ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಟೀಸರ್ ಬಿಡುಗಡೆ ಮಾಡಿದ ಸಚಿವ ಹೆಚ್ಕೆ ಪಾಟೀಲ
Mr and Mrs Ramachari: ಯಶ್ ಅಭಿಮಾನಿಯೊಬ್ಬನ ಕತೆಯನ್ನು ಒಳಗೊಂಡಿರುವ ಸಿನಿಮಾ ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಟೀಸರ್ ಅನ್ನು ರಾಜ್ಯ ಸರ್ಕಾರದ ಸಚಿವ ಎಚ್ಕೆ ಪಾಟೀಲ್ ಅವರು ಬಿಡುಗಡೆ ಮಾಡಿದ್ದಾರೆ. ಸಿನಿಮಾದ ನಿರ್ದೇಶಕ, ನಿರ್ಮಾಣದ ಜೊತೆಗೆ ನಾಯಕ ನಟನಾಗಿಯೂ ನಟಿಸಿದ್ದಾರೆ ಹೊನ್ನರಾಜ್.

ಯಶ್ ನಟನೆಯ ‘ರಾಜಾಹುಲಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹೊನ್ನರಾಜ್ ಅವರು ಈಗ ಅದೇ ಹೆಸರನ್ನೇ ಇರಿಸಿಕೊಂಡು ಮೊದಲ ಬಾರಿ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಇಳಿಸಿದ್ದು, ಸಿನಿಮಾದ ಟೀಸರ್ ಅನ್ನು ರಾಜ್ಯ ಸರ್ಕಾರದ ಸಚಿವ ಎಚ್ಕೆ ಪಾಟೀಲರು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿರುವುದು ವಿಶೇಷ. ಹಾಗೆಂದು ಯಶ್ ನಟನೆಯ ‘ರಾಜಾಹುಲಿ’ಗೂ ಈ ‘ಮಿಸ್ಟರ್ ಆಂಡ್ ಮಿಸಸ್ ರಾಜಾಹುಲಿ’ಗೂ ಯಾವುದೇ ಸಂಬಂಧ ಇಲ್ಲ.
ಸೇವಾ ಮನೋಭಾವ ಹೊಂದಿರುವ ಹಳ್ಳಿ ಹುಡುಗನ ಕತೆಯನ್ನು ‘ಮಿಸ್ಟರ್ ಆಂಡ್ ಮಿಸಸ್ ರಾಜಾಹುಲಿ’ ಸಿನಿಮಾ ಒಳಗೊಂಡಿದೆ. ಸಿನಿಮಾ ನಿರ್ದೇಶನ ಮತ್ತು ನಿರ್ಮಾಣ ಜವಾಬ್ದಾರಿ ಹೊತ್ತಿರುವ ಹೊನ್ನರಾಜ್ ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣವೆಲ್ಲ ಮುಗಿದಿದ್ದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಹೊನ್ನರಾಜು ಅವರ ಹುಟ್ಟುಹಬ್ಬದಂದು ಸಿನಿಮಾದ ಟೀಸರ್ ಬಿಡುಗಡೆ ನಡೆದಿದ್ದು, ಸಚಿವ ಎಚ್ಕೆ ಪಾಟೀಲರು ಟೀಸರ್ ಬಿಡುಗಡೆ ಮಾಡಿದ್ದಾರೆ.
ನಾಯಕ ಹೊನ್ನರಾಜ್ ಮಾತನಾಡಿ, ‘ಈ ಸಿನಿಮಾದ ಕತೆಯನ್ನು ಮೊದಲು ಎಚ್ಕೆ ಪಾಟೀಲರಿಗೆ ಹೇಳಿದೆ. ಅವರು ನೀಡಿದ ಸಹಕಾರದಿಂದ ಸಿನಿಮಾ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ನಿಜ ಘಟನೆ ಆಧರಿಸಿದ ಕೌಟುಂಬಿಕ ಕತೆ ಇದಾಗಿದೆ. ಸಿನಿಮಾದಲ್ಲಿ ಹಾಸ್ಯ ಹಾಗೂ ಭಾವನಾತ್ಮಕ ಅಂಶಗಳು ಇವೆ. ಚಿತ್ರದಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಸಿನಿಮಾದ ಕತೆ. ಯಶ್ ಅವರಿಗೂ ಚಿತ್ರದ ಬಗ್ಗೆ ಹೇಳಿದೆ, ಒಳ್ಳೆದಾಗಲಿ ಎಂದು ಹಾರೈಸಿದರು. ಇಲ್ಲಿ ನಾನೊಬ್ಬನೇ ಪ್ರೊಡ್ಯೂಸರ್ ಅಲ್ಲ. ನನ್ನ ಹಿಂದೆ ನೂರಾರು ಜನ ಕೈಜೋಡಿಸಿದ್ದಾರೆ’ ಎಂದರು.
ಇದನ್ನೂ ಓದಿ:ರಾಧಿಕಾನ ಕೇರ್ ಮಾಡೋ ರೀತಿಗೆ ಯಶ್ನ ಜಂಟಲ್ಮನ್ ಎಂದು ಕರೆದ ಬಾಲಿವುಡ್ ಮಂದಿ
‘ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಪ್ರದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ನಾಯಕಿಯಾಗಿ ಶೃತಿ ಬಬಿತ ನಟಿಸಿದ್ದಾರೆ. ಅವರದ್ದು ಬಜಾರಿಯ ಪಾತ್ರ. ಸಿನಿಮಾಕ್ಕೆ ವಿನು ಅವರು ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