ಮಹೇಶ್ ಬಾಬು ತಲೆಯ ಮೇಲಿರೋದು ನಿಜವಾದ ಕೂದಲಲ್ಲ ಅನ್ನೋ ವಿಚಾರ ನಿಮಗೆ ಗೊತ್ತೇ?
ಟಾಲಿವುಡ್ನ ಸ್ಟಾರ್ ನಟ ಎನಿಸಿಕೊಂಡಿರುವ ಮಹೇಶ್ ಬಾಬು ಅವರಿಗೆ ಇಂದು (ಆಗಸ್ಟ್ 9) ಹುಟ್ಟಿದ ದಿನ. ಟಾಲಿವುಡ್ನಲ್ಲಿ ಅವರು ಪ್ರಿನ್ಸ್ ಎಂದು ಫೇಮಸ್ ಆಗಿದ್ದಾರೆ. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರದ್ದು ನಿಜವಾದ ಕೂದಲೋ ಅಥವಾ ಫೇಕ್ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಮಹೇಶ್ ಬಾಬು ಅವರಿಗೆ ಈಗ 49 ವರ್ಷ. ಅವರು ಜನಿಸಿದ್ದು 1975ರಲ್ಲಿ. ಈಗಲೂ ಮಹೇಶ್ ಬಾಬು ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಅವರ ಕೂದಲು ಸದಾ ಗಮನ ಸೆಳೆಯುತ್ತದೆ. ಪ್ರತಿ ಚಿತ್ರಕ್ಕೆ ಅವರು ಭಿನ್ನ ಗೆಟಪ್ ತಾಳುತ್ತಾರೆ. ಅವರದ್ದು ನಿಜವಾದ ಕೂದಲೋ ಅಥವಾ ಫೇಕ್ ಕೂದಲೋ ಎನ್ನುವ ಬಗ್ಗೆ ಚರ್ಚೆಗಳು ಮೊದಲಿನಿಂದಲೂ ಇವೆ. ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.
ಮಹೇಶ್ ಬಾಬು ಅವರ ನಟನೆಯ ‘ಪೋಕಿರಿ’ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರು ಚಿತ್ರದಿಂದ ಚಿತ್ರಕ್ಕೆ ಬೇರೆ ಬೇರೆ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಂಡರು. ಮಹೇಶ್ ಬಾಬು ಅವರು ಇತ್ತೀಚೆಗೆ ಮುಕೇಶ್ ಅಂಬಾನಿ ಮನೆಯ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಉದ್ದ ಕೂದಲು ಬಿಟ್ಟಿದ್ದು ಸಾಕಷ್ಟು ಹೈಲೈಟ್ ಆಯಿತು. ಇದು ಅವರ ಮುಂದಿನ ಚಿತ್ರದ ಲುಕ್ ಎನ್ನಲಾಗಿದೆ.
ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ತಲೆಯಲ್ಲಿ ಕೂದಲು ಇರಲಿಲ್ಲ. ಮಹೇಶ್ ಬಾಬು ಸಹೋದರ ರಮೇಶ್ ಬಾಬು ತಲೆಯಲ್ಲೂ ಕೂದಲು ಇಲ್ಲ. ಅವರ ಕುಟುಂಬದಲ್ಲೇ ಕೂದಲು ಉದುರುವಿಕೆಯ ಸಮಸ್ಯೆ ಇದೆ. ಹೀಗಿರುವಾಗ ಮಹೇಶ್ ಬಾಬುಗೆ ಮಾತ್ರ ಇಷ್ಟು ಉದ್ದ ಕೂದಲು ಇರೋಕೆ ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದರು.
ಮಹೇಶ್ ಬಾಬು ಅವರು ವಿಗ್ ಹಾಕುತ್ತಾರಾ? ಇಲ್ಲ. ಮಹೇಶ್ ಬಾಬು ಆಗಾಗ ವಿದೇಶಕ್ಕೆ ತೆರಳುತ್ತಾರೆ. ಈ ವೇಳೆ ಅವರು ವೈದ್ಯರ ಮೊರೆ ಹೋಗುತ್ತಾರೆ. ಮಹೇಶ್ ಬಾಬು ಅವರ ಮೇಕಪ್ ಆರ್ಟಿಸ್ಟ್ ರಿವೀಲ್ ಮಾಡಿದ್ದು ಏನೆಂದರೆ ಕ್ಯೂ 6 ತಂತ್ರಜ್ಞಾನ ಬಳಕೆ ಮಾಡಿ ಅವರು ಕೂದಲ ಕಾಣುವಂತೆ ಮಾಡಿದ್ದಾರೆ. ಈ ತಂತ್ರಜ್ಞಾನದಿಂದ ಕೂದಲ ಪ್ಯಾಚ್ಗಳನ್ನು ತಲೆಯ ಮೇಲೆ ಫಿಕ್ಸ್ ಮಾಡಲಾಗುತ್ತದೆ. ಇದು ನಿಜವಾದ ಕೂದಲಂತೆ ಕಾಣುತ್ತದೆ.
ಮಹೇಶ್ ಬಾಬು ಅವರ ತಂದೆ ಹಾಗೂ ತಾಯಿ 2022ರಲ್ಲಿ ನಿಧನ ಹೊಂದಿದರು. ಆ ಸಂದರ್ಭದಲ್ಲಿ ಅವರು ತಲೆಬೋಳಿಸಿಕೊಂಡಿರಲಿಲ್ಲ. ಅವರು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಮತ್ತೊಂದು ಕಾರಣ ಎಂದರೆ ಅವರ ಕೂದಲು ಸಂಪೂರ್ಣವಾಗಿ ನೈಜವಾದುದ್ದು ಅಲ್ಲ. ಈ ಕಾರಣಕ್ಕೆ ಅವರು ತಲೆ ಬೋಳಿಸಿಕೊಂಡಿಲ್ಲ. ಸದ್ಯ ಕ್ಯೂ 6 ತಂತ್ರಜ್ಞಾನದಿಂದ ಅವರ ತಲೆಯಮೇಲೆ ಇರುವ ಕೂದಲು ಸಂಪೂರ್ಣವಾಗಿ ಸಹಜವಾದ ರೀತಿ ಕಾಣುತ್ತದೆ.
ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಸಿನಿಮಾದಲ್ಲಿ ಚಿಯಾನ್ ವಿಕ್ರಮ್? ಸುಳಿವು ಕೊಟ್ಟ ನಟ
ಈಗ ಅವರು ರಾಜಮೌಳಿ ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದಾರೆ. ಅವರ ಹೇರ್ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋಗಳು ವೈರಲ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.