‘ಡಿಸಿ’ ತಂಡಕ್ಕೆ ಬಂಪರ್ ಗಿಫ್ಟ್; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್
ಬ್ಲಾಕ್ ಬಸ್ಟರ್ '#DC' ಸಿನಿಮಾದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್ ಅವರು ಚಿತ್ರತಂಡಕ್ಕೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿರ್ದೇಶಕ ಅರುಣ್ ಮಾಥೇಶ್ವರನ್, ಲೋಕೇಶ್ ಕನಕರಾಜ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಅವರಿಗೆ ಹೊಸ ಕಾರುಗಳ ಕೀಲಿಕೈ ಹಸ್ತಾಂತರಿಸಿ ಸನ್ ಪಿಕ್ಚರ್ಸ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

ಮುಖ್ಯಾಂಶಗಳು
- 'DC' ಸಿನಿಮಾದ ಭರ್ಜರಿ ಯಶಸ್ಸು
- ತಂತ್ರಜ್ಞರಿಗೆ ಸಿಕ್ಕಿತು ಐಷಾರಾಮಿ ಗಿಫ್ಟ್
- ಅರುಣ್, ಲೋಕೇಶ್, ಅನಿರುದ್ಧ್‌ಗೆ ಬಿಎಂಡಬ್ಲ್ಯು
ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ಮತ್ತೊಮ್ಮೆ ತಮ್ಮ ಉದಾರತೆ ಮೆರೆದಿದ್ದಾರೆ. ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆಗಿರುವ ‘ಡಿಸಿ‘ ಸಿನಿಮಾದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಿದ್ದಾರೆ. ಚಿತ್ರದ ನಿರ್ದೇಶಕ, ಬರಹಗಾರ ಮತ್ತು ಸಂಗೀತ ನಿರ್ದೇಶಕರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ಈ ನಡೆ ಸಿನಿರಂಗದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಈ ಮೊದಲು ‘ಜೈಲರ್’ ಸಿನಿಮಾ ಯಶಸ್ಸಿನ ಬಳಿಕ ಕಲಾನಿಧಿ ಅವರು ಇದೇ ರೀತಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಬ್ಲಾಕ್ ಬಸ್ಟರ್ ಹಿಟ್ ‘ಡಿಸಿ’ ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ನಿರ್ಮಾಣ ಸಂಸ್ಥೆ ಖುಷಿಯಾಗಿದೆ. ಚಿತ್ರಕ್ಕೆ ಶ್ರಮಿಸಿದ ಮುಖ್ಯ ತಂತ್ರಜ್ಞರಿಗೆ ಧನ್ಯವಾದ ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರ್ಮಾಪಕ ಕಲಾನಿಧಿ ಮಾರನ್ ಅವರು ಸ್ವತಃ ತಂತ್ರಜ್ಞರನ್ನು ಭೇಟಿಯಾಗಿದ್ದಾರೆ. ಅವರ ಅದ್ಭುತ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಚಿತ್ರದ ನಿರ್ದೇಶಕರಾದ ಅರುಣ್ ಮಾದೇಶ್ವರನ್ ಅವರಿಗೆ ಬ್ರ್ಯಾಂಡ್ ನ್ಯೂ ಬಿಎಂಡಬ್ಲ್ಯು ಕಾರು ಸಿಕ್ಕಿದೆ. ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿರುವ ಲೋಕೇಶ್ ಕನಕರಾಜ್ ಅವರಿಗೂ ಹೊಸ ಬಿಎಂಡಬ್ಲ್ಯು ಕಾರಿನ ಕೀ ಹಸ್ತಾಂತರಿಸಲಾಗಿದೆ. ಚಿತ್ರದ ಯಶಸ್ಸಿನಲ್ಲಿ ಇವರಿಬ್ಬರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಈ ಉಡುಗೊರೆ ಅವರ ಶ್ರಮಕ್ಕೆ ಸಿಕ್ಕ ಸೂಕ್ತ ಗೌರವವಾಗಿದೆ.
Mr. Kalanithi Maran congratulated and presented the keys to brand-new BMW cars to Arun Matheswaran, Lokesh Kanagaraj and Anirudh, for the success of Blockbuster #DC! 💥@Dir_Lokesh @ArunMatheswaran @anirudhofficial #DCMegaBlockbuster pic.twitter.com/QOgmCA6ZqI
— Sun Pictures (@sunpictures) September 10, 2026
ಚಿತ್ರಕ್ಕೆ ಅದ್ಭುತ ಸಂಗೀತ ನೀಡಿರುವ ಅನಿರುದ್ಧ್ ರವಿಚಂದರ್ ಅವರಿಗೂ ಬಿಎಂಡಬ್ಲ್ಯು ಕಾರು ನೀಡಲಾಗಿದೆ. ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಸಿನಿಮಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಕಲಾನಿಧಿ ಮಾರನ್ ಅವರು ಮೂವರಿಗೂ ಕಾರಿನ ಕೀ ನೀಡಿ ಶುಭ ಹಾರೈಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಓಟಿಟಿಗೆ ಕಾಲಿಟ್ಟ ಲೋಕೇಶ್ ಕನಕರಾಜ್ ನಟನೆಯ ‘ಡಿಸಿ’ ಸಿನಿಮಾ; ಎಲ್ಲಿ ವೀಕ್ಷಿಸಬಹುದು?
ಸನ್ ಪಿಕ್ಚರ್ಸ್ ಸಂಸ್ಥೆಯು ತಮ್ಮ ಸಿನಿಮಾಗಳು ಸೂಪರ್ ಹಿಟ್ ಆದಾಗ ಹೀಗೆ ಉಡುಗೊರೆ ನೀಡುವುದು ಹೊಸದೇನೂ ಅಲ್ಲ. ಹಿಂದೆ ಕೂಡ ಜೈಲರ್ ಮತ್ತು ವಿಕ್ರಮ್ ಸಿನಿಮಾಗಳ ಯಶಸ್ಸಿನ ವೇಳೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈಗ ‘#DC’ ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ನಿರ್ಮಾಪಕರು ಮತ್ತೆ ತಮ್ಮ ಔದಾರ್ಯ ಮೆರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




