.
ಹಾಲಿವುಡ್ನ ಸೂಪರ್ ಹೀರೋ ಯೂನಿವರ್ಸ್ನಲ್ಲಿ ಸೂಪರ್ ಮ್ಯಾನ್, ಥಾರ್, ಹಲ್ಕ್, ಡೆಡ್ಪೂಲ್, ವೋಲ್ವರಿನ್ ಇನ್ನೂ ಹಲವರು ಅಗೋಚರ ಶಕ್ತಿಗಳಿಂದ ಅಥವಾ ಯಾವುದಾದರೂ ವೈಜ್ಞಾನಿಕ ಪ್ರಯೋಗದಿಂದ ಶಕ್ತಿ ಪಡೆದು ಸೂಪರ್ ಹೀರೋ ಆದವರು ಆದರೆ ಐರನ್ ಮ್ಯಾನ್ ಮಾತ್ರ ತನ್ನ ಬುದ್ಧಿ ಶಕ್ತಿ, ಶ್ರಮ ಬಳಸಿ ಸೂಪರ್ ಹೀರೋ ಆದವ. ಐರನ್ ಮ್ಯಾನ್ ಮೇಲೆ ಜನರಿಗೆ ವಿಶೇಷ ಪ್ರೀತಿ. ಸೂಪರ್ ಮ್ಯಾನ್ಗಿಂತಲೂ ಹೆಚ್ಚು ಅಭಿಮಾನಿಗಳಿರುವ ಸೂಪರ್ ಹೀರೋ ಐರನ್ ಮ್ಯಾನ್. ಇದಕ್ಕೆ ಮುಖ್ಯ ಕಾರಣ ಐರನ್ ಮ್ಯಾನ್ ಪಾತ್ರದಲ್ಲಿ ನಟಿಸುತ್ತ ಬಂದಿರುವ ನಟ ರಾಬರ್ಟ್ ಡೌನಿ ಜೂನಿಯರ್. ಆದರೆ ಕೆಲ ವರ್ಷಗಳ ಹಿಂದೆ ಐರನ್ ಮ್ಯಾನ್ ಪಾತ್ರವನ್ನು ಎಂಸಿಯು ಅಂತ್ಯಗೊಳಿಸಿತ್ತು. ರಾಬರ್ಟ್ ಡೌನಿ ಜೂನಿಯರ್ ಸಹ ತಾವಿನ್ನು ಐರನ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೆ ಈಗ ‘ಐರನ್ ಮ್ಯಾನ್’ ಮರಳಿ ಬಂದಿದ್ದಾನೆ ಆದರೆ ಬೇರೆ ಮುಖವಾಡದ ಮೂಲಕ.
‘ಐರನ್ ಮ್ಯಾನ್’ ಪಾತ್ರವನ್ನು ಅಂತ್ಯಗೊಳಿಸಿದ ಬಳಿಕ ಇನ್ನು ಮುಂದೆ ರಾಬರ್ಟ್ ಡೌನಿ ಜೂನಿಯರ್ ಎಂಸಿಯುಗೆ ಬರುವುದೇ ಇಲ್ಲವೇನೋ ಅಂದುಕೊಂಡಿದ್ದರು. ಆದರೆ ಇದೀಗ ರಾಬರ್ಟ್ ಡೌನಿ ಜೂನಿಯರ್ ಮತ್ತೆ ಬಂದಿದ್ದಾರೆ ಅದೂ ಈ ಹಿಂದಿನ ರೀತಿ ಮುಖವಾಡ ತೊಟ್ಟು ಬಂದಿದ್ದಾರೆ ಆದರೆ ಅದು ಐರನ್ ಮ್ಯಾನ್ ಮುಖವಾಡ ಅಥವಾ ಸೂಟ್ ಅಲ್ಲ ಬದಲಿಗೆ ಮುಖವಾಡ ತೊಟ್ಟು.
