ಅರಸನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದ ಗುಲಾಮ, ‘ಗ್ಲೇಡಿಯೇಟರ್ 2’ ಟ್ರೈಲರ್ ಬಿಡುಗಡೆ

2000 ರಲ್ಲಿ ಬಿಡುಗಡೆ ಆಗಿದ್ದ ‘ಗ್ಲೇಡಿಯೇಟರ್’ ಸಿನಿಮಾ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಸಾಲಿಗೆ ಸೇರಿಹೋಗಿದೆ. ಇದೀಗ 24 ವರ್ಷಗಳ ಬಳಿಕ ಅದೇ ನಿರ್ದೇಶಕ ‘ಗ್ಲೇಡಿಯೇಟರ್ 2’ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಅರಸನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದ ಗುಲಾಮ, ‘ಗ್ಲೇಡಿಯೇಟರ್ 2’ ಟ್ರೈಲರ್ ಬಿಡುಗಡೆ
ಅರಸನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದ ಗುಲಾಮ, ‘ಗ್ಲೇಡಿಯೇಟರ್ 2’ ಟ್ರೈಲರ್ ಬಿಡುಗಡೆ
Follow us
|

Updated on: Jul 10, 2024 | 12:11 PM

‘ಮೈ ನೇಮ್ ಈಸ್ ಮ್ಯಾಕ್ಸಿಮಸ್ ಡೆಸಿಮಸ್ ಮೆರಿಡಿಯಸ್’ ಸಿನಿಮಾ ಪ್ರೇಮಿಗಳು ಈ ಡೈಲಾಗ್ ಅನ್ನು ಮರೆಯಲು ಸಾಧ್ಯವಿಲ್ಲ. ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಒಂದು ಎನಿಸಿಕೊಂಡಿರುವ ‘ಗ್ಲೇಡಿಯೇಟರ್’ ಸಿನಿಮಾದ ನಾಯಕ ಮ್ಯಾಕ್ಸಿಮಸ್ ಹೇಳುವ ಸಂಭಾಷಣೆ ಇದು. ‘ಗ್ಲೇಡಿಯೇಟರ್’ ಗುಲಾಮನೊಬ್ಬ ರೋಮ್ ಅಂಥಹಾ ಭವ್ಯ ಸಾಮ್ರಾಜ್ಯದ ಅರಸನ ಮೇಲೆ ದ್ವೇಷ ತೀರಿಸಿಕೊಳ್ಳುವ ಕತೆ ಹೊಂದಿತ್ತು. 2000 ದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾಕ್ಕೆ ಬರೋಬ್ಬರಿ ಐದು ಆಸ್ಕರ್​ಗಳು ಲಭಿಸಿದ್ದವು. ಇದೀಗ ಈ ಸಿನಿಮಾದ ಎರಡನೇ ಭಾಗ ಬರುತ್ತಿದೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

