ಮಾಳವಿಕಾ ಮೆನನ್ ವಿಡಿಯೋ ವೈರಲ್; ಒಳ ಉಡುಪು ಹಾಕಿಲ್ಲ ಎಂದವರಿಗೆ ನಟಿ ಕೊಟ್ರು ಉತ್ತರ
Malavika Menon: ಇತ್ತೀಚೆಗೆ ನಟಿ ಹಳದಿ ಬಣ್ಣದ ಡ್ರೆಸ್ ಹಾಕಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಇದು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿತ್ತು.

ಮಲಯಾಳಂ ನಟಿ ಮಾಳವಿಕಾ ಮೆನನ್ (Malavika Menon) ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಹಲವು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ ಮಾಳವಿಕಾ ಮೆನನ್. ಈ ವರ್ಷ ಅವರ ನಟನೆಯ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಇತ್ತೀಚೆಗೆ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಮಾಳವಿಕ ಒಳ ಉಡುಗೆ ಧರಿಸದ ರೀತಿ ಕಾಣುತ್ತಿತ್ತು. ಇದನ್ನು ಅನೇಕರು ಟೀಕೆ ಮಾಡಿದ್ದರು. ಇದಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಮಾಳವಿಕಾ ಮೆನನ್ ಅವರು 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಮಲಯಾಳಂನ ಹಲವು ಸಿನಿಮಾಗಳಲ್ಲಿ ಮಾಳವಿಕಾ ಬಣ್ಣ ಹಚ್ಚಿದ್ದಾರೆ. ಇದರ ಜತೆಗೆ ಅಲ್ಲೊಂದು ಇಲ್ಲೊಂದು ತಮಿಳು ಸಿನಿಮಾ ಕೂಡ ಮಾಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಮಾರುಕಟ್ಟೆ ಸೃಷ್ಟಿ ಆಗಿರುವುದು ಮಾಲಿವುಡ್ನಲ್ಲಿ. ಮಾಳವಿಕಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅವರನ್ನು 10 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಹಳದಿ ಬಣ್ಣದ ಡ್ರೆಸ್ ಹಾಕಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಇದು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿತ್ತು.
ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಮಾಳವಿಕಾ ಒಳ ಉಡುಪು ಹಾಕೇ ಇಲ್ಲ ಎಂಬ ರೀತಿಯಲ್ಲಿ ಕಂಡಿದ್ದೇ ವಿಡಿಯೋ ವೈರಲ್ ಆಗಲು ಕಾರಣ. ಇದಕ್ಕೆ ಸಂದರ್ಶನದಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಒಳಗೆ ಬಟ್ಟೆ ಇತ್ತು ಎಂಬುದನ್ನು ಅವರು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: ‘ಮೇಡಂ ಕೆಳಗಿನ ಬಟ್ಟೆ ಎಲ್ಲಿ?’ ಹಾಟ್ ಫೋಟೋಶೂಟ್ ಮಾಡಿಸಿ ಟ್ರೋಲ್ ಆದ ನಟಿ ಅನನ್ಯಾ ಪಾಂಡೆ
‘ನಾನು ಡ್ರೆಸ್ ಒಳಗೆ ಏನೂ ಹಾಕಿಕೊಂಡಿಲ್ಲ ಎಂಬ ರೀತಿಯಲ್ಲಿ ಎಲ್ಲೆಡೆ ಪ್ರಚಾರವಾಗುತ್ತಿದೆ. ಅದು ಜೂಮ್ ಮಾಡಿ, ಕ್ಲೋಸಪ್ನಲ್ಲಿ ಜನ ನೋಡಿ ಹಾಗೆ ಹೇಳುತ್ತಿದ್ದಾರೆ. ಅದು ಲೈಟ್ನಿಂದಾಗಿ ಹಾಗೆ ಕಾಣುತ್ತಿದೆ. ಇದಕ್ಕಿಂತ ಮುಂಚೆ ನಾನು ಅದೇ ಉಡುಗೆಯಲ್ಲಿ ಒಂದು ಫೋಟೊ ಹಾಕಿದ್ದೆ. ಅದರಲ್ಲಿ ಸ್ಟ್ರಾಪ್ ಕಾಣುತ್ತದೆ’ ಎಂದು ಹೇಳಿದ್ದಾರೆ. ಈ ಮೂಲಕ ವೈರಲ್ ಆದ ವಿಡಿಯೋಗೆ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಅವರು ಸ್ಪಷ್ಟನೆ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಟಿಯ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




