AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಳಿದಷ್ಟು ಸಂಬಳ ಕೊಟ್ಟು ಜಾನ್ವಿ ಕಪೂರ್ ಜೇಬು ತುಂಬಿಸಿದ ಟಾಲಿವುಡ್ ನಿರ್ಮಾಪಕರು

ಶ್ರೀದೇವಿ ಮಗಳು ಜಾನ್ವಿ ಕಪೂರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆ ಕೂಡ ಜಾಸ್ತಿ ಆಗುತ್ತಿದೆ. ಪೆದ್ದಿ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾಗಾಗಿ ಅವರು ಪಡೆದಿರುವ ಬಹುಕೋಟಿ ರೂಪಾಯಿ ಸಂಭಾವನೆಯ ವಿಷಯವೇ ಈಗ ಟಾಕ್​ ಆಫ್​ ದಿ ಟೌನ್ ಆಗಿದೆ.

ಕೇಳಿದಷ್ಟು ಸಂಬಳ ಕೊಟ್ಟು ಜಾನ್ವಿ ಕಪೂರ್ ಜೇಬು ತುಂಬಿಸಿದ ಟಾಲಿವುಡ್ ನಿರ್ಮಾಪಕರು
Janhvi Kapoor
ಮದನ್​ ಕುಮಾರ್​
|

Updated on: Jul 20, 2025 | 8:48 AM

Share

ನಟಿ ಜಾನ್ವಿ ಕಪೂರ್ (Janhvi Kapoor) ಅವರು ಈಗ ಕೇವಲ ಬಾಲಿವುಡ್ ಹೀರೋಯಿನ್ ಆಗಿ ಉಳಿದುಕೊಂಡಿಲ್ಲ. ದಕ್ಷಿಣ ಭಾರತದಲ್ಲಿ ಕೂಡ ಅವರಿಗೆ ಬೇಡಿಕೆ ಇದೆ. ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅವರು ಚಿತ್ರರಂಗ ಪ್ರವೇಶಿಸುವುದು ಸುಲಭ ಆಯಿತು ಎಂಬುದು ನಿಜ. ಈಗ ಅವರು ಬಹುಬೇಡಿಕೆಯ ನಟಿ ಕೂಡ ಆಗಿದ್ದಾರೆ. ಹಿಂದಿ ಮಾತ್ರವಲ್ಲದೇ ಟಾಲಿವುಡ್ (Tollywood) ಸ್ಟಾರ್ ಹೀರೋಗಳ ಚಿತ್ರಗಳಿಗೂ ಅವರು ನಾಯಕಿ ಆಗುತ್ತಿದ್ದಾರೆ. ಬಹುಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ‘ಪೆದ್ದಿ’ ಸಿನಿಮಾಗೆ ಜಾನ್ವಿ ಕಪೂರ್ ಪಡೆಯುತ್ತಿರುವ ಸಂಭಾವನೆ (Janhvi Kapoor Remuneration) ಬಗ್ಗೆ ಟಾಲಿವುಡ್ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ.

ಜಾನ್ವಿ ಕಪೂರ್ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ದೇವರ’ ಸಿನಿಮಾ ಮೂಲಕ. ಆ ಸಿನಿಮಾದಲ್ಲಿ ಅವರು ಜೂನಿಯರ್ ಎನ್​ಟಿಆರ್​ ಜೊತೆ ಜೋಡಿಯಾಗಿ ನಟಿಸಿದ್ದರು. ‘ದೇವರ’ ಸಿನಿಮಾಗೆ ಜಾನ್ವಿ ಕಪೂರ್ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಎಂಬ ಮಾಹಿತಿ ಇದೆ. ಈಗ ಅವರು ಇನ್ನೂ ಒಂದು ಕೋಟಿ ರೂಪಾಯಿ ಏರಿಕೆ ಮಾಡಿಕೊಂಡಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಅವರಿಗೆ ಜಾನ್ವಿ ಕಪೂರ್ ನಾಯಕಿ ಆಗಿದ್ದಾರೆ. ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆಯೇ ಜಾನ್ವಿ ಕಪೂರ್ ಅವರು ಭರ್ಜರಿ ಸಂಭಾವನೆ ಪಡೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಈ ಸಿನಿಮಾಗೆ ಜಾನ್ವಿ ಕಪೂರ್ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ 6 ಕೋಟಿ ರೂಪಾಯಿ!

ಇದನ್ನೂ ಓದಿ
Image
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
Image
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
Image
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
Image
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

ದಿನದಿಂದ ದಿನಕ್ಕೆ ಜಾನ್ವಿ ಕಪೂರ್ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಇದೆ. ಅವರನ್ನು ದಕ್ಷಿಣದ ಸಿನಿಮಾದಲ್ಲಿ ಆಯ್ಕೆ ಮಾಡಿಕೊಂಡರೆ ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆಯಲು ಸುಲಭ ಆಗುತ್ತದೆ ಎಂಬುದು ನಿರ್ಮಾಪಕರ ಲೆಕ್ಕಾಚಾರ. ಹಾಗಾಗಿ ಕೇಳಿದಷ್ಟು ಸಂಭಾವನೆ ನೀಡಲು ಚಿತ್ರತಂಡಗಳು ಸಿದ್ಧವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಲಂಡನ್​ನಲ್ಲೂ ಜಾನ್ವಿ ಕಪೂರ್ ಹವಾ; ಹೇಗಿದೆ ನೋಡಿ ಫೋಟೋಸ್

ಜಾನ್ವಿ ಕಪೂರ್ ಅವರು ನೆಪೋಟಿಸಂ ಫಲಾನುಭವಿ ಎಂಬ ಟೀಕೆ ಇದೆ. ಹಾಗಿದ್ದರೂ ಕೂಡ ಅವರ ಜನಪ್ರಿಯತೆ ದೊಡ್ಡದಾಗುತ್ತಲೇ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಜಾನ್ವಿ ಕಪೂರ್ ಅವರನ್ನು 2.6 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಸದ್ಯ ಜಾನ್ವಿ ಅವರಿಗೆ 28 ವರ್ಷ ವಯಸ್ಸು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.