AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕಿಯ ನಿರ್ಲಕ್ಷಿಸಿದ ನಿರ್ಮಾಪಕನ ವಿರುದ್ಧ ಅಭಿಮಾನಿಗಳ ಅಸಮಾಧಾನ

ಭಾರತದಲ್ಲಿ ಸಿನಿಮಾ ರಂಗ ಅಪ್ಪಟ ಪುರುಷ ಪ್ರಧಾನ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲ ಸಿನಿಮಾಗಳ ಹೊರಗೂ ಸಹ ನಾಯಕಿಯರಿಗೆ ಅವರಿಗೆ ಸಿಗಬೇಕಾದ ಗೌರವ ನೀಡಲ್ಲ. ಇದೀಗ ಇದಕ್ಕೆ ತಾಜಾ ಉದಾಹರಣೆಯೊಂದು ದೊರೆತಿದೆ. ತಮಿಳಿನ ಖ್ಯಾತ ಸಿನಿಮಾ ನಿರ್ಮಾಪಕ ಕಲಾನಿಧಿಮಾರನ್ ಅವರು ಇದೀಗ ಇದೇ ಕಾರಣಕ್ಕೆ ಸಿನಿಮಾ ಪ್ರೇಮಿಗಳಿಂದ ಹಾಗೂ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿ ಆಗಿದ್ದಾರೆ.

ನಾಯಕಿಯ ನಿರ್ಲಕ್ಷಿಸಿದ ನಿರ್ಮಾಪಕನ ವಿರುದ್ಧ ಅಭಿಮಾನಿಗಳ ಅಸಮಾಧಾನ
Wamiqa Gabbi
ಮಂಜುನಾಥ ಸಿ.
|

Updated on:Sep 11, 2026 | 4:06 PM

Share

ಮುಖ್ಯಾಂಶಗಳು

  • ನಾಯಕಿಯ ನಿರ್ಲಕ್ಷಿಸಿದ ನಿರ್ಮಾಪಕ ಕಲಾನಿಧಿ ಮಾರನ್
  • ಕಲಾನಿಧಿ ಮಾರನ್ ಸನ್ ಪಿಕ್ಚರ್ಸ್ ಸಂಸ್ಥೆಯ ಮಾಲೀಕ
  • ಡಿಸಿ ಸಿನಿಮಾ ನಾಯಕ, ನಿರ್ದೇಶಕರಿಗೆ ಕಾರು ಕೊಟ್ಟಿದ್ದಾರೆ ಕಲಾನಿಧಿ ಮಾರನ್

ಸಿನಿಮಾ (Cinema) ನಾಯಕ ಪ್ರಧಾನವಾದುದು, ನಾಯಕಿಯರು ಕೇವಲ ನಾಮ್​ಕೆವಾಸ್ತೆ ಅಷ್ಟೆ. ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ. ತಮಿಳಿನ ‘ಡಿಸಿ’ ಸಿನಿಮಾ ಆಗಸ್ಟ್ 7 ರಂದು ಬಿಡುಗಡೆ ಆಗಿತ್ತು. ಸಿನಿಮಾ ದೊಡ್ಡ ಹಿಟ್ ಆಯ್ತು. ಅರುಣ್ ಮಟ್ಟೇಶ್ವರನ್ ನಿರ್ದೇಶನ ಮಾಡಿದ್ದ ಸಿನಿಮಾನಲ್ಲಿ ಲೋಕೇಶ್ ಕನಗರಾಜ್ ನಾಯಕ, ವಾಮಿಕಾ ಗಬ್ಬಿ ನಾಯಕಿ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಿನಿಮಾಕ್ಕೆ ಇತ್ತು. ಸಿನಿಮಾ ದೊಡ್ಡ ಹಿಟ್ ಆಗಿದೆ. ಸೀಮಿತ ಬಜೆಟ್​​ನಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಿನಿಮಾ ಸುಮಾರು 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಇದೇ ಖುಷಿಯಲ್ಲಿ ಸಿನಿಮಾದ ನಿರ್ಮಾಪಕರು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಬೆನ್ನಲ್ಲೆ ಸಿನಿಮಾ ಪ್ರೇಮಿಗಳ ಟೀಕೆಗೂ ಗುರಿ ಆಗಿದ್ದಾರೆ.

‘ಡಿಸಿ’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿತ್ತು. ಸಿನಿಮಾದ ನಿರ್ಮಾಪಕ ಕಲಾನಿಧಿ ಮಾರನ್ ಅವರು ‘ಡಿಸಿ’ ಸಿನಿಮಾದ ಕಲೆಕ್ಷನ್​​ ಇಂದ ಬಹಳ ಖುಷಿಯಾಗಿದ್ದು, ಸಿನಿಮಾದ ನಾಯಕ ಲೋಕೇಶ್ ಕನಗರಾಜ್, ಸಿನಿಮಾದ ನಿರ್ದೇಶಕ ಅರುಣ್ ಮಟ್ಟೇಶ್ವರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದ್ರನ್ ಅವರುಗಳಿಗೆ ಐಶಾರಾಮಿ ಬಿಎಂಡಬ್ಲು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರುಗಳನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಆದರೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಲಾನಿಧಿ ಮಾರನ್ ಅವರಿಗೆ ಟೀಕೆ ಸಹ ವ್ಯಕ್ತವಾಗಿದೆ.

ಸಿನಿಮಾನಲ್ಲಿ ವಾಮಿಕಾ ಗಬ್ಬಿ ನಾಯಕಿಯಾಗಿ ನಟಿಸಿದ್ದು, ಅವರ ನಟನೆಯೂ ಅದ್ಭುತವಾಗಿದೆ. ಸಿನಿಮಾನಲ್ಲಿ ಲೋಕೇಶ್ ಕನಗರಾಜ್ ನಾಯಕ, ‘ಡಿಸಿ’ ಅವರಿಗೆ ಮೊದಲ ಸಿನಿಮಾ, ವಾಮಿಕಾ ಅವರು ಅನುಭವಿ ನಟಿ, ಸಿನಿಮಾದ ಗೆಲುವಿನಲ್ಲಿ ಅವರ ನಟನೆ ಮತ್ತು ಗ್ಲಾಮರ್​​ನ ಪಾತ್ರವೂ ಸಾಕಷ್ಟಿದೆ. ಅಸಲಿಗೆ ಸಿನಿಮಾದ ಕತೆ ಕೇಂದ್ರಿತವಾಗಿರುವುದೇ ಸಿನಿಮಾದ ನಾಯಕಿಯ ಮೇಲೆ. ಆದರೆ ಉಡುಗೊರೆ ಕೊಡುವಾಗ ನಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕನನ್ನಷ್ಟೆ ಆಯ್ಕೆ ಮಾಡಿರುವ ನಿರ್ಮಾಪಕರು ನಾಯಕಿಯನ್ನು ನಿರ್ಲಕ್ಷಿಸಿದ್ದಾರೆ. ಇದು ಸಹಜವಾಗಿಯೇ ವಾಮಿಕಾ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ಸಿನಿಮಾ ಪ್ರಿಯರ ಟೀಕೆಗೂ ಕಾರಣವಾಗಿದೆ.

ಇದನ್ನೂ ಓದಿ:ವೀರಭದ್ರ ಸ್ವಾಮಿ ಭಕ್ತರಿಗಾಗಿ ವಿಶೇಷ ಸಿನಿಮಾ ‘ರುದ್ರಾಭಿಷೇಕಂ’

ಕಲಾನಿಧಿ ಮಾರನ್ ಅವರು, ತಮ್ಮ ನಿರ್ಮಾಣದ ಸಿನಿಮಾ ಹಿಟ್ ಆದರೆ ಸಿನಿಮಾದ ನಾಯಕ, ನಿರ್ದೇಶಕ ಇನ್ನಿತರರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಹಿಂದೆ ‘ಜೈಲರ್’ ಸಿನಿಮಾ ಹಿಟ್ ಆಗಿದ್ದಾಗ ಆ ಸಿನಿಮಾದ ನಾಯಕ ರಜನೀಕಾಂತ್ ಅವರಿಗೆ ಐಶಾರಾಮಿ ಕಾರು ಉಡುಗೊರೆ ಕೊಟ್ಟಿದ್ದರು, ಜೊತೆಗೆ ಸಿನಿಮಾದ ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​​ಗೆ ಕಾರು ಕೊಟ್ಟಿದ್ದರು. ಆಗಲೂ ಸಹ ಟೀಕೆ ವ್ಯಕ್ತವಾಗಿತ್ತು. ಆ ಸಿನಿಮಾನಲ್ಲಿ ವಿಲನ್ ಪಾತ್ರ ಮಾಡಿರುವ ವಿನಾಯಗನ್ ಅದ್ಭುತವಾಗಿ ನಟಿಸುವ ಮೂಲಕ ಸಿನಿಮಾಕ್ಕೆ ಕಳೆ ತಂದಿದ್ದರು. ಅವರಿಗೆ ಕಾರು ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈಗ ಸಿನಿಮಾದ ನಾಯಕಿಯನ್ನೇ ನಿರ್ಲಕ್ಷಿಸಿದ್ದಾರೆ ನಿರ್ದೇಶಕರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Fri, 11 September 26

Follow Us
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!