AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಬರಲಿದೆ ‘ಲೈಗರ್’ ತಂಡ; ವಿಜಯ್​-ಅನನ್ಯಾ ನೋಡಲು ನಿಮಗೂ ಇದೆ ಅವಕಾಶ

‘ಗೀತ ಗೋವಿಂದಂ’ ಸೇರಿ ಅನೇಕ ಚಿತ್ರಗಳನ್ನು ಪ್ರಚಾರ ಮಾಡಲು ಕರ್ನಾಟಕಕ್ಕೆ ಬಂದಿದ್ದರು. ಈ ಕಾರಣಕ್ಕೆ ಕರ್ನಾಟಕದ ಜತೆ ಒಂದು ನಂಟಿದೆ.

ಬೆಂಗಳೂರಿಗೆ ಬರಲಿದೆ ‘ಲೈಗರ್’ ತಂಡ; ವಿಜಯ್​-ಅನನ್ಯಾ ನೋಡಲು ನಿಮಗೂ ಇದೆ ಅವಕಾಶ
ವಿಜಯ್-ಅನನ್ಯಾ
TV9 Web
| Edited By: |

Updated on:Aug 19, 2022 | 8:13 AM

Share

ವಿಜಯ್ ದೇವರಕೊಂಡ (Vijay Devarakonda) ಹಾಗೂ ಅನನ್ಯಾ ಪಾಂಡೆ (Ananya Panday) ನಟನೆಯ ‘ಲೈಗರ್’ ಸಿನಿಮಾ ತೆರೆಗೆ ಬರೋಕೆ ರೆಡಿ ಇದೆ. ಆಗಸ್ಟ್ 25ರಂದು ಚಿತ್ರ ರಿಲೀಸ್​ ಆಗುತ್ತಿದೆ. ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ನಾನಾ ನಗರಗಳಿಗೆ ತೆರಳಿ ಸಿನಿಮಾ ಪ್ರಮೋಷನ್ ಮಾಡಲಾಗುತ್ತಿದೆ. ಈಗ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಬೆಂಗಳೂರಿಗೆ ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ.

‘ಲೈಗರ್​’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕರಣ್​ ಜೋಹರ್​, ಚಾರ್ಮಿ ಕೌರ್​ ಕೂಡ ಚಿತ್ರಕ್ಕೆ ಹಣ ಹೂಡಿದ್ದಾರೆ. ಬಾಕ್ಸರ್​ ಪಾತ್ರದಲ್ಲಿ ವಿಜಯ್​ ದೇವರಕೊಂಡ ನಟಿಸಿದ್ದಾರೆ. ಬಾಕ್ಸಿಂಗ್​ ದಿಗ್ಗಜ​ ಮೈಕ್​ ಟೈಸನ್ ಕೂಡ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ಸಂಜೆ 6 ಗಂಟೆಗೆ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ಸಿನಿಮಾ ಪ್ರಚಾರ ಮಾಡಲಿದ್ದಾರೆ. ವಿಜಯ್ ದೇವರಕೊಂಡಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಮೊದಲು ‘ಗೀತ ಗೋವಿಂದಂ’ ಸೇರಿ ಅನೇಕ ಚಿತ್ರಗಳನ್ನು ಪ್ರಚಾರ ಮಾಡಲು ಕರ್ನಾಟಕಕ್ಕೆ ಬಂದಿದ್ದರು. ಈ ಕಾರಣಕ್ಕೆ ಕರ್ನಾಟಕದ ಜತೆ ಒಂದು ನಂಟಿದೆ. ಹೀಗಾಗಿ, ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಸೇರುವ ಸಾಧ್ಯತೆ ಇದೆ.

ಇದನ್ನೂ ಓದಿ
Image
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Image
Liger: ವಡೋದರದಲ್ಲಿ ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆಗೆ ಅದ್ದೂರಿ ಸ್ವಾಗತ
Image
Liger Movie: ಅಹಮದಾಬಾದ್​ನಲ್ಲಿ ವಿಜಯ್​ ದೇವರಕೊಂಡ ನೋಡಲು ಜನಸಾಗರ; ಜೋರಾಗಿದೆ ‘ಲೈಗರ್​’ ಹವಾ
Image
Sini Shetty: ಮಿಸ್​ ಇಂಡಿಯಾ ಸಿನಿ ಶೆಟ್ಟಿಗೂ ಇಷ್ಟ ವಿಜಯ್​ ದೇವರಕೊಂಡ; ಮನದ ಮಾತು ತೆರೆದಿಟ್ಟ ಸುಂದರಿ

‘ಅರ್ಜುನ್​ ರೆಡ್ಡಿ’ ಸಿನಿಮಾದ ನಂತರ ವಿಜಯ್​ ದೇವರಕೊಂಡ ಅವರು ಇಡೀ ದೇಶದಲ್ಲಿ ಫೇಮಸ್ ಆದರು. ಈಗ ಅವರು ನೇರವಾಗಿ ಹಿಂದಿ ಬಾಕ್ಸ್​ ಆಫೀಸ್​ ಮೇಲೆ ಕಣ್ಣಿಟ್ಟಿದ್ದಾರೆ. ಜೊತೆಗೆ ದಕ್ಷಿಣ ಭಾರತದಲ್ಲೂ ತಮ್ಮ ಮಾರುಕಟ್ಟೆಯನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಅವರ ಸಿನಿಮಾ ಖಂಡಿತಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತದೆ. ಅದೇ ರೀತಿ, ಕರ್ನಾಟಕದಲ್ಲೂ ಧೂಳೆಬ್ಬಿಸಲು ಅವರು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ‘ಲೈಗರ್’ ಪ್ರಮೋಷನ್ ವೇಳೆ ಕಾಫಿ ಹೀರಿದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ

‘ಲೈಗರ್​’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್​ ಈಗಾಗಲೇ ದೊಡ್ಡ ಸಂಚಲನ ಮೂಡಿಸಿವೆ. ಅದನ್ನು ಗಮನಿಸಿದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ವಿಜಯ್​ ದೇವರಕೊಂಡ ಅವರ ವೃತ್ತಿಜೀವನಕ್ಕೆ ಈ ಚಿತ್ರ ಭಾರಿ ಮೈಲೇಜ್​ ನೀಡಲಿದೆ ಎಂದು ಅಂದಾಜಿಸಲಾಗುತ್ತಿದೆ.

Published On - 6:30 am, Fri, 19 August 22

Follow Us
TV9 Web
TV9 Web

TV9 Kannada

Read More
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್
ಮೈಸೂರಿನಲ್ಲಿ ಟಿಟಿ ವಾಹನದ ಮೇಲೆ ಬಿದ್ದ ದೀಪಾಲಂಕಾರದ ಕಟೌಟ್