Deadpool & wolverine: ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಈ ಹಾಲಿವುಡ್ ಸಿನಿಮಾ

Deadpool & Wolverine: ಹಾಲಿವುಡ್ ಸಿನಿಮಾ ಡೆಡ್​ಪೂಲ್ ಮತ್ತು ವೋಲ್ವರಿನ್ ಭಾರತದಲ್ಲಿ ಎರಡು ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಸಿನಿಮಾ ಭಾರಿ ಕಲೆಕ್ಷನ್ ಮಾಡುತ್ತಿದೆ. ಕೆಲವು ಸ್ಟಾರ್ ನಟರ ಹಿಂದಿ ಸಿನಿಮಾಗಳಿಗಿಂತಲೂ ದೊಡ್ಡ ಕಲೆಕ್ಷನ್ ಮಾಡುತ್ತಿದೆ.

Deadpool & wolverine: ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ ಈ ಹಾಲಿವುಡ್ ಸಿನಿಮಾ
Follow us
|

Updated on: Jul 28, 2024 | 8:25 AM

ಭಾರತ ಸಿನಿಮಾ ಮಾರುಕಟ್ಟೆಯ ಆಳ ಮತ್ತು ವಿಸ್ತಾರ ವಿದೇಶಿ ಸಿನಿಮಾಗಳನ್ನು ಸೆಳೆಯುತ್ತಿವೆ. ಕೆಲವು ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ನೂರಾರು ಕೋಟಿ ಹಣ ಗಳಿಸಿದ್ದೂ ಸಹ ಇದೆ. ಭಾರತದ ಮಾರುಕಟ್ಟೆಯ ಶಕ್ತಿ ಅರಿತಿರುವ ವಿದೇಶಿ ಸಿನಿಮಾ ನಿರ್ಮಾಣ ಸಂಸ್ಥೆಗಳು ಇದೀಗ ತಮ್ಮ ಸಿನಿಮಾಗಳನ್ನು ಭಾರತದಲ್ಲಿ ಭರ್ಜರಿ ಪ್ರಚಾರ ಮತ್ತು ಅದ್ಧೂರಿ ಬಿಡುಗಡೆಗೆ ಮುಂದಾಗಿವೆ. ಇದೀಗ ಮಾರ್ವೆಲ್​ನ ‘ಡೆಡ್​ಪೂಲ್ ಆಂಡ್ ವೋಲ್ವವರಿನ್’ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿದ್ದು, ಇತ್ತೀಚೆಗಿನ ಕೆಲವು ಬಾಲಿವುಡ್ ಸಿನಿಮಾಗಳೇ ಮಾಡದಷ್ಟೆ ಕಲೆಕ್ಷನ್ ಮಾಡುತ್ತಿದೆ.

‘ಡೆಡ್​ಪೂಲ್ ಆಂಡ್ ವೋಲ್ವರಿನ್’ ಸಿನಿಮಾ ಜುಲೈ 26 ಕ್ಕೆ ಭಾರತದಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ಬಾಕ್ಸ್​ ಆಫೀಸ್​ನಲ್ಲಿ 21 ಕೋಟಿ ಹಣ ಗಳಿಸಿದ ಈ ಸಿನಿಮಾ ಎರಡನೇ ದಿನ ಅಂದರೆ ಶನಿವಾರದಂದು ಈ ಸಿನಿಮಾ ತುಸುವಷ್ಟೆ ಕಲೆಕ್ಷನ್ ಹೆಚ್ಚಿಸಿಕೊಂಡು 23 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಅಲ್ಲಿಗೆ ಸಿನಿಮಾದ ಒಟ್ಟು ಕಲೆಕ್ಷನ್ 44 ಕೋಟಿ ರೂಪಾಯಿಗಳಾಗಿದೆ. ಭಾನುವಾರದಂದು ಕಲೆಕ್ಷನ್ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದ್ದು, ಭಾನುವಾರ ಒಂದೇ ದಿನ ಸುಮಾರು 30 ರಿಂದ 35 ಕೋಟಿಯೂ ಹೆಚ್ಚು ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

ಇದನ್ನೂ ಓದಿ:ಕನ್ನಡದಲ್ಲಿಲ್ಲ ‘ಡೆಡ್​ಪೂಲ್ v/s ವೋಲ್ವೊರಿನ್’ ಪ್ರದರ್ಶಕರ ಆಕ್ರೋಶ

‘ಡೆಡ್​ಪೂಲ್ ಮತ್ತು ವೋಲ್ವರಿನ್’ ಸಿನಿಮಾ ಭಾರತದಲ್ಲಿ ಮೊದಲ ವಾರವೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ವಿದೇಶಿ ಸಿನಿಮಾಗಳು ಭಾರತದಲ್ಲಿ ನೂರು ಕೋಟಿ ಗಳಿಸಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ಸಿನಿಮಾಗಳು ಭಾರತದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳ ಕಲೆಕ್ಷನ್ ಮಾಡಿದೆ. ‘ಸ್ಪೈಡರ್ ಮ್ಯಾನ್: ಫಾರ್ ಫರ್ ಹೋಮ್’, ‘ಅವೇಂಜರ್ಸ್: ಎಂಡ್ ಗೇಮ್’ ಇನ್ನೂ ಹಲವು ಸಿನಿಮಾಗಳು ಭಾರತದಲ್ಲಿ ದೊಡ್ಡ ಸಂಖ್ಯೆಯ ಕಲೆಕ್ಷನ್ ಮಾಡಿವೆ. ಇದೀಗ ಅದೇ ಪಟ್ಟಿಗೆ ‘ಡೆಡ್​ಪೂಲ್ ಮತ್ತು ವೋಲ್ವರಿನ್’ ಸಿನಿಮಾ ಸೇರಲು ಮುಂದಾಗಿದೆ.

‘ಡೆಡ್​ಪೂಲ್ ಆಂಡ್ ವೋಲ್ವೊರಿನ್’ ಸಿನಿಮಾ ಮೊದಲ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ಮೂರು ಸಾವಿರ ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ. ಈ ಸಿನಿಮಾ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸುವ ವಿಶ್ವಾಸವನ್ನು ಬಾಕ್ಸ್ ಆಫೀಸ್ ವಿಮರ್ಶಕರು ಅಂದಾಜು ಮಾಡಿದ್ದಾರೆ. ಡೆಡ್​ಪೂಲ್ ಮತ್ತು ವೋಲ್ವೊರಿನ್ ಎರಡು ಬೇರೆ-ಬೇರೆ ಯೂನಿವರ್ಸ್​ನ ಪಾತ್ರಗಳು ಆದರೆ ಮಾರ್ವೆಲ್ ಅವರೆಡನ್ನೂ ಒಂದೇ ಕತೆಗೆ ತಂದು ಸಿನಿಮಾ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು