AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಬದುಕಿನ ಕಷ್ಟ-ನಷ್ಟ ತಿಳಿಸುವ ಕನ್ನಡದ ಕಿರುಚಿತ್ರ ‘ಐಡೆಂಟಿಟಿ ಕಾರ್ಡ್’

ಸಾಕಷ್ಟು ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಒಂದು ಹೊಸ ಐಡೆಂಟಿಟಿ ಹುಡುಕಿಕೊಂಡು ಹುಟ್ಟೂರನ್ನು ತೊರೆದು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಾರೆ. ಅದೇ ವಿಷಯವನ್ನು ಇಟ್ಟುಕೊಂಡು ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರ ಸಿದ್ಧವಾಗಿದೆ. ನಿತಿನ್ ಪಿ. ನಿರ್ದೇಶನ ಮಾಡಿರುವ ಈ ಕಿರುಚಿತ್ರಕ್ಕೆ ನೋಡುಗರಿಂದ ಮೆಚ್ಚುಗೆ ಸಿಗುತ್ತಿದೆ.

ಬೆಂಗಳೂರು ಬದುಕಿನ ಕಷ್ಟ-ನಷ್ಟ ತಿಳಿಸುವ ಕನ್ನಡದ ಕಿರುಚಿತ್ರ ‘ಐಡೆಂಟಿಟಿ ಕಾರ್ಡ್’
Manju Muler, Rajeshwari YandigeriImage Credit source: Drusti Studios
ಮದನ್​ ಕುಮಾರ್​
|

Updated on: Oct 27, 2026 | 5:44 PM

Share

ಕನ್ನಡದ ಕೆಲವು ಕಿರುಚಿತ್ರಗಳು ಯೂಟ್ಯೂಬ್​ನಲ್ಲಿ ಗಮನ ಸೆಳೆಯುತ್ತಿವೆ. ಅವುಗಳ ಸಾಲಿಗೆ ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರ ಕೂಡ ಸೇರ್ಪಡೆ ಆಗಿದೆ. ‘ದೃಷ್ಟಿ ಸ್ಟುಡಿಯೋಸ್’ ಯೂಟ್ಯೂಬ್ ಮೂಲಕ ವೀಕ್ಷಣೆಗೆ ಲಭ್ಯವಾಗಿರುವ ಈ ಕಿರುಚಿತ್ರಕ್ಕೆ ನಿತಿನ್ ಪಿ. ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಬಟರ್ ಫ್ಲೈ’ ಶಾರ್ಟ್ ಫಿಲ್ಮ್ ಮಾಡಿದ್ದ ಅವರು ಈಗ ‘ಐಡೆಂಟಿಟಿ ಕಾರ್ಡ್’ ಮೂಲಕ ಲಕ್ಷಾಂತರ ಜನರಿಗೆ ಕನೆಕ್ಟ್ ಆಗುವಂತಹ ಕಥೆಯನ್ನು ತೋರಿಸಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡಿ ಹೊಸ ಜೀವನ ಕಟ್ಟಿಕೊಳ್ಳಬೇಕು ಎಂಬ ಆಸೆಯಿಂದ ಅಸಂಖ್ಯಾತ ಹಳ್ಳಿಗರು ಈ ಮಹಾನಗರಕ್ಕೆ ಬರುತ್ತಾರೆ. ಹಳ್ಳಿಯಲ್ಲಿ ಇದ್ದುಕೊಂಡು ಬೆಂಗಳೂರಿನ ಬಗ್ಗೆ ಅಂದುಕೊಳ್ಳುವುದೇ ಬೇರೆ, ಸ್ವತಃ ಬೆಂಗಳೂರಿಗೆ ಬಂದು ಇಲ್ಲಿ ಜೀವನ ಮಾಡುವಾಗ ಆಗುವ ಅನುಭವವೇ ಬೇರೆ. ಕಲ್ಪನೆಗೂ ವಾಸ್ತವಕ್ಕೂ ದೊಡ್ಡ ವ್ಯತ್ಯಾಸವಿದೆ. ಅದೇ ವಿಷಯವನ್ನು ಇಟ್ಟುಕೊಂಡು ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರ ಮಾಡಲಾಗಿದೆ.