ಎಂಸಿಯು ‘ಅವೇಂಜರ್ಸ್: ಡೂಮ್ಸ್ಡೇ’ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾ ಜನಪ್ರಿಯ ಕಾಮಿಕ್ ವಿಲನ್ ಡೂಮ್ಸ್ಡೇ ಕುರಿತಾಗಿ ಇದೆ. ಈ ಸಿನಿಮಾದಲ್ಲಿ ವಿಲನ್ ಡೂಮ್ಸ್ ಡೇ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟಿಸಲಿದ್ದಾರೆ. ನಿನ್ನೆಯಷ್ಟೆ ಇದರ ಘೋಷಣೆ ಆಗಿದೆ ಅದೂ ಆಶ್ಚರ್ಯಕರ ರೀತಿಯಲ್ಲಿ. ‘ಅವೇಂಜರ್ಸ್’ ಸಿನಿಮಾದ ಘೋಷಣೆಗೆ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹಲವರು ಡೂಮ್ಸ್ಡೇ ರೀತಿಯ ಮುಸುಕು ತೊಟ್ಟು ನಿಂತಿದ್ದರು. ಅದರಲ್ಲಿ ರಾಬರ್ಟ್ ಡೌನಿ ಜೂನಿಯರ್ ಸಹ ಇದ್ದರು. ಒಮ್ಮೆಲೆ ರಾಬರ್ಟ್ ಡೌನಿ ಜೂನಿಯರ್ ತಮ್ಮ ಮುಖವಾಡ ತೆರೆದಾಗ ಎದುರಿದ್ದ ಜನರಿಗೆ ಆಶ್ಚರ್ಯವಾಯಿತು. ಜನ ಖುಷಿಯಲ್ಲಿ ಕೂಗಾಡಿದರು. ‘ನನಗೆ ಸಂಕೀರ್ಣವಾಗಿರುವ ಪಾತ್ರಗಳಲ್ಲಿ ನಟಿಸುವುದು ಇಷ್ಟ’ ಎಂದು ರಾಬರ್ಟ್ ಹೇಳಿದ್ದಾರೆ.
ಇದನ್ನೂ ಓದಿ:Deadpool & wolverine: ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಈ ಹಾಲಿವುಡ್ ಸಿನಿಮಾ
ರಾಬರ್ಟ್ ನಿರ್ವಹಿಸುತ್ತಿರುವ ಡೂಮ್ಸ್ಡೇ ಪಾತ್ರ ತುಸು ಐರನ್ ಮ್ಯಾನ್ ರೀತಿಯಲ್ಲಿಯೇ ಇದೆ. ಡೂಮ್ಸ್ಡೇ ಸಹ ಅತ್ಯುತ್ತಮ ವಿಜ್ಞಾನಿ, ಅನ್ವೇಷಕ ಆದರೆ ವಿಲನ್. ವಿಜ್ಞಾನದ ಜೊತೆಗೆ ವಾಮಾಚಾರದಲ್ಲಿಯೂ ಪ್ರಯೋಗ ಮಾಡುವ ಡೂಮ್ಸ್ಡೇ ಅವೇಂಜರ್ಸ್ಗೆ ಠಕ್ಕರ್ ಕೊಡಲಿದ್ದಾನೆ. ಈ ಮಹಾ ವಿಲನ್ ಅನ್ನು ಅವೇಂಜರ್ಸ್ ಹೇಗೆ ಸೋಲಿಸುತ್ತಾರೆ ಎಂಬುದು ಪ್ರಶ್ನೆ. ಅವೇಂಜರ್ಸ್ ಬಳಿ ಈಗ ಐರನ್ ಮ್ಯಾನ್ ಮತ್ತು ಕ್ಯಾಪ್ಟನ್ ಅಮೆರಿಕ ಹಾಗೂ ಇನ್ನೂ ಕೆಲವು ಸೂಪರ್ ಹೀರೋಗಳು ಇಲ್ಲ.
11 ವರ್ಷಗಳಲ್ಲಿ ರಾಬರ್ಟ್ ಡೌನಿ ಜೂನಿಯರ್ ‘ಐರನ್ ಮ್ಯಾನ್’, ‘ಐರನ್ ಮ್ಯಾನ್ 2’, ‘ಐರನ್ ಮ್ಯಾನ್ 3’, ನಾಲ್ಕು ಅವೇಂಜರ್ಸ್ ಸಿನಿಮಾ, ಸ್ಪೈಡರ್ ಮ್ಯಾನ್, ಇಂಕ್ಕ್ರೆಡಿಬಲ್ ಹಲ್ಕ್, ಕ್ಯಾಪ್ಟನ್ ಅಮೆರಿಕ ಸಿವಿಲ್ ವಾರ್’ ಒಟ್ಟು 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲ ಸಿನಿಮಾದಲ್ಲಿಯೂ ಐರನ್ ಮ್ಯಾನ್ ಆಗಿಯೇ ನಟಿಸಿದ್ದಾರೆ. ‘ಅವೇಂಜರ್ಸ್ ಎಂಡ್ಗೇಮ್’ ಸಿನಿಮಾನಲ್ಲಿ ಐರನ್ ಮ್ಯಾನ್ ಪಾತ್ರ ಸತ್ತು ಹೋಗುವ ಮೂಲಕ ರಾಬರ್ಟ್ ಡೌನಿ ಜೂನಿಯರ್, ಎಂಸಿಯು ಪಯಣ ಮುಗಿದಿತ್ತು. ಆದರೆ ಈಗ ಡೂಮ್ಸ್ಡೇ ಪಾತ್ರದ ಮೂಲಕ ರಾಬರ್ಟ್ ಮತ್ತೆ ಬಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