ಮಹೇಶ್​ ಬಾಬು ಜನ್ಮದಿನಕ್ಕೂ ರಾಜಮೌಳಿ ಕೊಡಲಿಲ್ಲ SSMB 29 ಅಪ್​ಡೇಟ್​

ಮಹೇಶ್​ ಬಾಬು ಮತ್ತು ರಾಜಮೌಳಿ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಸಿನಿಮಾಗೆ ಲೊಕೇಷನ್​ ಹುಡುಕಾಟ ನಡೆದಿದೆ. ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುವ ಸಾಧ್ಯತೆ ಇದೆ. ಇಂದು (ಆ.9) ಮಹೇಶ್​ ಬಾಬು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯ ನಡುವೆ ಒಂದು ಬೇಸರ ಏನೆಂದರೆ, ‘SSMB 29’ ತಂಡದಿಂದ ಒಂದು ಪೋಸ್ಟರ್​ ಕೂಡ ಹೊರಬಂದಿಲ್ಲ.

ಮಹೇಶ್​ ಬಾಬು ಜನ್ಮದಿನಕ್ಕೂ ರಾಜಮೌಳಿ ಕೊಡಲಿಲ್ಲ SSMB 29 ಅಪ್​ಡೇಟ್​
ಮಹೇಶ್​ ಬಾಬು, ರಾಜಮೌಳಿ
Follow us
ಮದನ್​ ಕುಮಾರ್​
|

Updated on: Aug 09, 2024 | 9:51 PM

ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅವರು ಇಂದು (ಆಗಸ್ಟ್​ 9) ಜನ್ಮದಿನ ಆಚರಿಸಿಕೊಂಡಿದ್ದಾರೆ. ಸ್ಟಾರ್​ ನಟರ ಹುಟ್ಟುಹಬ್ಬದ ದಿನ ಹೊಸ ಘೋಷಣೆಗಳನ್ನು ಮಾಡಲಾಗುತ್ತದೆ. ಸಿನಿಮಾಗಳ ಬಗ್ಗೆ ಅಪ್​ಡೇಟ್​ ಸಿಗುತ್ತದೆ ಎಂದು ಫ್ಯಾನ್ಸ್​ ಕಾದಿರುತ್ತಾರೆ. ಇಂದು ಮಹೇಶ್​ ಬಾಬು ಅವರ ಅಭಿಮಾನಿಗಳಿಗೆ ನಿರ್ದೇಶಕ ರಾಜಮೌಳಿ ಕಡೆಯಿಂದ ಏನಾದರೂ ಸಿಹಿ ಸುದ್ದಿ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರಿಂದ ‘SSMB 29’ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ. ಆದ್ದರಿಂದ ಫ್ಯಾನ್ಸ್ ಇನ್ನಷ್ಟು ದಿನ ಕಾಯುವುದು ಅನಿವಾರ್ಯ ಆಗಿದೆ.

ಮಹೇಶ್​ ಬಾಬು ನಟನೆಯ 29ನೇ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡಲಿದ್ದಾರೆ. ಶೀರ್ಷಿಕೆ ಬಹಿರಂಗ ಆಗದ ಈ ಸಿನಿಮಾವನ್ನು ಸದ್ಯಕ್ಕೆ ‘SSMB 29’ ಎಂದು ಕರೆಯಲಾಗುತ್ತಿದೆ. ಮಹೇಶ್​ ಬಾಬು ಅವರ ಜನ್ಮದಿನದ ಪ್ರಯುಕ್ತ ಆ ಚಿತ್ರದ ಟೈಟಲ್​ ಅನಾವರಣ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಆ ಊಹೆ ಸುಳ್ಳಾಗಿದೆ. ಟೈಟಲ್​ ಏನು ಎಂಬುದು ಗೊತ್ತಾಗಲು ಇನ್ನಷ್ಟು ಸಮಯ ಹಿಡಿಯಲಿದೆ.

ರಾಜಮೌಳಿ ಅವರು ಯಾವುದೇ ಸಿನಿಮಾ ಮಾಡಿದರೂ ಅದಕ್ಕೆ ಸಾಕಷ್ಟು ಟೈಮ್​ ತೆಗೆದುಕೊಳ್ಳುತ್ತಾರೆ. ಸ್ಕ್ರಿಪ್ಟ್​ ಬರವಣಿಗೆ, ಶೂಟಿಂಗ್​, ಪೋಸ್ಟ್​ ಪ್ರೊಡಕ್ಷನ್​ ಹೀಗೆ ಎಲ್ಲ ಕೆಲಸಗಳನ್ನೂ ಅವರು ಅಚ್ಚುಕಟ್ಟಾಗಿ ಮಾಡುತ್ತಾರೆ. ಈಗ ಅವರ ಸಂಪೂರ್ಣ ಗಮನ SSMB 29 ಸಿನಿಮಾ ಮೇಲಿದೆ. ಮಹೇಶ್​ ಬಾಬು ಕೂಡ ಈ ಸಿನಿಮಾಗಾಗಿ ಹೆಚ್ಚು ಸಮಯ ಮೀಸಲಿಡಬೇಕಿದೆ. ಇದರ ನಡುವೆ ಅವರು ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುವಂತಿಲ್ಲ.

ಇದನ್ನೂ ಓದಿ: Modern Masters: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಹೊಸ ಸಾಕ್ಷ್ಯಚಿತ್ರ

ಕೆಲವೇ ದಿನಗಳ ಹಿಂದೆ ಒಂದು ಗಾಸಿಪ್​ ಕೇಳಿಬಂದಿತ್ತು. ಮಹೇಶ್​ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್​ನ ಸಿನಿಮಾಗೆ ‘ಗೋಲ್ಡ್​’ ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಗುಸುಗುಸು ಹಬ್ಬಿತ್ತು. ಮಹೇಶ್​ ಬಾಬು ಅವರ ಜನ್ಮದಿನದ ಸಂಭ್ರಮದಲ್ಲಿ ಈ ಟೈಟಲ್​ ಅನಾವರಣ ಆಗಲಿದೆ ಎಂದು ಬಹುತೇಕರು ಊಹಿಸಿದ್ದರು. ಆದರೆ ಆ ರೀತಿ ಆಗಿಲ್ಲ. ಹಾಗಾಗಿ ಈ ಮಾಹಿತಿ ನಿಜವಲ್ಲ ಎಂಬ ನಿರ್ಧಾರಕ್ಕೆ ಅಭಿಮಾನಿಗಳು ಬಂದಿದ್ದಾರೆ. ಆದಷ್ಟು ಬೇಗ ಟೈಟಲ್​ ಬಹಿರಂಗ ಆಗಲಿದೆ ಎಂದು ಫ್ಯಾನ್ಸ್​ ಆಶಿಸಿದ್ದಾರೆ. ಈ ಸಿನಿಮಾ ಸಲುವಾಗಿ ಮಹೇಶ್ ಬಾಬು ಅವರು ಸಾಕಷ್ಟು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಅವರ ಗೆಟಪ್​ ಬದಲಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.