2000 ದಲ್ಲಿ ಬಿಡುಗಡೆ ಆಗಿದ್ದ ‘ಗ್ಲೇಡಿಯೇಟರ್’ ಸಿನಿಮಾ ನಿರ್ದೇಶಿಸಿದ್ದ ರಿಡ್ಲಿ ಸ್ಕಾಟ್ ಅವರೇ ‘ಗ್ಲೇಡಿಯೇಟರ್ 2’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೊಸ ‘ಗ್ಲೇಡಿಯೇಟರ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ಪಾಲ್ ಮೆಸ್ಕಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದಿನ ಸಿನಿಮಾದಲ್ಲಿ ಜಾಕ್ವೀನ್ ಫೀನಿಕ್ಸ್ ಕೊಮೋಡಸ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಆದರೆ ಈ ಬಾರಿ ಆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದಂತಿಲ್ಲ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಮೊದಲ ಸಿನಿಮಾದ ನಾಯಕ ಪಾತ್ರವಾಗಿದ್ದ ಮ್ಯಾಕ್ಸಿಮಸ್ ಡೆಸಿಮಸ್ ಮೆರಿಡಿಯಸ್ ನ ಅಡಿಯಲ್ಲಿ ಕೆಲಸ ಮಾಡಿದ್ದ ಸೇನಾ ನಾಯಕ ಮಾರ್ಕಸ್ ಅಕೇಶಿಯಸ್ ಹೊಸ ಗ್ಲೇಡಿಯೇಟರ್​ನಲ್ಲಿ ವಿಲನ್. ಈ ಪಾತ್ರವನ್ನು ಜನಪ್ರಿಯ ನಟ ಪೆಡ್ರೋ ಪಾಸ್ಕಲ್ ನಟಿಸಿದ್ದಾರೆ. ಪವರ್ ಬ್ರೋಕರ್ ಅಥವಾ ಗ್ಲೇಡಿಯೇಟರ್ ಮಾರಾಟಗಾರನ ಪಾತ್ರದಲ್ಲಿ ಅತ್ಯುತ್ತಮ ನಟ ಡೆಂಜಾಲ್ ವಾಷಿಂಗ್ಟನ್ ನಟಿಸಿದ್ದಾರೆ. ಭರ್ಜರಿ ಆಕ್ಷನ್ ದೃಶ್ಯಗಳ ಜೊತೆಗೆ ರಾಜಕೀಯ, ಕ್ರಾಂತಿ ಎಲ್ಲವೂ ‘ಗ್ಲೇಡಿಯೇಟರ್ 2’ ಸಿನಿಮಾದಲ್ಲಿ ಬೆರೆತಿರುವುದು ಈಗ ಬಿಡುಗಡೆ ಆಗಿರುವ ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ಗಾಗಿ ಕೆಲಸ ಮಾಡಲಿದೆ ಹಾಲಿವುಡ್ ಸಂಸ್ಥೆ

ಟ್ರೈಲರ್​ನಲ್ಲಿ ಮ್ಯಾಕ್ಸಿಮಸ್ ಡೆಸಿಮಸ್ ಮೆರಿಡಿಯಸ್ ನ ಉಲ್ಲೇಖವೂ ಸಾಕಷ್ಟು ಕಡೆ ಇದೆ. ಮ್ಯಾಕ್ಸಿಮಸ್​ನ ಕತ್ತಿ, ಆತನ ಯುದ್ಧ ಉಡುಗೆಗಳನ್ನು ನಾಯಕ ತೊಟ್ಟು ಅರಸನ ವಿರುದ್ಧ ಕ್ರಾಂತಿ ಆರಂಭಿಸುತ್ತಾನೆ. ಮ್ಯಾಕ್ಸಿಮಸ್​ನ ಉಂಗುರವನ್ನೂ ನಾಯಕ ತೊಟ್ಟುಕೊಳ್ಳುತ್ತಾನೆ. ಈ ರೀತಿಯ ಇನ್ನೂ ಕೆಲವು ದೃಶ್ಯಗಳಿವೆ. ಈಗ ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ಪವರ್ ಬ್ರೋಕರ್ ಡೆಂಜಲ್ ವಾಷಿಂಗ್ಟನ್ ಹಾಗೂ ರೋಮನ್ ಸೈನ್ಯದ ಜನರಲ್ ಮಾರ್ಕಸ್ ಅಕೇಶಿಯಸ್ (ಪೆಡ್ರೊ ಪಾಸ್ಕಲ್) ಪಾತ್ರಗಳು ಗಮನ ಸೆಳೆಯುತ್ತಿವೆ. ಪ್ಯಾರಾಮೌಂಟ್ ಪಿಕ್ಚರ್ಸ್​ನವರು ಸಿನಿಮಾ ನಿರ್ಮಾಣ ಮಾಡಿದ್ದು ಸಿನಿಮಾ ನವೆಂಬರ್ 22 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪರಿಷತ್ ನಲ್ಲಿ ಸಿದ್ದರಾಮಯ್ಯ ಮತ್ತು ಬೋಜೇಗೌಡ ನಡುವೆ ದೋಸ್ತಿ ಮಾತುಕತೆ!
ಪರಿಷತ್ ನಲ್ಲಿ ಸಿದ್ದರಾಮಯ್ಯ ಮತ್ತು ಬೋಜೇಗೌಡ ನಡುವೆ ದೋಸ್ತಿ ಮಾತುಕತೆ!
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Nithya Bhavishya: ಈ ರಾಶಿಯವರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಿದೆ, ಎಚ್ಚರ
Nithya Bhavishya: ಈ ರಾಶಿಯವರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಿದೆ, ಎಚ್ಚರ