ಈ ಕಿರುಚಿತ್ರದ ನಿರ್ದೇಶಕ ನಿತಿನ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಸಿನಿಮಾ ಮೇಲಿನ ಆಸಕ್ತಿಯಿಂದಲೇ ಅವರು ಕೂಡ ವಿಜಯಪುರ ಜಿಲ್ಲೆಯ ತಿಕೋಟಾ ಎಂಬ ಗ್ರಾಮದಿಂದ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಕಾಲಿಟ್ಟಾಗ ಅವರಿಗೆ ಆದ ಅನುಭವಗಳನ್ನೇ ಕೇಂದ್ರವಾಗಿ ಇಟ್ಟುಕೊಂಡು ಅವರು ಈಗ ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರವನ್ನು ಮಾಡಿದ್ದಾರೆ. ತಮಗೆ ಆಗಿರುವ ಅನುಭವವೇ ಲಕ್ಷಾಂತರ ಜನರಿಗೆ ಆಗಿದೆ ಎಂಬ ಕಾರಣದಿಂದ ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡರು. ಈ ಕಿರುಚಿತ್ರ ನೋಡಿ ಕಮೆಂಟ್ ಮಾಡಿದ ಅನೇಕರು ಸಹಮತ ಸೂಚಿಸುತ್ತಿದ್ದಾರೆ.

‘ಐಡೆಂಟಿಟಿ ಕಾರ್ಡ್’ ಕಿರುಚಿತ್ರ:

ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಮಂಜು ಮೂಲೆರ್ ಹಾಗೂ ಬಾಗಲಕೋಟೆ ಜಿಲ್ಲೆಯ ಕೆರೂರಿನವರಾದ ರಾಜೇಶ್ವರಿ ಯಂಡಿಗೇರಿ ಅವರು ‘ಐಡೆಂಟಿಟಿ ಕಾರ್ಡ್’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸಚಿನ್ ಬಿ.ಕೆ. ಅವರ ಛಾಯಾಗ್ರಹಣ, ಶಿವೋಂ ಅವರ ಸಂಗೀತ, ಸಿದ್ ಮತ್ತು ಸೃಜನ್ ಬೆಳ್ಳಿ ಅವರು ಸಂಕಲನದಲ್ಲಿ ಈ ಕಿರುಚಿತ್ರ ಸಿದ್ಧವಾಗಿದೆ.

ಇದನ್ನೂ ಓದಿ: ‘ನಗು ನಗುತ’: ಕಿರುಚಿತ್ರದಲ್ಲಿ ಅಭಿನಯಿಸಿದ ಖ್ಯಾತ ನಟ ವಿಜಯ್ ರಾಘವೇಂದ್ರ

‘ಗೊಲ್ಕ ಪ್ರೊಡಕ್ಷನ್’ ಮೂಲಕ ಅಂಜನ್ ನಾಗೇಂದ್ರ ಅವರು ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ‘ದೃಷ್ಟಿ ಸ್ಟುಡಿಯೋಸ್’ ಮತ್ತು ‘ಶಿವೊಂ ಸ್ಟುಡಿಯೋಸ್’ ಕೂಡ ನಿರ್ಮಾಣದಲ್ಲಿ ಜೊತೆಯಾಗಿವೆ. ‘ಯಾವಾಗಲೂ ಕುಟುಂಬ ಸಮೇತರಾಗಿ ನೋಡುವ ಚಿತ್ರ ಮಾಡಬೇಕು ಎಂಬ ಆಸೆ ನನ್ನದು. ಅದೇ ನಿಟ್ಟಿನಲ್ಲಿ ಈಗ ಐಡೆಂಟಿಟಿ ಕಾರ್ಡ್ ಚಿತ್ರ ಮಾಡಿದ್ದೇನೆ’ ಎಂದು ನಿರ್ದೇಶಕ ನಿತಿನ್ ಪಿ. ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್